‘ಇಂಥ ಚಿತ್ರದ ಅವಶ್ಯಕತೆ ಬಹಳ ಇತ್ತು, ಸೂಕ್ತ ಸಮಯಕ್ಕೆ ಇದು ಬಂದಿದೆ’: ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಯೋಗರಾಜ್ ಭಟ್ ಹೊಗಳಿಕೆ
Kausalya Supraja Rama Movie: ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ನೋಡಿ ಯೋಗರಾಜ್ ಭಟ್ ಅವರು ಫಿದಾ ಆಗಿದ್ದಾರೆ. ಚಿತ್ರದ ಬಗ್ಗೆ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಬೃಂದಾ ಆಚಾರ್ಯ, ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ ಮುಂತಾದವರು ನಟಿಸಿರುವ ‘ಕೌಸಲ್ಯ ಸುಪ್ರಜಾ ರಾಮ’ (Kausalya Supraja Rama) ಸಿನಿಮಾದ ಪ್ರೀಮಿಯರ್ ಶೋ ಬೆಂಗಳೂರಿನಲ್ಲಿ ನಡೆದಿದೆ. ಶಶಾಂಕ್ ನಿರ್ದೇಶನದ ಈ ಸಿನಿಮಾ ನೋಡಿ ಯೋಗರಾಜ್ ಭಟ್ (Yogaraj Bhat) ಅವರು ಫಿದಾ ಆಗಿದ್ದಾರೆ. ಚಿತ್ರದ ಬಗ್ಗೆ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಇಂಥ ಒಂದು ಕೌಟುಂಬಿಕ ಕಥಾಹಂದರ ಇರುವ ಸಿನಿಮಾದ ಅವಶ್ಯಕತೆ ಬಹಳ ಇತ್ತು. ಸರಿಯಾದ ಸಮಯಕ್ಕೆ ಈ ಸಿನಿಮಾ ಬಂದಿದೆ. ಕೃಷ್ಣ ಮತ್ತು ಮಿಲನಾ ದಂಪತಿಯ ನಟನೆಗೆ ರಾಯಲ್ ಸೆಲ್ಯೂಟ್. ಇನ್ನುಳಿದ ಎಲ್ಲರ ಅಭಿನಯವೂ ಚೆನ್ನಾಗಿದೆ. ಈ ಸಿನಿಮಾವನ್ನು ಎಲ್ಲರೂ ನೋಡಿ ಹರಸಿ. ಜೈ ಕೌಸಲ್ಯ’ ಎಂದು ತಮ್ಮದೇ ಶೈಲಿಯಲ್ಲಿ ವಿಮರ್ಶೆ ತಿಳಿಸಿದ್ದಾರೆ ಯೋಗರಾಜ್ ಭಟ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos