Radhika Pandit: ರಾಕಿಂಗ್​ ಸ್ಟಾರ್​ ಯಶ್ ಬಗ್ಗೆ ವಿಶೇಷ ಮಾತುಗಳನ್ನು ಆಡಿದ ರಾಧಿಕಾ ಪಂಡಿತ್​

ಯಶ್​ ಈಗ ಎರಡು ಮಕ್ಕಳ ತಂದೆ. ಅವರು ತಂದೆಯಾಗಿ ಎಲ್ಲಾ ಜವಾಬ್ದಾರಿಗಳನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಮಗು ಜನಿಸುವ ಸಂದರ್ಭದಲ್ಲಿ ಯಶ್​ ಶೂಟಿಂಗ್​ಗೆ ಬ್ರೇಕ್​ ನೀಡಿ ಕುಟುಂಬದ ಜತೆ ಸಮಯ ಕಳೆದಿದ್ದರು.

 Radhika Pandit: ರಾಕಿಂಗ್​ ಸ್ಟಾರ್​ ಯಶ್ ಬಗ್ಗೆ ವಿಶೇಷ ಮಾತುಗಳನ್ನು ಆಡಿದ ರಾಧಿಕಾ ಪಂಡಿತ್​
ಯಶ್​ - ರಾಧಿಕಾ ಪಂಡಿತ್​ ಕುಟುಂಬ

Updated on: Jun 20, 2021 | 5:47 PM

ಇಂದು ಫಾದರ್ಸ್​ ಡೇ. ಈ ವಿಶೇಷ ದಿನದಂದು ಬಹುತೇಕ ಸೆಲೆಬ್ರಿಟಿಗಳು ತಮ್ಮ ತಂದೆಯನ್ನು ನೆನಪಿಸಿಕೊಂಡಿದ್ದಾರೆ. ಅದೇ ರೀತಿ ರಾಧಿಕಾ ಪಂಡಿತ್​ ತಮ್ಮ ಪತಿ ಬಗ್ಗೆ ವಿಶೇಷ ಮಾತುಗಳನ್ನು ಆಡಿದ್ದಾರೆ. ಅಷ್ಟಕ್ಕೂ ಫಾದರ್ಸ್​ ಡೇ ದಿನ ಪತಿಯ ಬಗ್ಗೆ ರಾಧಿಕಾ ಬರೆದುಕೊಂಡಿದ್ದೇಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಯಶ್​ ಈಗ ಎರಡು ಮಕ್ಕಳ ತಂದೆ. ಅವರು ತಂದೆಯಾಗಿ ಎಲ್ಲಾ ಜವಾಬ್ದಾರಿಗಳನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಮಗು ಜನಿಸುವ ಸಂದರ್ಭದಲ್ಲಿ ಯಶ್​ ಶೂಟಿಂಗ್​ಗೆ ಬ್ರೇಕ್​ ನೀಡಿ ಕುಟುಂಬದ ಜತೆ ಸಮಯ ಕಳೆದಿದ್ದರು. ಇನ್ನು, ಲಾಕ್​ಡೌನ್​ ಸಂದರ್ಭದಲ್ಲಿ ಯಶ್​ ಸಂಪೂರ್ಣ ಸಮಯವನ್ನು ಮಕ್ಕಳು ಹಾಗೂ ಪತ್ನಿ ರಾಧಿಕಾ ಜತೆ ಕಳೆದಿದ್ದಾರೆ. ವೃತ್ತಿ ಜೀವನದ ಜತೆಜತೆಗೆ ಕುಟುಂಬಕ್ಕೂ ಯಶ್​ ಸಾಕಷ್ಟು ಪ್ರಾಮುಖ್ಯತೆ ನೀಡುತ್ತಿದ್ದಾರೆ.

ಇಂದು ವಿಶ್ವ ತಂದೆಯರ ದಿನ. ಈ ವಿಶೇಷ ದಿನದಂದು ಯಶ್​ ಮಕ್ಕಳ ಜತೆ ಇರುವ ಫೋಟೋ ಹಂಚಿಕೊಂಡಿರುವ ರಾಧಿಕಾ, ‘ಯಶ್​ ಉತ್ತಮ ಬಾಯ್​ಫ್ರೆಂಡ್​, ಅದಕ್ಕಿಂತ ಹೆಚ್ಚಾಗಿ ಉತ್ತಮ ಗಂಡ ಕೂಡ ಹೌದು. ಆದರೆ, ಯಶ್​ ಬೆಸ್ಟ್​ ವರ್ಷನ್​ ಕಂಡಿದ್ದು ತಂದೆಯಾಗಿ. ಲವ್​ ಯು. ಅದ್ಭುತ ತಂದೆಯರಿಗೆ ಫಾದರ್ಸ್​ ಡೇ ಶುಭಾಶಯಗಳು’ ಎಂದಿದ್ದಾರೆ.

ಇಂದು ಸಾಕಷ್ಟು ಸೆಲೆಬ್ರಿಟಿಗಳು ತಂದೆಯನ್ನು ನೆನೆದಿದ್ದಾರೆ. ನಟ ಜಗ್ಗೇಶ್​, ಪುನೀತ್​ ರಾಜ್​ಕುಮಾರ್, ಪ್ರಣಿತಾ, ಸೃಜನ್​ ಲೋಕೇಶ್​, ರಕ್ಷಿತಾ, ಸುಧಾರಾಣಿ ಸೇರಿ ಹಲವು ಸೆಲೆಬ್ರಿಟಿಗಳು ತಮ್ಮ ತಂದೆಯೇ ತನಗೆ ಮಾದರಿ ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Radhika Pandit: ಮಾನ್ಸೂನ್​ ಆರಂಭದ ಬೆನ್ನಲ್ಲೇ ಹಳೆ ನೆನಪು ಹಂಚಿಕೊಂಡ ರಾಧಿಕಾ ಪಂಡಿತ್

ಅಭಿಮಾನಿಗಳ ಮನಗೆದ್ದ ರಾಧಿಕಾ ಪಂಡಿತ್​ ಮಗು ಯಥರ್ವ್​ ಯಶ್​ ಮುದ್ದಾದ ನಗು; ಇಲ್ಲಿದೆ ವಿಡಿಯೋ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us