Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೌಸಲ್ಯ ಸುಪ್ರಜಾ ರಾಮ’ ಸೂಪರ್​ ಹಿಟ್​; ಗೆದ್ದ ಖುಷಿಯಲ್ಲಿ ಏನ್​ ಹೇಳ್ತಾರೆ ಚಿತ್ರತಂಡದವರು?

Kausalya Supraja Rama: ಜುಲೈ 28ರಂದು ಬಿಡುಗಡೆ ಆದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಯಶಸ್ಸು ಕಂಡಿದೆ. ನಿರ್ದೇಶಕ ಶಶಾಂಕ್​ ಅವರು ಲವ್​, ತಾಯಿ ಸೆಂಟಿಮೆಂಟ್​ ಜೊತೆ ನೀಡಿದ ಮೆಸೇಜ್​ ಮತ್ತು ಮನರಂಜನೆಗೆ ಜನರು ಫಿದಾ ಆಗಿದ್ದಾರೆ.

‘ಕೌಸಲ್ಯ ಸುಪ್ರಜಾ ರಾಮ’ ಸೂಪರ್​ ಹಿಟ್​; ಗೆದ್ದ ಖುಷಿಯಲ್ಲಿ ಏನ್​ ಹೇಳ್ತಾರೆ ಚಿತ್ರತಂಡದವರು?
ಕೌಸಲ್ಯ ಸುಪ್ರಜಾ ರಾಮ
Follow us
ಮದನ್​ ಕುಮಾರ್​
|

Updated on: Aug 01, 2023 | 3:10 PM

ಶಶಾಂಕ್​ ನಿರ್ದೇಶನದ ‘ಕೌಸಲ್ಯ ಸುಪ್ರಜಾ ರಾಮ’ (Kausalya Supraja Rama) ಸಿನಿಮಾ ಸೂಪರ್​ ಹಿಟ್​ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾಗೆ ಉತ್ತಮ ಕಲೆಕ್ಷನ್​ ಆಗುತ್ತಿದೆ. ಕೌಟುಂಬಿಕ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಡಾರ್ಲಿಂಗ್​ ಕೃಷ್ಣ (Darling Krishna), ಮಿಲನಾ ನಾಗರಾಜ್​, ಬೃಂದಾ ಆಚಾರ್ಯ, ರಂಗಾಯಣ ರಘು, ನಾಗಭೂಷಣ ಮುಂತಾದವರು ನಟಿಸಿದ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಗೆಲುವನ್ನು ಸಂಭ್ರಮಿಸಲು ಚಿತ್ರತಂಡ ಸುದ್ದಿಗೋಷ್ಠಿ ನಡೆಸಿದೆ. ಯಶಸ್ಸಿನ ಖುಷಿಯಲ್ಲೇ ಎಲ್ಲರೂ ವೇದಿಕೆ ಮೇಲೆ ಮಾತನಾಡಿದ್ದಾರೆ. ಶಶಾಂಕ್​ (Director Shashank) ಮತ್ತು ಬಿ.ಸಿ. ಪಾಟೀಲ್​ ಅವರು ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಬೇರೆ ರಾಜ್ಯಗಳಲ್ಲೂ ಈ ಚಿತ್ರ ಉತ್ತಮವಾಗಿ ಪ್ರದರ್ಶನ ಕಂಡಿದೆ.

