ಬಿಡುಗಡೆ ಆಯ್ತು ‘ತೋತಾಪುರಿ 2’ ಟ್ರೇಲರ್; ಈ ಚಿತ್ರದಲ್ಲಿ ಏನೆಲ್ಲ ಇರಲಿದೆ?

Totapuri 2 Trailer: ‘ತೋತಾಪುರಿ’ ಚಿತ್ರದಲ್ಲಿ ಈರೇಗೌಡ (ಜಗ್ಗೇಶ್) ಕೃಷಿಕ ಹಾಗೂ ಟೈಲರ್. ಆತನಿಗೆ ಶಕೀಲಾ (ಅದಿತಿ ಪ್ರಭುದೇವ) ಬಾನು ಮೇಲೆ ಪ್ರೀತಿ ಹುಟ್ಟುತ್ತದೆ. ಈ ಚಿತ್ರದ ಕೊನೆಯಲ್ಲಿ ಧನಂಜಯ್ ಕಾಣಿಸಿಕೊಂಡಿದ್ದರು. ಎರಡನೇ ಭಾಗದಲ್ಲಿ ಕಥೆ ಮುಂದುವರಿದಿದೆ.

ಬಿಡುಗಡೆ ಆಯ್ತು ‘ತೋತಾಪುರಿ 2’ ಟ್ರೇಲರ್; ಈ ಚಿತ್ರದಲ್ಲಿ ಏನೆಲ್ಲ ಇರಲಿದೆ?
ತೋತಾಪುರಿ ಟ್ರೇಲರ್

Updated on: Sep 18, 2023 | 10:53 AM

ಗಣೇಶ ಚತುರ್ಥಿ ಪ್ರಯುಕ್ತ ಹೊಸ ಹೊಸ ಸಿನಿಮಾಗಳು ಘೋಷಣೆ ಆಗುತ್ತಿವೆ. ಇದರ ಜೊತೆಗೆ ಸಿನಿಮಾ ತಂಡದಿಂದ ಪೋಸ್ಟರ್​​ಗಳು, ಟೀಸರ್ ಬಿಡುಗಡೆ ಮಾಡುವ ಕೆಲಸವೂ ಆಗುತ್ತಿದೆ. ‘ತೋತಾಪುರಿ 2’ ಚಿತ್ರದ ಟ್ರೇಲರ್ ಈಗ ರಿಲೀಸ್ ಆಗಿದೆ. ಜಗ್ಗೇಶ್ (Jaggesh), ಧನಂಜಯ್, ಅದಿತಿ ಪ್ರಭುದೇವ (Aditi Prabhudeva) ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಗಮನ ಸೆಳೆಯುತ್ತಿದೆ. ‘ತೋತಾಪುರಿ’ ಚಿತ್ರದ ಮುಂದುವರಿದ ಭಾಗವಾಗಿ ‘ತೋತಾಪುರಿ 2’ ಸಿನಿಮಾ ಮೂಡಿ ಬಂದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅವರು ಟ್ರೇಲರ್ ರಿಲೀಸ್ ಮಾಡಿ ತಂಡಕ್ಕೆ ಶುಭಕೋರಿದ್ದಾರೆ.

‘ತೋತಾಪುರಿ’ ಚಿತ್ರದಲ್ಲಿ ಈರೇಗೌಡ (ಜಗ್ಗೇಶ್) ಕೃಷಿಕ ಹಾಗೂ ಟೈಲರ್. ಆತನಿಗೆ ಶಕೀಲಾ (ಅದಿತಿ ಪ್ರಭುದೇವ) ಬಾನು ಮೇಲೆ ಪ್ರೀತಿ ಹುಟ್ಟುತ್ತದೆ. ಈ ಚಿತ್ರದ ಕೊನೆಯಲ್ಲಿ ಧನಂಜಯ್ ಕಾಣಿಸಿಕೊಂಡಿದ್ದರು. ಎರಡನೇ ಭಾಗದಲ್ಲಿ ಕಥೆ ಮುಂದುವರಿದಿದೆ. ಜಗ್ಗೇಶ್-ಅದಿತಿ ಪ್ರಭುದೇವ ರೀತಿಯೇ ಸುಮನ್ ರಂಗನಾಥ್-ಧನಂಜಯ್ ಅವರ ಪ್ರೇಮ ಕಥೆಯೂ ಸೀಕ್ವೆಲ್​ನಲ್ಲಿ ಹೈಲೈಟ್ ಆಗಲಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ.

ಇಂದು ಧರ್ಮದ ಹೆಸರಲ್ಲಿ ಕಿತ್ತಾಟ ನಡೆಯುತ್ತಿವೆ. ಅವುಗಳನ್ನು ಮೀರಿ ಬದುಕಬೇಕು. ಸಮಾಜದಲ್ಲಿ ಸಾಮರಸ್ಯ ತರಬೇಕು ಎನ್ನುವ ಸಂದೇಶವನ್ನು ‘ತೋತಾಪುರಿ’ ಸಿನಿಮಾ ವಿವರಿಸುತ್ತದೆ. ಇದರ ಜೊತೆಗೆ ಹೇರಳವಾಗಿ ಡಬಲ್ ಮೀನಿಂಗ್ ಡೈಲಾಗ್​ಗಳನ್ನು ಇಡಲಾಗಿದೆ. ಇವೆಲ್ಲವನ್ನೂ ಟ್ರೇಲರ್​ನಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ: ‘ಜೈಲರ್​’ ಎದುರು ಪೈಪೋಟಿ ನೀಡಲಿರುವ ‘ತೋತಾಪುರಿ 2’; ಆಗಸ್ಟ್​ 11ರಂದು ಅದ್ದೂರಿಯಾಗಿ ಬಿಡುಗಡೆ

YouTube video player

ಈ ಮೊದಲು ರಿಲೀಸ್ ಆಗಿದ್ದ ‘ತೋತಾಪುರಿ’ ಸಿನಿಮಾದಲ್ಲಿ ಹೇರಳವಾಗಿ ಡಬಲ್ ಮೀನಿಂಗ್ ಡೈಲಾಗ್​ಗಳನ್ನು ಇಡಲಾಗಿತ್ತು. ಈ ಕಾರಣದಿಂದ ಒಂದು ವರ್ಗದ ಜನರಿಗೆ ಸಿನಿಮಾ ಇಷ್ಟವಾಗಿರಲಿಲ್ಲ. ‘ತೋತಾಪುರಿ 2’ ಚಿತ್ರ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us