‘ಜೈಲರ್​’ ಎದುರು ಪೈಪೋಟಿ ನೀಡಲಿರುವ ‘ತೋತಾಪುರಿ 2’; ಆಗಸ್ಟ್​ 11ರಂದು ಅದ್ದೂರಿಯಾಗಿ ಬಿಡುಗಡೆ

Totapuri 2 Kannada Movie: ಜಗ್ಗೇಶ್ ಮತ್ತು ಡಾಲಿ ಧನಂಜಯ್ ಅವರ ಕಾಂಬಿನೇಷ​ನ್‌ನಲ್ಲಿ ‘ತೋತಾಪುರಿ 2’ ಸಿನಿಮಾ ಮೂಡಿಬಂದಿದೆ. ‘ಜೈಲರ್​’ ಚಿತ್ರದ ಎದುರು ಈ ಸಿನಿಮಾ ರಿಲೀಸ್​ ಆಗಲಿದೆ.

‘ಜೈಲರ್​’ ಎದುರು ಪೈಪೋಟಿ ನೀಡಲಿರುವ ‘ತೋತಾಪುರಿ 2’; ಆಗಸ್ಟ್​ 11ರಂದು ಅದ್ದೂರಿಯಾಗಿ ಬಿಡುಗಡೆ
ತೋತಾಪುರಿ 2, ಜೈಲರ್​
Follow us
|

Updated on: Jul 31, 2023 | 3:31 PM

ಬೇರೆ ಬೇರೆ ಸ್ಟಾರ್​ ನಟರ ಸಿನಿಮಾಗಳು ಒಂದೇ ಸಮಯದಲ್ಲಿ ಬಿಡುಗಡೆಯಾದರೆ ಬಾಕ್ಸ್​ ಆಫೀಸ್​ನಲ್ಲಿ ಕ್ಲ್ಯಾಶ್​ ಏರ್ಪಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಡೇಟ್​ ಕ್ಲ್ಯಾಶ್​ ತಪ್ಪಿಸಲು ನಿರ್ಮಾಪಕರು ಪ್ರಯತ್ನಿಸುತ್ತಾರೆ. 2023ರ ದ್ವಿತೀಯಾರ್ಧದಲ್ಲಿ ಅನೇಕ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಬಿಡುಗಡೆ ಆಗುತ್ತಿವೆ. ಕೆಲವು ಸಂದರ್ಭಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾಗಳು ಮುಖಾಮುಖಿ ಆಗುವುದು ಅನಿವಾರ್ಯ. ಈಗ ತಮಿಳಿನ ‘ಜೈಲರ್​’ ಸಿನಿಮಾ (Jailer Movie) ಮತ್ತು ಕನ್ನಡದ ‘ತೋತಾಪುರಿ 2’ ಸಿನಿಮಾ ಒಂದು ದಿನದ ಅಂತರದಲ್ಲಿ ಬಿಡುಗಡೆ ಆಗುತ್ತಿವೆ. ಆ ಕಾರಣದಿಂದ ಸಿನಿಪ್ರಿಯರಲ್ಲಿ ಕೌತುಕ ಮನೆ ಮಾಡಿದೆ. ‘ಜೈಲರ್​’ ಚಿತ್ರದಲ್ಲಿ ರಜನಿಕಾಂತ್​ ಮತ್ತು ಶಿವರಾಜ್​ಕುಮಾರ್​ ನಟಿಸಿದ್ದಾರೆ. ‘ತೋತಾಪುರಿ 2’ (Totapuri 2) ಸಿನಿಮಾದಲ್ಲಿ ಜಗ್ಗೇಶ್​, ಡಾಲಿ ಧನಂಜಯ್ (Daali Dhananjay) ಮುಂತಾದವರು ಅಭಿನಯಿಸಿದ್ದಾರೆ.

