AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀರೋಗಳೆಲ್ಲ ಈಗ ಗ್ಯಾಂಗ್​ಸ್ಟರ್ಸ್​; ಚಿತ್ರರಂಗದಲ್ಲಿ ಮುಂದುವರಿದ ಟ್ರೆಂಡ್

ದಕ್ಷಿಣ ಭಾರತ ಹಾಗೂ ಬಾಲಿವುಡ್​ನಲ್ಲಿ ಗ್ಯಾಂಗ್​ಸ್ಟರ್ ಸಿನಿಮಾ ಟ್ರೆಂಡ್ ಮುಂದುವರಿದಿದೆ. ‘ಕೆಜಿಎಫ್ 2’ (KGF Chapter 2) ಮೊದಲಾದ ಸಿನಿಮಾಗಳು ಇದಕ್ಕೆ ಹೊಸ ಸೇರ್ಪಡೆ.

ಹೀರೋಗಳೆಲ್ಲ ಈಗ ಗ್ಯಾಂಗ್​ಸ್ಟರ್ಸ್​; ಚಿತ್ರರಂಗದಲ್ಲಿ ಮುಂದುವರಿದ ಟ್ರೆಂಡ್
ರಣಬೀರ್-ಯಶ್-ಶಿವಣ್ಣ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Aug 01, 2023 | 11:44 AM

ಸ್ಟಾರ್ ಹೀರೋಗಳಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಸಾಕಷ್ಟು ಮಂದಿ ಹಿಂಬಾಲಿಸುತ್ತಾರೆ. ಅವರು ಯಾವ ರೀತಿಯ ಸಿನಿಮಾ ಮಾಡಿದರೂ ಭಕ್ತಿಯಿಂದ ಅದನ್ನು ವೀಕ್ಷಿಸುತ್ತಾರೆ. ಅದೇ ರೀತಿ ಹೀರೋಗಳು ನೆಗೆಟಿವ್​ ಶೇಡ್​​ನ ಪಾತ್ರಗಳನ್ನು ಮಾಡಿದ ಗಮನ ಸೆಳೆದ ಅನೇಕರಿದ್ದಾರೆ. ಅವರು ಮಾಡೋದು ಗ್ಯಾಂಗ್​​ಸ್ಟರ್ ಪಾತ್ರವಾದರೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ದಕ್ಷಿಣ ಭಾರತ ಹಾಗೂ ಬಾಲಿವುಡ್​ನಲ್ಲಿ ಈ ಟ್ರೆಂಡ್ ಮುಂದುವರಿದಿದೆ. ‘ಕೆಜಿಎಫ್ 2’ (KGF Chapter 2) ಮೊದಲಾದ ಸಿನಿಮಾಗಳು ಇದಕ್ಕೆ ಹೊಸ ಸೇರ್ಪಡೆ.

ಯಶ್

‘ಕೆಜಿಎಫ್ 2’ ಚಿತ್ರದಲ್ಲಿ ಯಶ್ ಮಾಡಿದ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಅವರು ಗ್ಯಾಂಗ್​ಸ್ಟರ್ ರೀತಿಯ ಪಾತ್ರ ಮಾಡಿ ಗಮನ ಸೆಳೆದರು. ವೃತ್ತಿಜೀವನದಲ್ಲಿ ಯಶ್ ಅವರು ಆ ರೀತಿಯ ಪಾತ್ರ ಮಾಡಿದ್ದು ಅದೇ ಮೊದಲು. ಆ ರೀತಿಯ ಪಾತ್ರದ ಮೂಲಕ ಅವರು ಜನರಿಗೆ ಇಷ್ಟವಾಗಿದ್ದಾರೆ. ಯಶ್ ಅವರಿಂದ ಜನರು ಈಗ ಅದೇ ರೀತಿಯ ಸಿನಿಮಾಗಳನ್ನು ನಿರೀಕ್ಷಿಸುತ್ತಿದ್ದಾರೆ.

ಶಿವರಾಜ್​ಕುಮಾರ್

ಶಿವರಾಜ್​ಕುಮಾರ್ ಅವರು ಅನೇಕ ಸಿನಿಮಾಗಳಲ್ಲಿ ಮಚ್ಚು-ಲಾಂಗ್ ಹಿಡಿದಿದ್ದಾರೆ. ಶ್ರೀನಿ ನಿರ್ದೇಶನದ ‘ಘೋಸ್ಟ್’ ಸಿನಿಮಾದಲ್ಲಿ ಅವರದ್ದು ಗ್ಯಾಂಗ್​ಸ್ಟರ್ ಪಾತ್ರ ಎನ್ನಲಾಗಿದೆ. ಇತ್ತೀಚೆಗೆ ರಿಲೀಸ್ ಆದ ಟೀಸರ್ ಸಾಕಷ್ಟು ಗಮನ ಸೆಳೆದಿದೆ. ಶಿವಣ್ಣ ಅವರು ‘ಒಜಿ, ಒರಿಜಿನಲ್ ಗ್ಯಾಂಗ್​ಸ್ಟರ್’ ಎಂದು ಹೇಳುವ ಡೈಲಾಗ್​ ಗಮನ ಸೆಳೆಯುತ್ತಿದೆ.