ಡಾರ್ಲಿಂಗ್​ ಕೃಷ್ಣ ಅವರು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಮೂಲಕ ಗೆಲುವಿನ ಟ್ರ್ಯಾಕ್​ಗೆ ಮರಳಿದ್ದಾರೆ. ‘ನಾನು ಈವರೆಗೂ ಕೇಳಿದ ದಿ ಬೆಸ್ಟ್​ ಕಥೆ ಇದು. ಶಶಾಂಕ್​ ಅವರು ಒಂದೇ ತಿಂಗಳಲ್ಲಿ ಈ ಕಥೆ ಸಿದ್ಧಪಡಿಸಿದ್ದರು. ಅವರ ಜೊತೆ ಫ್ಯಾಮಿಲಿ ಸಿನಿಮಾ ಮಾಡಬೇಕು ಎಂಬುದು ನನ್ನ ಆಸೆ ಆಗಿತ್ತು. ತುಂಬ ಆಳವಾದ ವಿಷಯವನ್ನು ಶಶಾಂಕ್​ ಅವರು ಈ ಸಿನಿಮಾದಲ್ಲಿ ಹೇಳಿದ್ದಾರೆ. ಜನರು ಪ್ರತಿಕ್ರಿಯಿಸಿದ ರೀತಿ ನೋಡಿ ಬಹಳ ಖುಷಿ ಆಯಿತು. ಇಂಥ ಕಥೆಯನ್ನು ಇಟ್ಟುಕೊಂಡು ನನ್ನ ಜೊತೆ ಸಿನಿಮಾ ಮಾಡಿದ್ದಕ್ಕೆ ಶಶಾಂಕ್​ ಮತ್ತು ಬಿ.ಸಿ. ಪಾಟೀಲ್​ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ ಡಾರ್ಲಿಂಗ್​ ಕೃಷ್ಣ.

ಇದನ್ನೂ ಓದಿ: ‘ಇಂಥ ಚಿತ್ರದ ಅವಶ್ಯಕತೆ ಬಹಳ ಇತ್ತು, ಸೂಕ್ತ ಸಮಯಕ್ಕೆ ಇದು ಬಂದಿದೆ’: ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಯೋಗರಾಜ್​ ಭಟ್​ ಹೊಗಳಿಕೆ

ಈ ಸಿನಿಮಾ ನೋಡಿದ ಬಳಿಕ ಮಿಲನಾ ನಾಗರಾಜ್​ ಅವರ ನಟನೆಗೆ ಎಲ್ಲರಿಂದ ಪ್ರಶಂಸೆ ಸಿಕ್ಕಿದೆ. ‘ಶಶಾಂಕ್​ ಅವರಿಗೆ ನಾನು ದೊಡ್ಡ ಅಭಿಮಾನಿ. ಅವರ ಆತ್ಮವಿಶ್ವಾಸ ಮೆಚ್ಚುವಂಥದ್ದು. ಬೃಂದಾ ಆಚಾರ್ಯ ಅವರ ನಟನೆಯನ್ನು ನೋಡಿ ನಾನು ಇಂಪ್ರೆಸ್​ ಆದೆ. ಎಲ್ಲರ ನಟನೆಯೂ ನನಗೆ ಇಷ್ಟ ಆಯ್ತು. ಬಿ.ಸಿ. ಪಾಟೀಲ್​ ಮತ್ತು ಸೃಷ್ಟಿ ಪಾಟೀಲ್​ ಅವರಿಂದ ನಮಗೆ ಆನೆಬಲ ಬಂತು’ ಎಂದು ಮಿಲನಾ ನಾಗರಾಜ್​ ಹೇಳಿದ್ದಾರೆ.

ಇದನ್ನೂ ಓದಿ: Kausalya Supraja Rama Review: ನೀವು ನಿಜವಾದ ಗಂಡಸು ಹೌದಾ? ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರ ನೋಡಿದ್ರೆ ಬಯಲಾಗುತ್ತೆ ಸತ್ಯ