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಜೈಲರ್​’ ಚಿತ್ರ ಮುಂಚೂಣಿಯಲ್ಲಿದೆ. ‘ಸೂಪರ್​ ಸ್ಟಾರ್​’ ರಜನಿಕಾಂತ್​ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ಆಗಸ್ಟ್​ 10ರಂದು ಬಿಡುಗಡೆ ಆಗಲಿದೆ ಎಂದು ಘೋಷಣೆ ಆದ ಬಳಿಕ ಇದರ ಎದುರು ಬರಲು ಕನ್ನಡದ ಯಾವುದೇ ಸಿನಿಮಾಗಳು ಸಿದ್ಧವಿರಲಿಲ್ಲ. ಆದರೆ, ಈಗ ‘ಜೈಲರ್’ ಎದುರು ಪೈಪೋಟಿ ನೀಡಲು ‘ತೋತಾಪುರಿ 2’ ಸಿನಿಮಾ ಸಜ್ಜಾಗಿದೆ. ಜೈಲರ್​ ಬಿಡುಗಡೆಯಾದ ಒಂದು ದಿನದ ಬಳಿಕ ಅಂದರೆ, ಆಗಸ್ಟ್​ 11ರಂದು ‘ತೋತಾಪುರಿ 2’ ತೆರೆಕಾಣಲಿದೆ.

ಇದನ್ನೂ ಓದಿ: Dhananjay: ಮೈಸೂರಿನಲ್ಲಿ ಚಾಮುಂಡಿಯ ದರ್ಶನ ಪಡೆದ ಡಾಲಿ ಧನಂಜಯ್

‘ನವರಸ ನಾಯಕ’ ಜಗ್ಗೇಶ್ ಮತ್ತು ಡಾಲಿ ಧನಂಜಯ್ ಅವರ ಕಾಂಬಿನೇಷ​ನ್‌ನಲ್ಲಿ ‘ತೋತಾಪುರಿ 2’ ಸಿನಿಮಾ ಮೂಡಿಬಂದಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ರಿಲೀಸ್​ ವಿಚಾರವನ್ನು ಚಿತ್ರತಂಡ ಖಚಿತಪಡಿಸಿದೆ. ‘ನಾವು ಆಗಸ್ಟ್​ ತಿಂಗಳ 2ನೇ ವಾರದಲ್ಲಿ ಸಿನಿಮಾ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿರುವುದು ನಿಜ’ ಎಂದು ನಿರ್ಮಾಪಕ ಸುರೇಶ್ ಹೇಳಿದ್ದಾರೆ. ಸುಮನ್ ರಂಗನಾಥ್ ಅವರು ಸಹ ಈ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರವನ್ನು ಮಾಡಿದ್ದಾರೆ.

ಇದನ್ನೂ ಓದಿ: ಚಿತ್ರರಂಗದಲ್ಲಿ ಹತ್ತು ವರ್ಷ ಪೂರೈಸಿದ ಡಾಲಿ ಧನಂಜಯ್, 25 ಸಿನಿಮಾ ಮಾಡಿದ್ದು ಸಾಧನೆಯೇ?

2022ರ ಸೆಪ್ಟೆಂಬರ್​ನಲ್ಲಿ ‘ತೋತಾಪುರಿ 1’ ಸಿನಿಮಾ ತೆರೆಕಂಡಿತ್ತು. ಆ ಸಿನಿಮಾದ ‘ಬಾಗ್ಲು ತೆಗಿ ಮೇರಿ ಜಾನ್..’ ಗೀತೆ ಬಹಳ ವೈರಲ್​ ಆಗಿತ್ತು. ಇತ್ತೀಚೆಗಷ್ಟೇ ‘ತೋತಾಪುರಿ 2’ ಸಿನಿಮಾದ ಮೊದಲ ಸಾಂಗ್​ ಬಿಡುಗಡೆ ಮಾಡಲಾಗಿದೆ. ಹೃದಯಶಿವ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ‘ಮೊದಲ ಮಳೆ ಮನದೊಳಗೆ…’ ಎಂದು ಈ ಹಾಡಿಗೆ ಜನಮೆಚ್ಚುಗೆ ಸಿಗುತ್ತಿದೆ. ಇದರಲ್ಲಿ ಧನಂಜಯ್ ಮತ್ತು ಸುಮನ್ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಸಂಜಿತ್ ಹೆಗಡೆ ಅವರ ಕಂಠದಲ್ಲಿ ಈ ಗೀತೆ ಮೂಡಿಬಂದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