Drugs ಜಾಲ: ತಾಜಾ ಏನು? ಇಂದ್ರಜಿತ್​ CCBಗೆ ನೀಡಿದರು ಮಹತ್ವದ ದಾಖಲೆ

| Updated By: ಸಾಧು ಶ್ರೀನಾಥ್​

Updated on: Aug 31, 2020 | 2:54 PM

[lazy-load-videos-and-sticky-control id=”8a5L4rqwcXQ”] ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್​ ಜಾಲದ ನಂಟಿರುವ ಆರೋಪವನ್ನ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿದ್ದ ಹಿನ್ನೆಲೆಯಲ್ಲಿ ಅವರನ್ನು ಇಂದು ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್​ ನೀಡಲಾಗಿತ್ತು. ಅಂತೆಯೇ, ಲಂಕೇಶ್​ ತಮ್ಮ ಕೋರಮಂಗಲದ ನಿವಾಸದಿಂದ ದಾಖಲೆಗಳ ಸಮೇತ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಹಾಜರಾದರು. ಸಿಸಿಬಿ ಕಚೇರಿಗೆ ವಿಚಾರಣೆಗೆ ಆಗಮಿಸಿದ ಇಂದ್ರಜಿತ್ ಲಂಕೇಶ್ ತಮ್ಮೊಂದಿಗೆ ಲ್ಯಾಪ್​ಟಾಪ್ ಹಾಗೂ ಫೈಲ್ ಒಂದನ್ನು ಸಹ ತಂದಿದ್ದರು. ಇಂದ್ರಜಿತ್​ ಲ್ಯಾಪ್​ಟಾಪ್​ನಲ್ಲಿ ಡ್ರಗ್ಸ್​ ಪಾರ್ಟಿಗಳ ಫೋಟೋ ಮತ್ತು ವಿಡಿಯೋಗಳಿವೆ ಎಂದು ಹೇಳಲಾಗ್ತಿದೆ. […]

Drugs ಜಾಲ: ತಾಜಾ ಏನು? ಇಂದ್ರಜಿತ್​ CCBಗೆ ನೀಡಿದರು ಮಹತ್ವದ ದಾಖಲೆ
Follow us on

[lazy-load-videos-and-sticky-control id=”8a5L4rqwcXQ”]

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್​ ಜಾಲದ ನಂಟಿರುವ ಆರೋಪವನ್ನ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಡಿದ್ದ ಹಿನ್ನೆಲೆಯಲ್ಲಿ ಅವರನ್ನು ಇಂದು ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್​ ನೀಡಲಾಗಿತ್ತು. ಅಂತೆಯೇ, ಲಂಕೇಶ್​ ತಮ್ಮ ಕೋರಮಂಗಲದ ನಿವಾಸದಿಂದ ದಾಖಲೆಗಳ ಸಮೇತ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಹಾಜರಾದರು.

ಸಿಸಿಬಿ ಕಚೇರಿಗೆ ವಿಚಾರಣೆಗೆ ಆಗಮಿಸಿದ ಇಂದ್ರಜಿತ್ ಲಂಕೇಶ್ ತಮ್ಮೊಂದಿಗೆ ಲ್ಯಾಪ್​ಟಾಪ್ ಹಾಗೂ ಫೈಲ್ ಒಂದನ್ನು ಸಹ ತಂದಿದ್ದರು. ಇಂದ್ರಜಿತ್​ ಲ್ಯಾಪ್​ಟಾಪ್​ನಲ್ಲಿ ಡ್ರಗ್ಸ್​ ಪಾರ್ಟಿಗಳ ಫೋಟೋ ಮತ್ತು ವಿಡಿಯೋಗಳಿವೆ ಎಂದು ಹೇಳಲಾಗ್ತಿದೆ.

ಖ್ಯಾತ ನಟಿಯೊಬ್ಬರು ಡ್ರಗ್ಸ್ ನಶೆಯಲ್ಲಿ ಮೈಮರೆತು ಪಾರ್ಟಿಯಲ್ಲಿ ವರ್ತಿಸಿರುವ ವಿಡಿಯೋಸ್‌ ಮತ್ತು ಫೋಟೊಗಳಿವೆಯಂತೆ ಎಂದು ತಿಳಿದುಬಂದಿದೆ. ನಿರ್ದೇಶಕರ ಲ್ಯಾಪ್​ಟಾಪ್​ನಲ್ಲಿ ಸಾಫ್ಟ್ ಕಾಪಿ ಮತ್ತು ಫೈಲ್​ನಲ್ಲಿ ಹಾರ್ಡ್ ಕಾಪಿ ಸಹ ಇದೆ ಎಂದು ಹೇಳಲಾಗ್ತಿದೆ.

