AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​. ಚಂದ್ರು ಜೊತೆ ಸುದೀಪ್​ ಹೊಸ ಸಿನಿಮಾ; ಸ್ಕ್ರಿಪ್ಟ್​​ ಕೆಲಸದಲ್ಲಿ ವಿಜಯೇಂದ್ರ ಪ್ರಸಾದ್​ ಭಾಗಿ

ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್​ ಅವರು ಚಿತ್ರರಂಗದಲ್ಲಿ ಬಹುಬೇಡಿಕೆಯ ಕಥೆಗಾರನಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಆರ್​. ಚಂದ್ರು ಅವರು ಸ್ಕ್ರಿಪ್ಟ್​ ತೋರಿಸಿದ್ದಾರೆ. ಆ ಕಾರಣದಿಂದ ಕಿಚ್ಚ ಸುದೀಪ್​ ಮತ್ತು ಆರ್​. ಚಂದ್ರು ಕಾಂಬಿನೇಷನ್​ನ ಈ ಹೊಸ ಸಿನಿಮಾ ಬಗ್ಗೆ ಹೈಪ್​ ಸೃಷ್ಟಿ ಆಗುವಂತಾಗಿದೆ.

ಆರ್​. ಚಂದ್ರು ಜೊತೆ ಸುದೀಪ್​ ಹೊಸ ಸಿನಿಮಾ; ಸ್ಕ್ರಿಪ್ಟ್​​ ಕೆಲಸದಲ್ಲಿ ವಿಜಯೇಂದ್ರ ಪ್ರಸಾದ್​ ಭಾಗಿ
ಕಿಚ್ಚ ಸುದೀಪ್​, ವಿಜಯೇಂದ್ರ ಪ್ರಸಾದ್​, ಆರ್​. ಚಂದ್ರು
Mangala RR
| Edited By: |

Updated on:Sep 01, 2023 | 4:48 PM

Share

ನಟ ಕಿಚ್ಚ ಸುದೀಪ್​ (Kichcha Sudeep) ಅವರು ‘ವಿಕ್ರಾಂತ್​ ರೋಣ’ ರಿಲೀಸ್​ ಆದ ಬಳಿಕ ಹಲವು ಕಥೆಗಳನ್ನು ಕೇಳಿದ್ದಾರೆ. ಆ ಪೈಕಿ ‘Kichcha 46’ ಪ್ರಾಜೆಕ್ಟ್​ನ ಕೆಲಸಗಳು ಭರದಿಂದ ಸಾಗುತ್ತಿವೆ. ಈಗ ಹೊಸದೊಂದು ಸುದ್ದಿ ಕೇಳಿಬಂದಿದೆ. ನಿರ್ದೇಶಕ ಆರ್​. ಚಂದ್ರು (R. Chandru) ಜೊತೆ ಸುದೀಪ್​ ಅವರು ಕೈ ಜೋಡಿಸಲಿದ್ದಾರೆ. ಇವರಿಬ್ಬರ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಬರಲಿದೆ. ಇಂಟರೆಸ್ಟಿಂಗ್​ ವಿಚಾರ ಏನೆಂದರೆ, ಈ ಸಿನಿಮಾದ ಸ್ಕ್ರಿಪ್ಟ್​ ಕೆಲಸದಲ್ಲಿ ವಿಜಯೇಂದ್ರ ಪ್ರಸಾದ್​ (Vijayendra Prasad) ಅವರು ಸಾಥ್​ ನೀಡಿದ್ದಾರೆ. ಹಾಗಾಗಿ ಈ ಪ್ರಾಜೆಕ್ಟ್​ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ‘ಆರ್​.ಸಿ. ಸ್ಟುಡಿಯೋಸ್​’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ. ಕಿಚ್ಚ ಸುದೀಪ್​ ಅವರ ಜನ್ಮದಿನದ ಹೊಸ್ತಿಲಿನಲ್ಲಿ ಈ ಸುದ್ದಿ ಸಿಕ್ಕಿದೆ. ಸೆಪ್ಟೆಂಬರ್​ 2ರಂದು ಸುದೀಪ್​ ಅವರು ಅಭಿಮಾನಿಗಳ ಜೊತೆ ಸಂಭ್ರಮದಿಂದ ಬರ್ತ್​ಡೇ ಆಚರಿಸಿಕೊಳ್ಳಲಿದ್ದಾರೆ.

ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್​ ಅವರು ಚಿತ್ರರಂಗದಲ್ಲಿ ಬಹುಬೇಡಿಕೆಯ ಕಥೆಗಾರನಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಆರ್​. ಚಂದ್ರು ಅವರು ಸ್ಕ್ರಿಪ್ಟ್​ ತೋರಿಸಿದ್ದಾರೆ. ಅಲ್ಲದೇ, ಒಂದಷ್ಟು ಸಲಹೆ ಮತ್ತು ಮಾರ್ಗದರ್ಶನ ಪಡೆದುಕೊಂಡಿದ್ದಾರೆ. ಆ ಕಾರಣದಿಂದ ಕಿಚ್ಚ ಸುದೀಪ್​ ಮತ್ತು ಆರ್​. ಚಂದ್ರು ಕಾಂಬಿನೇಷನ್​ನ ಈ ಹೊಸ ಸಿನಿಮಾ ಬಗ್ಗೆ ಹೈಪ್​ ಸೃಷ್ಟಿ ಆಗುವಂತಾಗಿದೆ. ಆರ್​. ಚಂದ್ರು ನಿರ್ದೇಶಿಸಿದ ‘ಕಬ್ಜ’ ಸಿನಿಮಾದಲ್ಲೂ ಸುದೀಪ್​ ಅವರು ಒಂದು ಪಾತ್ರ ಮಾಡಿದ್ದರು. ಈಗ ಅವರಿಬ್ಬರು ಮತ್ತೆ ಒಟ್ಟಾಗಿ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರೆ.

ಇದನ್ನೂ ಓದಿ: ‘ಕಿಚ್ಚನಿಗೆ ಒಂದು ಅಚ್ಚರಿ ಕಾದಿದೆ’: ಸುದೀಪ್​ ಬರ್ತ್​ಡೇಗೂ ಮುನ್ನ ಸಿಹಿ ಸುದ್ದಿ ನೀಡಿದ ಪತ್ನಿ ಪ್ರಿಯಾ

ಕನ್ನಡ ಚಿತ್ರರಂಗದಲ್ಲಿ ಆರ್​. ಚಂದ್ರು ಅವರು ವಿಶೇಷ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಲವ್​ಸ್ಟೋರಿ, ಅಂಡರ್​ವರ್ಲ್ಡ್​.. ಹೀಗೆ ಎಲ್ಲ ಬಗೆಯ ಸಿನಿಮಾಗಳನ್ನು ಅವರು ಮಾಡಿದ್ದಾರೆ. ಅವರ ‘ಕಬ್ಜ’ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಗಿತ್ತು. ಆ ಸಿನಿಮಾ ಬಳಿಕ ಚಂದ್ರು ಅವರು ಸುದೀಪ್​ ಜೊತೆ ಕೈ ಜೋಡಿಸುತ್ತಿದ್ದಾರೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಇದನ್ನೂ ಓದಿ: ಆಕಾಶದಲ್ಲಿನ ನಕ್ಷತ್ರಕ್ಕೆ ಕಿಚ್ಚ ಸುದೀಪ್​ ಹೆಸರು; ಹುಟ್ಟುಹಬ್ಬದ ಹೊಸ್ತಿಲಲ್ಲಿ ಹೀಗೊಂದು ಗೌರವ

ಸುದೀಪ್​ ಅವರ ಸಂಪೂರ್ಣ ಗಮನ ಈಗ ‘Kichcha 46’ ಸಿನಿಮಾದ ಮೇಲಿದೆ. ಆ ಸಿನಿಮಾದ ಶೀರ್ಷಿಕೆ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಬರ್ತ್​ಡೇ ಪ್ರಯುಕ್ತ ಟೈಟಲ್​ ರಿವೀಲ್​ ಆಗಲಿದೆ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಬೃಹತ್​ ಸೆಟ್​ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಹುಟ್ಟುಹಬ್ಬದ ಪ್ರಯುಕ್ತ ಸುದೀಪ್​ ಅವರು ಬ್ರೇಕ್​ ತೆಗೆದುಕೊಂಡಿದ್ದಾರೆ. ಆ ಬಳಿಕ ಮತ್ತೆ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:44 pm, Fri, 1 September 23

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