ದಳಪತಿ ವಿಜಯ್​ ಮಗನಿಂದ ಸ್ಫೂರ್ತಿ ಪಡೆದು ಸಿನಿಮಾ ನಿರ್ದೇಶನ ಮಾಡಲಿರುವ ಸ್ಟಾರ್​ ನಟ ವಿಶಾಲ್

ಕಾಲಿವುಡ್​ನ ಖ್ಯಾತ ನಟ ವಿಶಾಲ್ ಇತ್ತೀಚೆಗೆ (ಆಗಸ್ಟ್ 29) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ದಳಪತಿ ವಿಜಯ್ ಮಗ ಜೇಸನ್ ಸಂಜಯ್​ನಿಂದ ಪ್ರಭಾವಿತನಾಗಿ ತಾವು ಕೂಡ ಸಿನಿಮಾ ನಿರ್ದೇಶನ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ದಳಪತಿ ವಿಜಯ್​ ಮಗನಿಂದ ಸ್ಫೂರ್ತಿ ಪಡೆದು ಸಿನಿಮಾ ನಿರ್ದೇಶನ ಮಾಡಲಿರುವ ಸ್ಟಾರ್​ ನಟ ವಿಶಾಲ್
ವಿಶಾಲ್​, ಜೇಸನ್​ ಸಂಜಯ್​
Follow us
TV9 Web
| Updated By: ಮದನ್​ ಕುಮಾರ್​

Updated on: Aug 30, 2023 | 4:02 PM

ತಮಿಳು ನಟ ವಿಶಾಲ್ (Actor Vishal) ಮಂಗಳವಾರ (ಆಗಸ್ಟ್ 29) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 46 ವರ್ಷದ ಅವರು ತಮ್ಮ ಸಿನಿ ಜೀವನದಲ್ಲಿ 40ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಯಲ್ಲಿ ಮಾತ್ರವಲ್ಲದೆ ನಿರ್ಮಾಣದಲ್ಲಿಯೂ ಅವರು ಯಶಸ್ಸು ಕಂಡಿದ್ದಾರೆ. ಅತ್ಯಂತ ಖುಷಿಯಿಂದ ಬರ್ತ್ ಡೇ (Vishal Birthday) ಆಚರಿಸಿಕೊಂಡ ಅವರು, ಹುಟ್ಟುಹಬ್ಬದ ಪ್ರಯುಕ್ತ ವೃದ್ಧರಿಗೆ ಹಣ್ಣನ್ನು ವಿತರಿಸಿದ್ದಾರೆ. ಅಷ್ಟೇ ಅಲ್ಲದೆ ಮಕ್ಕಳಿಗೆ ಬಂಗಾರದ ಉಂಗುರವನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ವಿಶಾಲ್ ಮಾತನಾಡಿ, ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಟಾರ್ ನಟನ ಪುತ್ರನೊಬ್ಬನಿಂದ ಪ್ರಭಾವಿತನಾಗಿ ತಾವೂ ಕೂಡ ನಿರ್ದೇಶನಕ್ಕೆ (Movie Direction) ಇಳಿಯಬೇಕು ಎಂದು ವಿಶಾಲ್ ತೀರ್ಮಾನಿಸಿದ್ದಾರೆ.

ಹೌದು, ವಿಶಾಲ್ ಅವರು ಕಾಲಿವುಡ್ ನಟ ದಳಪತಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್​ನಿಂದ ಸ್ಫೂರ್ತಿ ಪಡೆದಿದ್ದಾರೆ. ಲಂಡನ್​ನಲ್ಲಿ ಸಿನಿಮಾವನ್ನು ಶಾಸ್ತ್ರೀಯವಾಗಿ ಓದಿಕೊಂಡು ಬಂದಿರುವ ಜೇಸನ್ ಅವರು ನಿರ್ದೇಶನದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಪ್ರತಿಷ್ಠಿತ ‘ಲೈಕಾ ಪ್ರೊಡಕ್ಷನ್ಸ್​’ ಸಂಸ್ಥೆಯು ಈ ಚಿತ್ರಕ್ಕೆ ಹಣ ಹೂಡಲಿದೆ. ‘ಲೈಕಾ ಪ್ರೊಡಕ್ಷನ್ಸ್​’ ಸಂಸ್ಥೆಯು ಕನ್ನಡದಲ್ಲಿಯೂ ಸಿನಿಮಾ ಮಾಡಲು ಮಂದೆ ಬಂದಿದ್ದು, ನಿಖಿಲ್ ಕುಮಾರಸ್ವಾಮಿ ಮುಂದಿನ ಚಿತ್ರಕ್ಕೆ ಹಣ ಹೂಡುತ್ತಿದೆ. ಈ ಸಂಸ್ಥೆ ‘ಕತ್ತಿ’ ‘ಪಿಎಸ್-1’, ‘ಪಿಎಸ್-2’ ಮೊದಲಾದ ಸಿನಿಮಾಗಳಿಗೆ ಹಣ ಹೂಡಿತ್ತು.