ಪ್ರಭಾಸ್

ಪ್ರಭಾಸ್ ಅವರು ‘ಸಲಾರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ. ಅವರು ಈ ಚಿತ್ರದಲ್ಲಿ ಅವರು ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪಾತ್ರ ಮಾಡುತ್ತಾರೆ ಎನ್ನಲಾಗಿದೆ. ಈ ಚಿತ್ರದ ಮೊದಲ ಗ್ಲಿಂಪ್ಸ್ ಗಮನ ಸೆಳೆದಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕೆ, ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದೆ.

ಪವನ್ ಕಲ್ಯಾಣ್

ಪವನ್ ಕಲ್ಯಾಣ್ ಅವರು ‘ಒಜಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರ ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ‘ಒರಿಜಿನಲ್ ಗ್ಯಾಂಗ್​ಸ್ಟರ್’ ಅನ್ನೋದು ಶೀರ್ಷಿಕೆಯ ವಿಸ್ತ್ರತ ರೂಪ. ಪವನ್ ಕಲ್ಯಾಣ್ ಅವರದ್ದು ನೆಗೆಟಿವ್ ಶೇಡ್​ನ ಪಾತ್ರ ಎನ್ನಲಾಗುತ್ತಿದೆ. ಈ ಸಿನಿಮಾ ಈಗಾಗಲೇ ಶೇ.50ರಷ್ಟು ಚಿತ್ರೀಕರಣ ಮುಗಿಸಿದೆ.

ಅಲ್ಲು ಅರ್ಜುನ್

‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ರಕ್ತಚಂದನ ಕಳ್ಳಸಾಗಣೆ ಮಾಡುವ ವ್ಯಕ್ತಿಯ ಪಾತ್ರ ಮಾಡಿದ್ದಾರೆ. ಶೇಷಾಚಲಂ ಅರಣ್ಯದಲ್ಲಿ ರಕ್ತ ಚಂದನದ ಸ್ಮಗ್ಲರ್ ಆಗಿರುವ ಪುಷ್ಪರಾಜ್ ನಂತರ ದೊಡ್ಡ ಡಾನ್ ಆಗಿ ಬೆಳೆಯುತ್ತಾನೆ.  ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಸದ್ದು ಮಾಡಿದೆ. ಸುಕುಮಾರ್ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುತ್ತಿದೆ.

‘ಲಿಯೋ’

ದಳಪತಿ ವಿಜಯ್ ಅವರು ‘ಲಿಯೋ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೊದಲ ಗ್ಲಿಂಪ್ಸ್ ಮೂಲಕ ಗಮನ ಸೆಳೆದಿದೆ. ಅವರದ್ದು ಗ್ಯಾಂಗ್​ಸ್ಟರ್ ಪಾತ್ರ ಎನ್ನಲಾಗಿದೆ.

ಇದನ್ನೂ ಓದಿ: Shivarajkumar: ‘ಯು ಆರ್​ ಸೋ ಕ್ಯೂಟ್​’; ನವಾಜ್​ ಡೈಲಾಗ್​ಗೆ ಫಿದಾ ಆದ ಶಿವರಾಜ್​ಕುಮಾರ್

ದುಲ್ಖರ್ ಸಲ್ಮಾನ್

ಕಳೆದ ವರ್ಷ ‘ಸೀತಾ ರಾಮಂ’ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ನಟ ದುಲ್ಖರ್ ಸಲ್ಮಾನ್ ‘ಕಿಂಗ್ ಆಫ್ ಕೋಟಾ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ಅವರು ದರೋಡೆಕೋರನಂತೆ ಕಾಣುತ್ತಿದ್ದಾರೆ.

ರಣಬೀರ್ ಕಪೂರ್

ಬಾಲಿವುಡ್‌ನಲ್ಲಿ ಎರಡನೇ ಹಿಟ್‌ಗಾಗಿ ಕಾಯುತ್ತಿದ್ದಾರೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ. ರಣಬೀರ್ ಕಪೂರ್ ಹೀರೋ ಆಗಿ ನಟಿಸಿದ ‘ಅನಿಮಲ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ರಣಬೀರ್ ಅವರದ್ದು ವಿಲನ್ ಪಾತ್ರ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ಬೆಂಗಳೂರಿನ ಜಯನಗರದಲ್ಲಿ ಧರೆಗೆ ಉರುಳಿದ ಮರ
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ನೆಲೆಮಂಗಲ: ಮನೆ ಮುಂದೆ ಕಟ್ಟಿದ್ದ ಹಸುಗಳನ್ನ ಕದ್ದು ಪರಾರಿ, ರೈತ ಕಂಗಾಲು
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ಗಂಗಾವತಿ ಉಪ ಚುನಾವಣೆಗೆ ಅನ್ಸಾರಿ ಟಿಕೆಟ್ ಬಯಸಿದ್ದರೆ ತಪ್ಪಿಲ್ಲ: ಸಂಗಣ್ಣ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವುಳಿದರೆ ನಾವು ಉಳಿದಂತೆ: ಶಾಸಕ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ₹59, 28, 876 ಕಾಣಿಕೆ ಸಂಗ್ರಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಎರಡು ವರ್ಷಗಳಿಂದ ತಮ್ಮಯ್ಯ-ರವಿ ಮಧ್ಯೆ ಆಗಾಗ್ಗೆ ನಡೆಯುತ್ತಿದೆ ಮಾತಿನ ಕಲಹ
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?