Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹನಟಿಯನ್ನು ವಿವಾಹವಾಗಲಿದ್ದಾರೆಯೇ ತಮಿಳು ನಟ ವಿಶಾಲ್?

Vishal: ತಮಿಳು ನಟ ವಿಶಾಲ್ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ವಿಶಾಲ್​ರ ಮಾಜಿ ಸಹನಟಿಯೊಟ್ಟಿಗೆ ಹೆಸರು ಕೇಳಿ ಬಂದಿದೆ.

ಸಹನಟಿಯನ್ನು ವಿವಾಹವಾಗಲಿದ್ದಾರೆಯೇ ತಮಿಳು ನಟ ವಿಶಾಲ್?
ವಿಶಾಲ್-ಲಕ್ಷ್ಮಿ
Follow us
ಮಂಜುನಾಥ ಸಿ.
|

Updated on: Aug 11, 2023 | 8:05 AM

ತಮಿಳು ನಟ ವಿಶಾಲ್ (Vishal) ತಮ್ಮ ಸಿನಿಮಾಗಳ ಮೂಲಕ ಮಾತ್ರವೇ ಅಲ್ಲದೆ ವಿವಾದಗಳ ಮೂಲಕವೂ ಜನಪ್ರಿಯರು. ವಿಶಾಲ್ ಅವರ ಖಾಸಗಿ ಜೀವನ ಸಹ ಹಲವು ಬಾರಿ ಸುದ್ದಿಗೆ ಬಂದಿದೆ. ಅದರಲಿಯೂ ಅವರ ಮದುವೆ ಬಗ್ಗೆ ಮಾಧ್ಯಮಗಳಲ್ಲಿ ಆಗಾಗ್ಗೆ ವರದಿಗಳು ಬರುವುದು ತೀರಾ ಸಾಮಾನ್ಯ. ಹಾಗೆಯೇ ಈ ಬಾರಿ ಹೊಸದೊಂದು ಸುದ್ದಿ ಬಂದಿದ್ದು ಮಾಜಿ ಸಹನಟಿಯನ್ನೇ ವಿಶಾಲ್ ವರಿಸಲಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ ಒಟ್ಟಿಗೆ ನಟಿಸಿದ್ದ ನಟಿ ಲಕ್ಷ್ಮಿ ಮೆನನ್ ಜೊತೆ ವಿಶಾಲ್ ವಿವಾಹ ಶೀಘ್ರದಲ್ಲಿಯೇ ನಡೆಯಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಕಾಲಿವುಡ್ ಮಾಧ್ಯಮಗಳಲ್ಲಿ ಜೋರಾಗಿ ಸುದ್ದಿ ಹರಿದಾಡುತ್ತಿದೆ. ಲಕ್ಷ್ಮಿ ಮೆನನ್ ಹಾಗೂ ವಿಶಾಲ್ ‘ಪಾಂಡಿಯ ನಾಡು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಇಬ್ಬರ ನಡುವೆ ಪ್ರೇಮ ಪ್ರಕರಣ ನಡೆಯುತ್ತಿದ್ದು ಈ ಜೋಡಿ ಶೀಘ್ರದಲ್ಲಿಯೇ ವಿವಾಹ ಆಗಲಿದೆ ಎನ್ನಲಾಗುತ್ತಿದೆ.

ನಟ ವಿಶಾಲ್ ಹೆಸರು ಈ ಹಿಂದೆ ಹಲವು ನಟಿಯರೊಟ್ಟಿಗೆ ಕೇಳಿ ಬಂದಿದೆ. ಖ್ಯಾತ ನಟ ಶರತ್​ಕುಮಾರ್ ಪುತ್ರಿ ವರಲಕ್ಷ್ಮಿ ಶರತ್​ಕುಮಾರ್ ಜೊತೆಗೂ ವಿಶಾಲ್ ಹೆಸರು ತುಸು ಜೋರಾಗಿಯೇ ಕೇಳಿ ಬಂದಿತ್ತು. ಆದರೆ ನಟಿ ವರಲಕ್ಷ್ಮಿ ‘ನಾನು ಹಾಗೂ ವಿಶಾಲ್ ಪರಸ್ಪರ ಗೆಳೆಯರಷ್ಟೆ’ ಎಂದಿದ್ದಾರೆ. ಹಾಗಿದ್ದರೂ ಸಹ ಈ ಇಬ್ಬರ ಬಗ್ಗೆ ಆಗಾಗ್ಗೆ ಗಾಳಿ ಸುದ್ದಿ ಹರಿದಾಡುತ್ತಲೇ ಇರುತ್ತದೆ.

ಇದನ್ನೂ ಓದಿ:ಸಿಂಬು, ವಿಶಾಲ್ ಸೇರಿ ಐವರು ನಟರಿಗೆ ರೆಡ್ ಕಾರ್ಡ್​; ಇವರು ಮಾಡಿದ ತಪ್ಪೇನು?

ಕೆಲವು ದಿನಗಳ ಹಿಂದೆ, ವಿಶಾಲ್, ಶ್ರೀಲಂಕಾದ ಭಾರಿ ಉದ್ಯಮಿಯೊಬ್ಬರ ಪುತ್ರಿಯನ್ನು ವಿವಾಹವಾಗಲಿದ್ದಾರೆ, ಇಬ್ಬರ ನಡುವೆ ಮದುವೆ ಮಾತುಕತೆ ಆಗಿದೆ ಎಂಬ ಸುದ್ದಿಯೂ ಹರಿದಾಡಿತ್ತು. ತಮಿಳುನಾಡು ಮೂಲದ ಆದರೆ ಶ್ರೀಲಂಕಾದಲ್ಲಿ ನೆಲೆಸಿರುವ ಭಾರಿ ಉದ್ಯಮಿಯೊಬ್ಬರ ಪುತ್ರಿ ಹಾಗೂ ವಿಶಾಲ್​ ನಡುವೆ ಶೀಘ್ರದಲ್ಲಿಯೇ ನಿಶ್ಚಿತಾರ್ಥ ಆಗಲಿದೆ ಎನ್ನಲಾಯ್ತು, ಆದರೆ ಆ ಸುದ್ದಿಯೂ ಸುಳ್ಳಾಯ್ತು.

ವಿಶಾಲ್ ತಮಿಳಿನ ಸ್ಟಾರ್ ನಟರಲ್ಲಿ ಒಬ್ಬರು. ಆದರೆ ಇತ್ತೀಚೆಗೆ ಸೂಕ್ತವಾದ ಯಶಸ್ಸೊಂದು ವಿಶಾಲ್​ಗೆ ಧಕ್ಕಿಲ್ಲ. ಅಲ್ಲದೆ ತಮ್ಮ ವಾರಗೆಯ ಕೆಲವು ನಟರು ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್​ಗಳಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಆದರೆ ವಿಶಾಲ್ ಈಗಲೂ ಸೋಲಿನ ಮೇಲೆ ಸೋಲು ಕಾಣುತ್ತಿದ್ದಾರೆ, ಇದು ಸಹಜವಾಗಿಯೇ ವಿಶಾಲ್​ಗೆ ಅಸಮಾಧಾನ ಉಂಟು ಮಾಡಿದೆ.

ಸಿನಿಮಾ ಹೊರತಾಗಿ ರಾಜಕೀಯ, ತಮಿಳು ಚಿತ್ರರಂಗದ ವಿವಿಧ ಸಂಘಗಳ ರಾಜಕೀಯದಲ್ಲಿಯೂ ವಿಶಾಲ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪುನೀತ್ ರಾಜ್​ಕುಮಾರ್ ನಿಧನರಾದಾಗ ತೀವ್ರ ಸಂತಾಪ ವ್ಯಕ್ತಪಡಿಸಿದ್ದ ವಿಶಾಲ್, ಶಿವರಾಜ್ ಕುಮಾರ್ ನಡೆಸುತ್ತಿರುವ ಶಕ್ತಿಧಾಮವನ್ನು ತಾವು ಮುನ್ನಡೆಸಿಕೊಂಡು ಹೋಗುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ ಶಿವರಾಜ್ ಕುಮಾರ್, ವಿಶಾಲ್​ರ ಮವಿಯನ್ನು ತಿರಸ್ಕರಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