ಇದನ್ನೂ ಓದಿ: Vishal: ವಿಶಾಲ್​ ಮನೆ ಮೇಲೆ ಕಲ್ಲು ತೂರಾಟ; ಸಿಸಿಟಿವಿ ವಿಡಿಯೋ ನೋಡಿ ಅಭಿಮಾನಿಗಳಲ್ಲಿ ಆತಂಕ

ತಮ್ಮ ನಿರ್ದೇಶನದ ಕನಸಿನ ಬಗ್ಗೆ ಮಾತನಾಡಿರುವ ವಿಶಾಲ್ ಅವರು, ‘ನಾನು ಕಳೆದ 25 ವರ್ಷಗಳಿಂದ ನಿರ್ದೇಶನ ಮಾಡಬೇಕು ಎಂದುಕೊಂಡಿದ್ದೆ. ಆದರೆ, ಸಾಧ್ಯವಾಗಿರಲಿಲ್ಲ. ನಿನ್ನೆ ಜೇನಸ್ ನಿರ್ದೇಶನದ ಕುರಿತು ಅನೌನ್ಸ್ ಮಾಡಿರುವುದು ತಿಳಿಯಿತು. ಇದರಿಂದ ನಾನು ಕೂಡ ಪ್ರಭಾವಿತನಾಗಿದ್ದೇನೆ. ಅವನಿಗೆ ಯಶಸ್ಸು ಸಿಗಲಿ ಅಂತ ಹಾರೈಸುತ್ತೇನೆ. ಯುವಕರು ಸಿನಿಮಾ ಮಾಡಲು ಮುಂದೆ ಬರುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್​ ಮಗ ಜೇಸನ್​ ಸಂಜಯ್​ ಈಗ ಡೈರೆಕ್ಟರ್​; ‘ಲೈಕಾ ಪ್ರೊಡಕ್ಷನ್ಸ್’ ಜೊತೆ ಕೈ ಜೋಡಿಸಿದ ಸ್ಟಾರ್​ ಕಿಡ್​

ಇದೇ ಸಂದರ್ಭದಲ್ಲಿ ದಳಪತಿ ವಿಜಯ್ ಕುರಿತಾಗಿಯೂ ವಿಶಾಲ್ ಮಾತನಾಡಿದ್ದಾರೆ. ‘ವಿಜಯ್ ನನಗೆ ಕಾಲೇಜು ದಿನಗಳಿಂದಲೇ ಪರಿಚಯ. ಅವರ ನಟನೆಯನ್ನು ನಾನು ಸದಾ ಮೆಚ್ಚಿಕೊಳ್ಳತ್ತೇನೆ. ನಟನೆಯ ಆರಂಭದ ದಿನಗಳಲ್ಲಿ ವಿಜಯ್ ಟೀಕೆಗೊಳಗಾಗಿದ್ದರು. ಆದರೆ ಅವರ ತಾಳ್ಮೆಯನ್ನು ಮೆಚ್ಚಲೇಬೇಕು. ನನಗೆ ಅವರು ಸದಾ ಮಾರ್ಗದರ್ಶಿ. ತಮಿಳು ಸಿನಿಮಾಗೆ ಒಬ್ಬರೇ ವಿಜಯ್, ಅದು ದಳಪತಿ ವಿಜಯ್​. ಅವರ ಸಿನಿಮಾಗಳನ್ನು ನಾನು ಅಂದು ಇಂದೂ ಫಸ್ಟ್ ಡೇ ಫಸ್ಟ್ ಶೋವನ್ನೇ ನೋಡುತ್ತೇನೆ. ಅವರು ರಾಜಕೀಯಕ್ಕೂ ಕಾಲಿಡುತ್ತಿದ್ದಾರೆ. ಅವರ ರಾಜಕೀಯ ಜೀವನ ಸುಗಮವಾಗಿರಲಿ’ ಎಂದು ವಿಶಾಲ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