ಬೆಂಗಳೂರು: ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಡೆಯುತ್ತಿರುವ CCB ತನಿಖೆ ಕುರಿತು ಪ್ರತಿಕ್ರಿಯಿಸಿದ್ದಾರೆ. CCBಗೆ ಹೋಗಿ ಯಾವ ಲಿಸ್ಟ್ ಕೊಟ್ಟಿದ್ನೋ ಅದೆಲ್ಲ ಕೆಲಸಗಳು ಆಗ್ತಿದೆ. ಒಂದೊಳ್ಳೇ ಸಂದೇಶ ಹೋಗಿದೆ. ಆದರೆ, ಇಷ್ಟು ದಿನ ಆಗಿರೋ ಬೆಳವಣಿಗೆ ನನಗೆ ಖುಷಿ ತಂದು ಕೊಟ್ಟಿಲ್ಲ. ಪೋಲೀಸರ ಕೈ ಕಟ್ಟಿ ಹಾಕಿರೋ ಹಾಗೆ ಕೆಲಸ ಆಗ್ತಿದೆ ಎಂದು ಲಂಕೇಶ್ ಹೇಳಿದ್ದಾರೆ. ನಟಿಯರಷ್ಟೆ ಅಲ್ಲ. ನಟರು ಹಾಗೂ ರಾಜಕಾರಣಿಗಳ ಮಕ್ಕಳು ಸಹ ಇದ್ದಾರೆ.
‘ಇದು ಲವ್ ಜಿಹಾದ್ ಅಲ್ಲ, ವಿಷಯನ್ನು ಡೈವರ್ಟ್ ಮಾಡಬೇಡಿ’ ಒಬ್ಬ ರಾಜಕಾರಣಿ ಒತ್ತಡ ಹಾಕ್ತಿದ್ದಾರೆ ಎಂದು ಸಹ ಹೇಳಿದ್ದಾರೆ. ಇದು ಲವ್ ಜಿಹಾದ್ ಅಲ್ಲ. ದಯಮಾಡಿ ವಿಷಯನ್ನು ಡೈವರ್ಟ್ ಮಾಡೋಕೆ ಹೋಗಬೇಡಿ. ಅದಕ್ಕೆ ಕೋಮು ಬಣ್ಣ ನೀಡಬೇಡಿ. ಸರ್ಕಸ್ ಥರ ಮಾಡಬೇಡಿ ಅಂತಾ ಇಂದ್ರಜಿತ್ ಲಂಕೇಶ್ ಮನವಿ ಮಾಡಿಕೊಂಡಿದ್ದಾರೆ.
ಸಂಬರಗಿಗೆ ಇಂದ್ರಜಿತ್ ಪರೋಕ್ಷ ಟಾಂಗ್? ಈ ನಡುವೆ ಪ್ರಶಾಂತ್ ಸಂಬರಗಿಗೆ ಇಂದ್ರಜಿತ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರಾ ಅನ್ನೋ ಮಾತುಗಳು ಕೇಳಿಬಂದಿದೆ. ಹಂದಿ ನೀನು, ನಾಯಿ ನೀನು ಅಂತಾ ಒಬ್ಬರು ಹೇಳಿರೋದು ಒಂದು ಸಾರಿ. ಆದರೆ, ಅದನ್ನ ಹೇಳಿಸಿ ಕೊಂಡಿರೋರು ಹತ್ತತ್ತು ಸಾರಿ ಅದನ್ನೇ ಹೇಳ್ತಿದ್ದಾರೆ.