ನಿರ್ದೇಶಕ ಶಶಾಂಕ್​ ಕೂಡ ಈ ಗೆಲುವಿನಿಂದ ಖುಷಿಯಾಗಿದ್ದಾರೆ. ‘ಎಲ್ಲರಿಗಿಂತ ಹೆಚ್ಚಾಗಿ ಇಂಥ ಒಂದು ಯಶಸ್ಸಿನ ಅವಶ್ಯಕತೆ ನನಗೆ ಇತ್ತು. ತುಂಬ ದಿನ ಆದ್ಮೇಲೆ ನಾನು ಈ ರೀತಿಯ ಸಕ್ಸಸ್​ಮೀಟ್​ನಲ್ಲಿ ಭಾಗಿ ಆಗಿದ್ದೇನೆ. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲೇಬೇಕಿತ್ತು. ಹೊಸಬರು ಬಂದಾಗ ಸೀನಿಯರ್​ ಡೈರೆಕ್ಟರ್​ಗಳ ಕಾಲ ಮುಗಿಯಿತು ಎಂಬ ಮಾತು ಬರುತ್ತದೆ. ನಾವು ಕೂಡ ಒಳ್ಳೆಯ ನಿರ್ದೇಶಕರು ಅನ್ನೋದನ್ನು ಪದೇಪದೇ ಸಾಬೀತು ಮಾಡಿಕೊಳ್ಳಲೇಬೇಕು. ಈ ಯಶಸ್ಸು ಸಿಕ್ಕಿದ್ದಕ್ಕೆ ತುಂಬ ಖುಷಿ ಆಗಿದೆ. ಇದು ಕೃಷ್ಣಗಾಗಿಯೇ ಬರೆದ ಕಥೆ. ಬಿ.ಸಿ. ಪಾಟೀಲ್​ ಅವರ ಕೂಡ ಕಥೆ ಇಷ್ಟಪಟ್ಟು ನಿರ್ಮಾಣದಲ್ಲಿ ಕೈ ಜೋಡಿಸಿದ್ದಕ್ಕೆ ಈ ಚಿತ್ರ ಇಷ್ಟು ರಿಚ್​ ಆಗಿ ಮೂಡಿಬಂತು. ಗುಣಮಟ್ಟದಲ್ಲಿ ರಾಜಿ ಆಗಿಲ್ಲ’ ಎಂದು ನಿರ್ದೇಶಕ ಶಶಾಂಕ್​ ಹೇಳಿದ್ದಾರೆ.

ಇದನ್ನೂ ಓದಿ: Darling Krishna: ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ನೋಡಿ ಮನಸಾರೆ ಹೊಗಳಿದ ಪ್ರೇಕ್ಷಕರು; ಚಿತ್ರತಂಡಕ್ಕೆ ಖುಷಿಯೋ ಖುಷಿ

‘ಬಹುದಿನಗಳ ಬಳಿಕ ಒಂದು ಒಳ್ಳೆಯ ಸಿನಿಮಾ ನೋಡಿದ್ದಕ್ಕೆ ಖುಷಿ ಆಯ್ತು. ಎಲ್ಲರ ಭಾವನೆ ಕೂಡ ಇದೇ ಆಗಿದೆ. ಈಗಾಗಲೇ ಸಿನಿಮಾ ಯಶಸ್ವಿಯಾಗಿದೆ. ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಆಗಸ್ಟ್​ 4ರಂದು ಅಮೆರಿಕ, ಸೌತ್​ ಆಫ್ರಿಕಾ ಮುಂತಾದ ಕಡೆಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಕೆಲವು ನಿರ್ಮಾಪಕರು ಅಷ್ಟು ಕೋಟಿ ಆಯ್ತು, ಇಷ್ಟು ಕೋಟಿ ಆಯ್ತು ಅಂತ ಸುಳ್ಳು ಹೇಳ್ತಾರೆ. ಎಷ್ಟು ಕೋಟಿ ಕಲೆಕ್ಷನ್​ ಮಾಡಿದೆ ಎಂಬುದಕ್ಕಿಂತ ನಮ್ಮ ಸಿನಿಮಾ ಜನರನ್ನು ತಲುಪಿದೆ ಎಂಬುದು ಮುಖ್ಯ. ನಮ್ಮ ನಿರೀಕ್ಷೆಗೆ ತಕ್ಕಂತೆ ಕಲೆಕ್ಷನ್​ ಆಗಿದೆ. ಈ ಥರ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು ಕೂಡ ನಿರ್ದೇಶಕರ ಸಾಹಸ’ ಎಂದು ಹೇಳಿದ್ದಾರೆ ನಿರ್ಮಾಪಕ ಬಿ.ಸಿ. ಪಾಟೀಲ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು