9 ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ ಕಿಚ್ಚ ಸುದೀಪ್: ಪೋಸ್ಟರ್ ಬಿಡುಗಡೆ

Kichcha Sudeep: ಒಂಬತ್ತು ವರ್ಷಗಳ ಬಳಿಕ ಮತ್ತೆ ನಿರ್ದೇಶಕನ ಕ್ಯಾಪ್ ತೊಡುತ್ತಿದ್ದಾರೆ ಸುದೀಪ್. ನಟ ಸುದೀಪ್ ತಾವೆಷ್ಟು ಒಳ್ಳೆಯ ನಿರ್ದೇಶಕ ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾಗಿದೆ. ಆದರೆ ನಾನಾ ಕಾರಣದಿಂದ ಕಳೆದ 9 ವರ್ಷಗಳಿಂದ ನಿರ್ದೇಶನದಿಂದ ದೂರ ಉಳಿದಿದ್ದರು. ಆದರೆ ಈಗ ಮತ್ತೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ ಸುದೀಪ್.

9 ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ ಕಿಚ್ಚ ಸುದೀಪ್: ಪೋಸ್ಟರ್ ಬಿಡುಗಡೆ
ಸುದೀಪ್
Follow us
ಮಂಜುನಾಥ ಸಿ.
|

Updated on: Sep 01, 2023 | 7:27 PM

ಸುದೀಪ್ (Sudeep) ಬಹುಮುಖ ಪ್ರತಿಭೆಯುಳ್ಳ ನಟ. ಸಿನಿಮಾ ನಟನೆಯ ಜೊತೆಗೆ ಸಿನಿಮಾದ ಇತರೆ ಕಲೆಗಳ ಬಗ್ಗೆ ಆಸಕ್ತಿ ವಹಿಸಿರುವುದು ಮಾತ್ರವೇ ಅಲ್ಲದೆ ಕಲೆಗಳಲ್ಲಿ ಪರಿಣಿತಿಯನ್ನೂ ಹೊಂದಿದ್ದಾರೆ. ಅದರಲ್ಲಿಯೂ ಸುದೀಪ್ ಸಿನಿಮಾ ನಿರ್ದೇಶನದ ಬಗ್ಗೆ ಅತೀವ ಆಸಕ್ತಿ, ಒಳ್ಳೆಯ ಪರಿಣಿತಿಯನ್ನೂ ಹೊಂದಿದ್ದಾರೆ. ಇದಕ್ಕೆ ಅವರು ಈ ಹಿಂದೆ ನಿರ್ದೇಶಿಸಿರುವ (Direction) ಕೆಲವು ಸಿನಿಮಾಗಳೇ ಸಾಕ್ಷಿ. ಆದರೆ ಕಳೆದ 9 ವರ್ಷಗಳಿಂದ ಸುದೀಪ್ ಯಾವುದೇ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿಲ್ಲ. ಆದರೆ ಈಗ ಹೊಸ ಸಿನಿಮಾ ಒಂದನ್ನು ಸುದೀಪ್ ನಿರ್ದೇಶನ ಮಾಡುತ್ತಿದ್ದಾರೆ.

2014 ರಲ್ಲಿ ಬಿಡುಗಡೆ ಆಗಿದ್ದ ‘ಮಾಣಿಕ್ಯ’ ಸಿನಿಮಾದ ಬಳಿಕ ಯಾವುದೇ ಸಿನಿಮಾವನ್ನು ಸುದೀಪ್ ನಿರ್ದೇಶನ ಮಾಡಿರಲಿಲ್ಲ. ಆದರೆ ಈಗ ಮತ್ತೆ ನಿರ್ದೇಶನಕ್ಕೆ ಸುದೀಪ್ ಮರಳಿದ್ದಾರೆ. ಸುದೀಪ್ ನಿರ್ದೇಶಿಸಲಿರುವ ಸಿನಿಮಾವನ್ನು ಕೆಆರ್​ಜಿ ಸ್ಟುಡಿಯೋಸ್ ನಿರ್ಮಾಣ ಮಾಡಲಿದೆ. ಸಿನಿಮಾದ ಮೋಷನ್ ಪೋಸ್ಟರ್ ಇಂದು (ಸೆಪ್ಟೆಂಬರ್ 1) ಬಿಡುಗಡೆ ಆಗಿದ್ದು, ರಕ್ತಮಯವಾಗಿದೆ ಪೋಸ್ಟರ್. ಹರಡಿ ಬಿದ್ದ ಹಳೆಯ ದಿನ ಪತ್ರಿಕೆಗಳ ಮೇಲೆ ರಕ್ತ ಚೆಲ್ಲಾಡಿದೆ, ಅದರ ಮತ್ತೊಂದು ಬದಿಯಲ್ಲಿ ಹೆಣಗಳ ರಾಶಿ ಬಿದ್ದಿದೆ. ಈ ಬದಿಯಲ್ಲಿ ಸುದೀಪ್​ರ ನೆರಳು ಮಾತ್ರವೇ ಕಾಣುತ್ತಿದ್ದು, ಅದರಲ್ಲಿ ಕೈಗೆ ತೊಟ್ಟಿರುವ ಕೋಳ ಬಿಚ್ಚಿರುವುದು ಗಮನ ಸೆಳೆಯುತ್ತಿದೆ.

