ಅಭಿಮಾನಿಗಳ ಮನಗೆದ್ದ ರಾಧಿಕಾ ಪಂಡಿತ್​ ಮಗು ಯಥರ್ವ್​ ಯಶ್​ ಮುದ್ದಾದ ನಗು; ಇಲ್ಲಿದೆ ವಿಡಿಯೋ

Yatharv - Radhika Pandit: ಯಶ್​ ಹಾಗೂ ರಾಧಿಕಾ ದಂಪತಿಗೆ ಆಯ್ರಾ ಹಾಗೂ ಯಥರ್ವ್​ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಸದಾ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿರುವ ರಾಧಿಕಾ ಈಗಾಗಲೇ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಅಭಿಮಾನಿಗಳ ಮನಗೆದ್ದ ರಾಧಿಕಾ ಪಂಡಿತ್​ ಮಗು ಯಥರ್ವ್​ ಯಶ್​ ಮುದ್ದಾದ ನಗು; ಇಲ್ಲಿದೆ ವಿಡಿಯೋ
ಮಗುವಿನ ಜತೆ ರಾಧಿಕಾ ಪಂಡಿತ್

ಸೆಲಬ್ರಿಟಿ ಮಕ್ಕಳು ಎಂದರೆ ಅವರ ಬಗ್ಗೆ ಅಭಿಮಾನಿಗಳಲ್ಲಿ ಒಂದು ಕ್ರೇಜ್​ ಇದ್ದೇ ಇರುತ್ತದೆ. ಮಗುವಿನ ಮೊದಲ ಫೋಟೋದಿಂದ ಹಿಡಿದು, ಅವರು ನಿತ್ಯ ಏನು ಮಾಡುತ್ತಾರೆ? ಹೇಗೆ ಆಟ ಆಡುತ್ತಾರೆ ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳೋಕೆ ಅಭಿಮಾನಿಗಳು ಕಾತುರರಾಗಿರುತ್ತಾರೆ. ಅದೇ ರೀತಿ ಸ್ಯಾಂಡಲ್​ವುಡ್​ ಸ್ಟಾರ್​ ದಂಪತಿ ಯಶ್​-ರಾಧಿಕಾ ಪಂಡಿತ್​ ಮಕ್ಕಳ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇದೆ. ಅಭಿಮಾನಿಗಳಿಗೋಸ್ಕರವೇ ರಾಧಿಕಾ ಪಂಡಿತ್​ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಈಗ ರಾಧಿಕಾ ಹಂಚಿಕೊಂಡಿರುವ ಹೊಸ ವಿಡಿಯೋ ಒಂದು ಸಾಕಷ್ಟು ವೈರಲ್​ ಆಗಿದೆ.

ಯಶ್​ ಹಾಗೂ ರಾಧಿಕಾ ದಂಪತಿಗೆ ಆಯ್ರಾ ಹಾಗೂ ಯಥರ್ವ್​ ಹೆಸರಿನ ಇಬ್ಬರು ಮಕ್ಕಳಿದ್ದಾರೆ. ಸದಾ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಿರುವ ರಾಧಿಕಾ ಈಗಾಗಲೇ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಕೂಡ ಸಖತ್​ ಖುಷಿಪಟ್ಟಿದ್ದಿದೆ. ಈಗ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು ಸಾಕಷ್ಟು ವೈರಲ್​ ಆಗುತ್ತಿದೆ.

ಯಥರ್ವ್​​ಗೆ ರಾಧಿಕಾ ಪಂಡಿತ್​ ಉಗುರು ತೆಗೆಯುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಪ್ರತಿ ಬೆರಳಿನ ಉಗುರು ಕತ್ತರಿಸಿದಾಗೆಲ್ಲ ಯಥರ್ವ್​ ಸಂತಸದಿಂದ ನಕ್ಕಿದ್ದಾನೆ. ಈ ಮುದ್ದಾದ ವಿಡಿಯೋ ನೋಡಿದ ಅಭಿಮಾನಿಗಳು ಸಾಕಷ್ಟು ಖುಷಿಪಟ್ಟಿದ್ದಾರೆ. ಅಲ್ಲದೆ, ಈ ವಿಡಿಯೋ ತುಂಬಾನೇ ಕ್ಯೂಟ್​ ಆಗಿದೆ ಎಂದಿದ್ದಾರೆ.

 

View this post on Instagram

 

A post shared by Radhika Pandit (@iamradhikapandit)

ಇತ್ತೀಚೆಗೆ ರಾಧಿಕಾ ಅಭಿಮಾನಿಗಳಲ್ಲಿ ಭರವಸೆ ಮೂಡುವ ರೀತಿಯಲ್ಲಿ ಪೋಸ್ಟ್​ ಒಂದನ್ನು ಹಾಕಿದ್ದರು. ‘ಇದು ಕಷ್ಟದ ಸಮಯ. ನಾವೆಲ್ಲರೂ ತುಂಬ ನೋವು ಅನುಭವಿಸಿದ್ದೇವೆ. ಆತ್ಮೀಯರನ್ನು ಕಳೆದುಕೊಂಡಿದ್ದೇವೆ. ನಮ್ಮೆಲ್ಲರಿಗೂ ಭಯ, ಹತಾಶೆ ಕಾಡುತ್ತಿದೆ. ನಾಳೆ ಏನಾಗುತ್ತದೋ ಎಂಬ ಆತಂಕ ಇದೆ ಎಂಬುದು ನನಗೆ ತಿಳಿದಿದೆ. ಆದರೆ ದಯವಿಟ್ಟು ಒಂದು ಮಾತನ್ನು ಪ್ರತಿ ದಿನ ನಿಮಗೆ ನೀವೇ ಹೇಳಿಕೊಳ್ಳಿ. ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ನಾವು ಭರವಸೆ ಇಡುತ್ತೇವೆ, ನಂಬಿಕೆ ಇಡುತ್ತೇವೆ, ಜೊತೆಯಾಗಿ ಹೋರಾಡುತ್ತೇವೆ. ಎಲ್ಲರೂ ಜೊತೆಯಾಗಿ ನಿಂತು ಈ ಕಷ್ಟದಿಂದ ಹೊರಬರುತ್ತೇವೆ’ ಎಂದು ರಾಧಿಕಾ ಪಂಡಿತ್​ ಬರೆದುಕೊಂಡಿದ್ದರು.

ಇದನ್ನೂ ಓದಿ: Radhika Pandit: ಯಶ್​ ಕೋಟ್ಯಂತರ ರೂಪಾಯಿ ಹಂಚಿದ ಬೆನ್ನಲ್ಲೇ ರಾಧಿಕಾ ಪಂಡಿತ್​ ಕಡೆಯಿಂದ ಬಂತು ಭರವಸೆಯ ಮಾತು