ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?

ಕಿರೀಟಿ ಅವರ ಚೊಚ್ಚಲ ಚಿತ್ರ ‘ಜೂನಿಯರ್’ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಮೊದಲ ದಿನವೇ ಚಿತ್ರ 1.40 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರದಲ್ಲಿ ಶ್ರೀಲೀಲಾ, ರವಿಚಂದ್ರನ್ ಮತ್ತು ಜೆನಿಲಿಯಾ ಮುಂತಾದ ಪ್ರಮುಖ ನಟ-ನಟಿಯರು ನಟಿಸಿದ್ದಾರೆ.

ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು?
ಜೂನಿಯರ್ ಸಿನಿಮಾ

Updated on: Jul 19, 2025 | 7:36 AM

‘ಜೂನಿಯರ್’ ಸಿನಿಮಾ ಮೂಲಕ ಕಿರೀಟಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮೊದಲ ದಿನ ಒಳ್ಳೆಯ ಕಲೆಕ್ಷನ್ ಆಗಬೇಕು ಎಂದು ಎಲ್ಲಾ ಯುವ ಕಲಾವಿದರು ಬಯಸುತ್ತಾರೆ. ಆದರೆ, ಎಲ್ಲರಿಗೂ ಅಂಥ ಅವಕಾಶ ಸಿಗೋದಿಲ್ಲ. ಆದರೆ, ಕಿರೀಟಿ ಅವರಿಗೆ ಅಂಥದ್ದೊಂದು ಅದೃಷ್ಟ ಸಿಕ್ಕಿದೆ. ಮೊದಲ ದಿನಿಮಾ ಸಿನಿಮಾ ಗೆದ್ದು ಬೀಗುವ ಸೂಚನೆ ಕೊಟ್ಟಿದೆ. ಅವರ ನಟನೆಯ ‘ಜೂನಿಯರ್’ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದೆ.

ಕಿರೀಟಿ ಪರಿಚಯ ಕನ್ನಡ ಹಾಗೂ ತೆಲುಗು ಮಂದಿ ಇಬ್ಬರಿಗೂ ಇದೆ. ಇದಕ್ಕೆ ಕಾರಣ ಆಗಿದ್ದು ಅವರ ತಂದೆ ಹಾಗೂ ರಾಜಕಾರಣಿ ಜನಾರ್ಧನ್ ರೆಡ್ಡಿ ಅವರು. ಈ ಕಾರಣದಿಂದ ಎರಡೂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಕಿರೀಟಿ ಜೊತೆ ಶ್ರೀಲೀಲಾ, ರವಿಚಂದ್ರನ್, ಜೆನಿಲಿಯಾ ಸೇರಿದಂತೆ ದೊಡ್ಡ ತಾರಾ ಬಳಗ ಇದೆ. ಈ ಚಿತ್ರ ಜನರಿಂದ ಮೆಚ್ಚುಗೆ ಪಡೆದಿದೆ.

ಇದನ್ನೂ ಓದಿ: ‘ಜೂನಿಯರ್’ ವಿಮರ್ಶೆ: ಹೀರೋ ಇಂದ, ಹೀರೋಗಾಗಿ, ಹೀರೋಗೋಸ್ಕರ

ಇದನ್ನೂ ಓದಿ
‘ಎಕ್ಕ’ ಸಿನಿಮಾ ಗಳಿಕೆ; ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ ಯುವ
ಬರ್ತ್​ಡೇ ಗರ್ಲ್ ಪ್ರಿಯಾಂಕಾ ಚೋಪ್ರಾ ಎಷ್ಟು ಶ್ರೀಮಂತೆ ಗೊತ್ತಾ?
ಸಿನಿಮಾ ರಿಲೀಸ್ ಸಂದರ್ಭದಲ್ಲೇ ಆಸ್ಪತ್ರೆಗೆ ದಾಖಲಾದ ವಿಜಯ್ ದೇವರಕೊಂಡ
ವೀಕ್ಷಕರು ಹಿಂದೆಂದೂ ಕೇಳಿರದ ರಿಯಾಲಿಟಿ ಶೋನ ತಂದ ಜೀ ಕನ್ನಡ 

‘ಜೂನಿಯರ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ 1.40 ಕೋಟಿ ರೂಪಾಯಿ ಎನ್ನಲಾಗಿದೆ. ತೆಲುಗು ಹಾಗೂ ಕನ್ನಡ ಎರಡೂ ಭಾಷೆಯಿಂದ ಸಿನಿಮಾ ಇಷ್ಟು ಗಳಿಕೆ ಮಾಡಿದೆ. ಸಿನಿಮಾದ ಪಾತ್ರವರ್ಗ ದೊಡ್ಡದು, ಅಲ್ಲದೆ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದೆ. ಇದನ್ನು ನೋಡಿದರೆ ಇತ್ರದ ಗಳಿಕೆ ಕೊಂಚ ಕಡಿಮೆ ಅನಿಸಿಯೇ ಅನಿಸುತ್ತದೆ. ಆದರೆ, ಸಿನಿಮಾ ಮೊದಲ ದಿನ ಕೋಟಿ ರೂಪಾಯಿ ಮೇಲೆ ಗಳಿಕೆ ಮಾಡಿತು ಎಂಬುದು ಸಮಾಧಾನಕರ ಸಂಗತಿ.

ಎಕ್ಕ ಗಳಿಕೆ ವಿವರ..

ಕನ್ನಡದಲ್ಲಿ ರಿಲೀಸ್ ಆದ ಯುವ ರಾಜ್​ಕುಮಾರ್ ನಟನೆಯ ‘ಎಕ್ಕ’ ಸಿನಿಮಾ ಕೂಡ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 1.60 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಚಿತ್ರದ ಕಲೆಕ್ಷನ್ ಹೀಗೆಯೇ ಮುಂದುವರಿದರೆ ಯುವಗೆ ದೊಡ್ಡ ಗೆಲುವು ಸಿಕ್ಕಂತೆ ಆಗಲಿದೆ. ಯುವ ರಾಜ್​ಕುಮಾರ್ ಅವರ ‘ಎಕ್ಕ’ ಹಾಗೂ ‘ಕಿರೀಟಿ’ ಒಂದೇ ರೀತಿಯಲ್ಲಿ ಕಲೆಕ್ಷನ್ ಮಾಡುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us