AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಪ್ತಪದಿ ತುಳಿದ ಬಹದ್ದೂರ್​, ಭರ್ಜರಿ ನಿರ್ದೇಶಕ ಚೇತನ್​ ಕುಮಾರ್​; ಕೈ ಹಿಡಿದ ಹುಡುಗಿ ಯಾರು?

Chethan Kumar Marriage: ಲಾಕ್​ಡೌನ್​ ಇರುವುದರಿಂದ ಮೈಸೂರಿನಲ್ಲಿ ಸರಳವಾಗಿ ವಿವಾಹ ಸಮಾರಂಭ ಮಾಡಲಾಗಿದೆ. ಮದುವೆ ಫೋಟೋಗಳು ಕೂಡ ಲಭ್ಯವಾಗಿದ್ದು ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಚೇತನ್​-ಮಾನಸಾ ದಂಪತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಸಪ್ತಪದಿ ತುಳಿದ ಬಹದ್ದೂರ್​, ಭರ್ಜರಿ ನಿರ್ದೇಶಕ ಚೇತನ್​ ಕುಮಾರ್​; ಕೈ ಹಿಡಿದ ಹುಡುಗಿ ಯಾರು?
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೇತನ್​-ಮಾನಸಾ
ಮದನ್​ ಕುಮಾರ್​
|

Updated on:Jun 13, 2021 | 4:29 PM

Share

ಲಾಕ್​ಡೌನ್​ನಲ್ಲಿ ಅನೇಕ ಸೆಲೆಬ್ರಿಟಿಗಳು ಸಿಂಪಲ್​ ಆಗಿ ಮದುವೆ ಆಗುತ್ತಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಚೇತನ್​ ಕುಮಾರ್​ ಅವರು ಭಾನುವಾರ (ಜೂ.13) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಕಲ್ಪವೃಕ್ಷ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ಬೆಳಗ್ಗೆ ಮದುವೆ ನೆರವೇರಿದೆ. ಕೆಲವೇ ಕೆಲವು ಮಂದಿ ಮಾತ್ರ ಈ ಶುಭ ಸಮಾರಂಭಕ್ಕೆ ಸಾಕ್ಷಿ ಆಗಿದ್ದರು. ಚಿತ್ರರಂಗದ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ಪುನೀತ್​ ರಾಜ್​ಕುಮಾರ್​, ಧ್ರುವ ಸರ್ಜಾ, ಶ್ರೀಮುರಳಿ, ಉಮಾಪತಿ ಶ್ರೀನಿವಾಸ್​ ಗೌಡ, ನಿರ್ದೇಶಕ ಮಹೇಶ್​ ಕುಮಾರ್​ ಮುಂತಾದವರು ಮದುವೆಗೆ ಆಗಮಿಸಿ ನವ ಜೋಡಿಗೆ ಆಶೀರ್ವಾದ ಮಾಡಿದರು. ಲಾಕ್​ಡೌನ್​ ಕಾರಣದಿಂದ ಅಭಿಮಾನಿಗಳಿಗೆ ಆಹ್ವಾನ ಇರಲಿಲ್ಲ.

ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಚೇತನ್​ ಕುಮಾರ್​ ಅವರನ್ನು ಕೈ ಹಿಡಿದಿರುವ ಹುಡುಗಿ ಯಾರು ಎಂಬ ಕೌತುಕ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡುವುದು ಸಹಜ. ಚೇತನ್​ ಕೈ ಹಿಡಿದಿರುವ ಹುಡುಗಿ ಹೆಸರು ಮಾನಸಾ. ಇವರು ಚೇತನ್​ಗೆ ಸ್ವಂತ ಅತ್ತೆಯ ಮಗಳು ಎಂಬುದು ವಿಶೇಷ. ಬಹಳ ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮಾನಸಾ ಅವರು ಇಂಜಿನಿಯರಿಂಗ್​ ಓದಿದ್ದಾರೆ. ಪ್ರಸ್ತುತ ಅವರು ಇನ್ಫೋಸಿಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಮದುವೆ ಫೋಟೋಗಳು ಕೂಡ ಲಭ್ಯವಾಗಿದ್ದು ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಚೇತನ್​-ಮಾನಸಾ ದಂಪತಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಲಾಕ್​ಡೌನ್​ ಇರುವುದರಿಂದ ಮೈಸೂರಿನಲ್ಲಿ ಸರಳವಾಗಿ ವಿವಾಹ ಸಮಾರಂಭ ಮಾಡಲಾಗಿದೆ.

ಕೊವಿಡ್​ ಸಂಕಷ್ಟ ಕಳೆದ ಬಳಿಕ ಬೆಂಗಳೂರಿನಲ್ಲಿ ಚಿತ್ರರಂಗದವರು ಮತ್ತು ಅಭಿಮಾನಿಗಳಿಗಾಗಿ ರಿಸೆಪ್ಷನ್​ ಆಯೋಜಿಸುವ ಪ್ಲ್ಯಾನ್​ ಕೂಡ ಇದೆ.

ಮಾಸ್​ ಕಮರ್ಷಿಯಲ್​ ಅಂಶಗಳನ್ನು ಹೊಂದಿರುವ ಫ್ಯಾಮಿಲಿ ಎಂಟರ್​ಟೇನರ್​ ಸಿನಿಮಾಗಳನ್ನು ಮಾಡುವ ಮೂಲಕ ಚೇತನ್​ ಗುರುತಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಜೊತೆ ಬಹದ್ದೂರ್​, ಭರ್ಜರಿ ಸಿನಿಮಾಗಳನ್ನು ಮಾಡಿ ಗೆದ್ದ ಚೇತನ್​, ನಂತರ ಶ್ರೀಮುರಳಿ ಜೊತೆ ‘ಭರಾಟೆ’ ಚಿತ್ರ ಮಾಡಿದರು. ಸದ್ಯ ಪುನೀತ್​ ರಾಜ್​ಕುಮಾರ್​ ನಾಯಕತ್ವದ ‘ಜೇಮ್ಸ್​’ ಚಿತ್ರಕ್ಕೆ ನಿರ್ದೇಶನ ಮಾಡುವ ಹೊಣೆಯನ್ನು ಅವರು ಹೊತ್ತುಕೊಂಡಿದ್ದಾರೆ. ಹಲವಾರು ಸಿನಿಮಾಗಳಿಗೆ ಹಾಡು ಬರೆದಿರುವ ಚೇತನ್​ ಓರ್ವ ಯಶಸ್ವಿ ಗೀತರಚನಾಕಾರ ಕೂಡ ಹೌದು.

ಇದನ್ನೂ ಓದಿ:

ಎಷ್ಟು ಕೋಟಿ ಕೊಟ್ಟರೂ ಈ ಮದುಮಗಳು ಧರಿಸಿದ ಸೀರೆಗೆ ಬೆಲೆ ಕಟ್ಟೋಕಾಗಲ್ಲ; ಏನಿದರ ವಿಶೇಷ?

ಮದುವೆಯಾದ ಪ್ರಣಿತಾಗೆ ಶುಭಕೋರಿದ ಶಿಲ್ಪಾ ಶೆಟ್ಟಿ; ಇಬ್ಬರ ನಡುವೆ ಗೆಳೆತನ ಬೆಳೆದಿದ್ದು ಹೇಗೆ?

Published On - 12:03 pm, Sun, 13 June 21

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?