‘ದೇವರು ಕ್ಷಮಿಸುತ್ತಾನೆ ಆದರೆ ನಾನು ಕ್ಷಮಿಸುವುದಿಲ್ಲ’ ಎಂಬ ಟ್ಯಾಗ್ ಲೈನ್ ಅನ್ನು ಸಿನಿಮಾಕ್ಕೆ ನೀಡಲಾಗಿದೆ. ಸಿನಿಮಾಕ್ಕೆ ಸದ್ಯಕ್ಕೆ ‘ಕೆಕೆ’ ಎಂಬ ತಾತ್ಕಾಲಿಕ ಹೆಸರನ್ನಷ್ಟೆ ಇಡಲಾಗಿದೆ. ಸಿನಿಮಾದ ಶೂಟಿಂಗ್ 2024 ರಲ್ಲಿ ಶುರುವಾಗುವುದಾಗಿ ಮೋಷನ್ ಪೋಸ್ಟರ್​ನಲ್ಲಿ ಮಾಹಿತಿ ನೀಡಲಾಗಿದೆ. ಸಿನಿಮಾದ ಇನ್ನಿತರೆ ವಿಷಯಗಳ ಬಗ್ಗೆ ಇನ್ನಷ್ಟೆ ಸುದ್ದಿಗಳು ಹೊರಬೀಳಬೇಕಿದೆ. ಆದರೆ 9 ವರ್ಷಗಳ ಬಳಿಕ ಸುದೀಪ್ ಮತ್ತೆ ನಿರ್ದೇಶನದ ಕ್ಯಾಪ್ ತೊಟ್ಟಿರುವುದು ಸಹಜವಾಗಿಯೇ ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ನಿರೀಕ್ಷೆಯನ್ನೂ ಮೂಡಿಸಿದೆ.

ಇದನ್ನೂ ಓದಿ:ತಿಂಡಿಗೆ ಟೀ-ಬನ್, ತಿಂಗಳಿಗೆ ಒಂದೇ ಮೊಟ್ಟೆ: ಸುದೀಪ್ ಮುಂಬೈ ದಿನಗಳು ಸುಲಭದ್ದಾಗಿರಲಿಲ್ಲ

ಸುದೀಪ್ ಈ ವರೆಗೆ ಆರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇವುಗಳಲ್ಲಿ ಐದು ರೀಮೇಕ್ ಸಿನಿಮಾಗಳಾಗಿದ್ದರೂ ಸಹ, ಆಟೋಗ್ರಾಫ್, ಶಾಂತಿ ನಿವಾಸ ಅಂಥಹಾ ಸದಭಿರುಚಿಯ ಸಿನಿಮಾಗಳನ್ನು ನಿರ್ದೇಶನಕ್ಕೆ ಆಯ್ದುಕೊಂಡು ಅದಕ್ಕೆ ಭಿನ್ನ ಟಚ್ ನೀಡಿ ಹೊಸತಾಗಿ ಪ್ರೇಕ್ಷಕರ ಮುಂದೆ ಪ್ರೆಸೆಂಟ್ ಮಾಡಿದ್ದಾರೆ. ಕಮರ್ಷಿಯಲ್ ಸಿನಿಮಾಗಳಿಗೂ ತಮ್ಮದೇ ಆದ ಟಚ್ ನೀಡಿ ಪ್ರೆಸೆಂಟ್ ಮಾಡುವ ಗುಣ ಸುದೀಪ್​ಗೆ ಸಿದ್ದಿಸಿದೆ. ಅವರ ಸ್ವಮೇಕ್ ಸಿನಿಮಾ ‘ಜಸ್ಟ್ ಮಾತ್ ಮಾತಲ್ಲಿ’ ಸಹ ಸದಭಿರುಚಿಯ ಸಿನಿಮಾ ಆಗಿತ್ತು. 2014 ರಲ್ಲಿ ಬಿಡುಗಡೆ ಆಗಿದ್ದ ‘ಮಾಣಿಕ್ಯ’ ಸಿನಿಮಾ ಸುದೀಪ್ ನಿರ್ದೇಶನದ ಕೊನೆಯ ಸಿನಿಮಾ.

ನಾಳೆ (ಸೆಪ್ಟೆಂಬರ್ 2) ಸುದೀಪ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಸಂದರ್ಭ ಅವರ ಹಲವು ಸಿನಿಮಾಗಳ ಘೋಷಣೆ ಆಗಲಿವೆ. ಪ್ರಸ್ತುತ ಚಿತ್ರೀಕರಣಗೊಳ್ಳುತ್ತಿರುವ ಹೊಸ ಸಿನಿಮಾದ ಹೆಸರು ಘೋಷಣೆ ಆಗಲಿದೆ. ಹಲವು ಅಚ್ಚರಿಗಳನ್ನು ಸುದೀಪ್ ಅಭಿಮಾನಿಗಳು ಪ್ಲ್ಯಾನ್ ಮಾಡಿದ್ದಾರೆ. ಸುದೀಪ್​ರ ಪತ್ನಿ ಸಹ ಪತಿಗೆ ಅದ್ಧೂರಿ ಸರ್ಪ್ರೈಸ್ ಕೊಡುವುದಾಗಿ ಈಗಾಗಲೇ ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸುದೀಪ್​ ಹುಟ್ಟುಹಬ್ಬಕ್ಕೆ ಇನ್ನು ಕೆಲವು ಗಂಟೆಗಳು ಬಾಕಿ ಇರುವಂತೆಯೇ ಅಪ್​ಡೇಟ್​ಗಳು ಹೊರಬೀಳಲು ಆರಂಭವಾಗಿವೆ. ಸುದೀಪ್​ರ ಈ ಹುಟ್ಟುಹಬ್ಬ ಅವರಿಗೂ ಅವರ ಅಭಿಮಾನಿಗಳಿಗೂ, ಸಿನಿಮಾ ಪ್ರೇಮಿಗಳು ವಿಶೇಷವಾಗಿರುವುದು ಖಾತ್ರಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್