Kichcha 46: ‘ಕಿಚ್ಚ 46’ ಚಿತ್ರಕ್ಕೆ ‘ಮ್ಯಾಕ್ಸ್’ ಶೀರ್ಷಿಕೆ; ಮತ್ತೆ ಖಾಕಿ ತೊಟ್ಟ ಸುದೀಪ್?

K46 Title Teaser: ‘ಮ್ಯಾಕ್ಸ್’ ಪ್ಯಾನ್ ಇಂಡಿಯಾ ಸಿನಿಮಾ. ಸಿನಿಮಾದ ಟೈಟಲ್ ಟೀಸರ್ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿದೆ. ‘ಸಾಕಷ್ಟು ವಾಹನಗಳಲ್ಲಿ ವೆಪನ್ ತೆಗೆದುಕೊಂಡು ಬರಲಾಗುತ್ತಿದೆ’ ಎಂದು ಪೊಲೀಸರಿಗೆ ಮಾಹಿತಿ ಬರುತ್ತದೆ. ಆದರೆ, ಇದಕ್ಕೆ ಪೊಲೀಸರು ಹೆದರಲ್ಲ. ಏಕೆಂದರೆ ಅವರ ಬಳಿ ಮ್ಯಾಕ್ಸ್ ಇದ್ದಾನೆ.

Kichcha 46: ‘ಕಿಚ್ಚ 46’ ಚಿತ್ರಕ್ಕೆ ‘ಮ್ಯಾಕ್ಸ್’ ಶೀರ್ಷಿಕೆ; ಮತ್ತೆ ಖಾಕಿ ತೊಟ್ಟ ಸುದೀಪ್?
ಸುದೀಪ್

Updated on: Sep 02, 2023 | 7:41 AM

ಕಿಚ್ಚ ಸುದೀಪ್​ಗೆ (Sudeep) ಇಂದು (ಸೆಪ್ಟೆಂಬರ್ 2) ಬರ್ತ್​ಡೇ ಸಂಭ್ರಮ. ಎಲ್ಲ ಕಡೆಗಳಿಂದ ಅವರಿಗೆ ಶುಭಾಶಯ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹೀರೋಗೆ ವಿಶ್ ಮಾಡಲಾಗುತ್ತಿದೆ. ಇದರ ಜೊತೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಘೋಷಣೆ ಮಾಡಲಾಗುತ್ತಿದೆ. ‘ಕಿಚ್ಚ 46’ (Kichcha 46) ಸಿನಿಮಾದ ಟೈಟಲ್ ಕೂಡ ಘೋಷಣೆ ಆಗಿದೆ. ಈ ಚಿತ್ರಕ್ಕೆ ‘ಮ್ಯಾಕ್ಸ್’ ಎಂದು ಶೀರ್ಷಿಕೆ ನೀಡಲಾಗಿದೆ. ಶೀರ್ಷಿಕೆ ಟೀಸರ್ ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿದೆ. ಈ ಸಿನಿಮಾದ ಶೂಟಿಂಗ್ ಸದ್ಯ ಭರದಿಂದ ಸಾಗುತ್ತಿದೆ.

‘ಮ್ಯಾಕ್ಸ್’ ಪ್ಯಾನ್ ಇಂಡಿಯಾ ಸಿನಿಮಾ. ಸಿನಿಮಾದ ಟೈಟಲ್ ಟೀಸರ್ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿದೆ. ‘ಸಾಕಷ್ಟು ವಾಹನಗಳಲ್ಲಿ ವೆಪನ್ ತೆಗೆದುಕೊಂಡು ಬರಲಾಗುತ್ತಿದೆ’ ಎಂದು ಪೊಲೀಸರಿಗೆ ಮಾಹಿತಿ ಬರುತ್ತದೆ. ಆದರೆ, ಇದಕ್ಕೆ ಪೊಲೀಸರು ಹೆದರಲ್ಲ. ಏಕೆಂದರೆ ಅವರ ಬಳಿ ಮ್ಯಾಕ್ಸ್ ಇದ್ದಾನೆ. ‘ಬರುವವರು ಜ್ವಾಲಾಮುಖಿಯಿಂದ, ಚಂಡಮಾರುತದಿಂದ, ಭೂಕಂಪದಿಂದ, ಸುನಾಮಿಯಿಂದ ತಪ್ಪಿಸಿಕೊಳ್ಳಬಹುದು. ಆದರೆ, ಇವನ ಹತ್ರ ಸಿಕ್ಕಿಬಿದ್ದರೆ ಸಾವೇ ಇಲ್ಲ ಎಂದು ವರ ಪಡೆದು ಹುಟ್ಟಿದವನಿಗೂ ಸಾವು ಗ್ಯಾರಂಟಿ’ ಎನ್ನುತ್ತಾರೆ ಪೊಲೀಸರು.


ಬಳಿಕ ಲಾಟಿ ಹಿಡಿದು ಬರುತ್ತಾರೆ ಸುದೀಪ್. ಈ ಮೂಲಕ ಸುದೀಪ್ ಪೊಲೀಸ್ ಪಾತ್ರದ ಮೂಲಕ ತೆರೆಮೇಲೆ ಬರುವ ಸೂಚನೆ ನೀಡಿದ್ದಾರೆ. ಸುದೀಪ್ ಅವರಿಗೆ ಪೊಲೀಸ್ ಪಾತ್ರ ಚೆನ್ನಾಗಿ ಹೊಂದುತ್ತದೆ. ‘ಕೆಂಪೇಗೌಡ’, ‘ವರದನಾಯಕ’, ‘ಕಬ್ಜ’ ಸಿನಿಮಾಗಳಲ್ಲಿ ಸುದೀಪ್ ಅವರು ಪೊಲೀಸ್ ಆಗಿ ಕಾಣಿಸಿಕೊಂಡಿದ್ದರು. ಈಗ ಅವರು ‘ಮ್ಯಾಕ್ಸ್’ ಚಿತ್ರಕ್ಕಾಗಿ ಮತ್ತೆ ಖಾಕಿ ತೊಡುತ್ತಿದ್ದಾರೆ.
YouTube video player

ಇದನ್ನೂ ಓದಿ: 9 ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ ಕಿಚ್ಚ ಸುದೀಪ್: ಪೋಸ್ಟರ್ ಬಿಡುಗಡೆ

ಇದು ಪ್ಯಾನ್ ಇಂಡಿಯಾ ಚಿತ್ರ. ಈ ಕಾರಣದಿಂದಲೇ ಎಲ್ಲಾ ಭಾಷೆಗಳಿಗೂ ಹೊಂದಾಣಿಕೆ ಆಗುವಂಥ ಶೀರ್ಷಿಕೆಯನ್ನು ನೀಡಲಾಗಿದೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ. ವಿ ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಒಟ್ಟಾಗಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ವಿಜಯ್ ಕಾರ್ತಿಕೇಯ ನಿರ್ದೇಶನ ಚಿತ್ರಕ್ಕಿದೆ. ಸುದೀಪ್ ಬರ್ತ್​ಡೇ ಪ್ರಯುಕ್ತ ಹೊಸ ಹೊಸ ಸಿನಿಮಾ ಘೋಷಣೆ ಆಗುತ್ತಿದೆ. ಆರ್. ಚಂದ್ರು ಜೊತೆ ಸುದೀಪ್ ಸಿನಿಮಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಅವರು ಹಲವು ವರ್ಷಗಳ ಬಳಿಕ ಡೈರೆಕ್ಷನ್​ಗೆ ಇಳಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:12 am, Sat, 2 September 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us