ಹೀಗಾಗಿ, ಇಂದ್ರಜಿತ್ ಲಂಕೇಶ್ ನೀಡಿರುವ ಡಿಜಿಟಲ್ ಸಾಕ್ಷ್ಯಾಧಾರಗಳನ್ನ CCB ಅಧಿಕಾರಿಗಳು ಪೆನ್‌ಡ್ರೈವ್‌ಗೆ ಕಾಪಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. CCB ಎಸಿಪಿ ಗೌತಮ್ ಹಾಗೂ ಇನ್​ಸ್ಪೆಕ್ಟರ್​ ಬೊಳತ್ತಿನ್ ಮಾಹಿತಿ ಸಂಗ್ರಹಿಸಿದ್ದು ಇದರ ಜೊತೆಗೆ ಕೆಲವೊಂದು ಪಾರ್ಟಿಗಳಲ್ಲಿ ನಡೆದ ಘಟನೆಗಳ ಬಗ್ಗೆ ಮಾಹಿತಿ ಸಹ ಪಡೆದರು. ಪಾರ್ಟಿಗಳಲ್ಲಿ ಯಾರೆಲ್ಲ ಭಾಗಿಯಾಗಿದ್ರು, ಯಾರು ಹೇಗೆ ವರ್ತಿಸಿದರು ಅನ್ನೋದರ ಬಗ್ಗೆ ಮಾಹಿತಿ ಪಡೆದಿದ್ದಾರೆ.

NCB ಅಧಿಕಾರಿಗಳ ನಿರ್ದೇಶನದಂತೆ CCB ತನಿಖೆ
ಪ್ರಮುಖ ಸಂಗತಿಯೆಂದರೆ, ಲಂಕೇಶ್​ರ ಸಂಪೂರ್ಣ ವಿಚಾರಣೆಯನ್ನು ದೆಹಲಿಯ NCB ಅಧಿಕಾರಿಗಳ ನಿರ್ದೇಶನದಂತೆ ಸಿಸಿಬಿ ತಂಡವು ನಡೆಸುತ್ತಿದೆ. KPS ಮಲ್ಹೋತ್ರಾ ಎಂಬ NCB ಅಧಿಕಾರಿ ಸಿಸಿಬಿ ಅಧಿಕಾರಿಗಳಿಗೆ ಗೈಡ್​ ಮಾಡ್ತಿದ್ದಾರೆ ಎಂದು ತಿಳಿದುಬಂದಿದೆ.

NCBಯ ಸಂಪೂರ್ಣ ಕಾರ್ಯಾಚರಣೆ​ಯ ನೇತೃತ್ವ ವಹಿಸಿದ್ದ ಮಲ್ಹೋತ್ರಾ ಇಂದ್ರಜಿತ್ ಲಂಕೇಶ್​ರ​ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಅಂತೆಯೇ, ಸಿಸಿಬಿ ಕಚೇರಿಯಲ್ಲಿ ಇಂದ್ರಜಿತ್ ಹೇಳಿಕೆಗಳು ರೆಕಾರ್ಡ್ ಆಗುತ್ತಿದ್ದು ಬರವಣಿಗೆ ಮತ್ತು ವಿಡಿಯೋ ರೆಕಾರ್ಡ್ ಮೂಲಕ ಲಂಕೇಶ್​ ನೀಡಿದ ಹೇಳಿಕೆಯನ್ನು ದಾಖಲಿಸಿಕೊಳ್ಳುಲಾಗುತ್ತಿದೆ.

ಇದೇ ವೇಳೆ, ನಿರ್ದೇಶಕ ಇಂದ್ರಜಿತ್​ರ ವಕೀಲರು ಸಹ ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ. ಇಂದ್ರಜಿತ್ ಲಂಕೇಶ್ ಪರ ವಕೀಲ ಜುಬೇರ್ ಸಿಸಿಬಿ ಕಚೇರಿಗೆ ಆಗಮಿಸಿ ವಿಚಾರಣೆ ವೇಳೆ ಅಲ್ಲೇ ಇದ್ದರು ಎಂದು ತಿಳಿದುಬಂದಿದೆ.

Published On - 2:24 pm, Mon, 31 August 20