‘ಸರ್ಕಾರದ ಕೆಲ ಪ್ರಭಾವಿ ನಾಯಕರು ಸಹ ಕರೆ ಮಾಡಿದ್ದಾರೆ’
ಜೊತೆಗೆ, ವಿಪಕ್ಷಗಳ ಮೇಲೆ ಆರೋಪ ಮಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಸಂಬಂಧ ವಿಪಕ್ಷ ನಾಯಕರು ಕೇಳಬೇಕು. ಆದರೆ ಅವರು ಯಾರೂ ಕೇಳ್ತಿಲ್ಲ. ಹಾಗಾಗಿ, ವಿರೋದ ಪಕ್ಷಗಳ ಮೇಲೂ ನನಗೆ ಡೌಟ್ ಆಗ್ತಿದೆ. ಸರ್ಕಾರದ ಕೆಲ ಪ್ರಭಾವಿ ನಾಯಕರು ಸಹ ಕರೆ ಮಾಡಿದ್ದಾರೆ ಎಂದು ಲಂಕೇಶ್ ಆರೋಪಿಸಿದ್ದಾರೆ.
ಇದಲ್ಲದೆ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಡ್ರಗ್ಸ್ ಪ್ರಕರಣ ಸಂಬಂಧ ಆದಿತ್ಯ ಆಳ್ವಾನ ಬಂಧಿಸಿಲ್ಲ. ಆತ ರಾಜಕಾರಣಿಯ ಪುತ್ರ ಎಂಬ ಕಾರಣಕ್ಕೆ ಬಂಧಿಸಿಲ್ಲ. ಜೊತೆಗೆ, ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ನಿರ್ದೇಶಕನ ಪುತ್ರನೊಬ್ಬ ಸಹ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ. ಆತನನ್ನು ಕರೆತಂದು ವಿಚಾರಿಸಿ ಅಂತಾ ಹೇಳಿದ್ದಾರೆ.
ಸುಶಾಂತ್ ಕೇಸ್ ಸುಸೈಡ್ ಅಂತ ಹೇಳಿದ್ರು. ಇಲ್ಲೂ ಪ್ರಭಾವಿ ನಾಯಕರು ಫೋನ್ ಮಾಡಿ ಬಿಟ್ಟುಬಿಡಿ ಅಂತಿದ್ರು. ವಿರೋಧ ಪಕ್ಷಗಳು ಕೇಳಬೇಕಾದ ಪ್ರಶ್ನೆಗಳನ್ನ ಮಾಧ್ಯಮದವರು ಕೇಳ್ತಿದ್ದಾರೆ. ಡ್ರಗ್ ಮಾಫಿಯಾ ಸಣ್ಣ ವಿಷಯ ಅಲ್ಲ. ಪಾಕಿಸ್ತಾನದಿಂದ ದಾವೂದ್ನ ಕರೆಸ್ತಿನಿ ಅಂತಾ ಹೇಳೋರನ್ನ ಅರೆಸ್ಟ್ ಮಾಡಿಲ್ಲ ಎಂದು ಹೇಳಿದ್ದಾರೆ.
‘ಡ್ರಗ್ಸ್ ಪ್ರಕರಣ ಸಂಬಂಧ ಸಿಬಿಐ ತನಿಖೆಯಾಗಬೇಕು’ ರಾಜ್ಯ ಬಿಜೆಪಿ ನಾಯಕರು ಅವರನ್ನು ಅರೆಸ್ಟ್ ಮಾಡಿ. ಇವರನ್ನು ಅರೆಸ್ಟ್ ಮಾಡಿ ಎಂದು ಸುಮ್ಮನೆ ಹೇಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಯಾವುದೂ ಸರಿಯಾಗಿ ನಡೆಯುತ್ತಿಲ್ಲ. ಡ್ರಗ್ಸ್ ಪ್ರಕರಣ ಸಂಬಂಧ ಸಿಬಿಐ ತನಿಖೆಯಾಗಬೇಕು.
ಆಗ ಮಾತ್ರ ಹಲವಾರು ವಿಷಯಗಳು ಹೊರಗೆ ಬರುತ್ತವೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ್ದಾರೆ. ಜೊತೆಗೆ, ಸರಿಯಾದ ರೀತಿಯಲ್ಲಿ ತನಿಖೆ ಆದರೆ ಶವಗಳು ಕೂಡ ಎದ್ದು ಕೂರಲಿವೆ ಎಂದು ಹೇಳಿದ್ದಾರೆ.