ಬೆಂಗಳೂರು: ದೇಹಾರೋಗ್ಯಕ್ಕಾಗಿ ನಟನಟಿಯರು ವಿಭಿನ್ನ ರೀತಿಯ ಚಟುವಟಿಕೆಗಳಿಗೆ ಮೊರೆ ಹೋಗುವುದು ಸಾಮಾನ್ಯ ಸಂಗತಿ. ಇದೇ ರೀತಿ ತಮ್ಮ ದೇಹದ ಆರೋಗ್ಯದ ಬಗ್ಗೆ ಕಾಳಜಿ ತೋರಿಸುತ್ತಿರುವ ಸುದೀಪ್ ಇದೀಗ ಬ್ಯಾಡ್ಮಿಂಟನ್ ಆಡಲು ಆರಂಭಿಸಿದ್ದಾರೆ. ನಟ, ಫ್ಯಾಂಟಮ್ ಸಿನಿಮಾ ನಿರ್ದೇಶಕ ಅನೂಪ್ ಭಂಡಾರಿ ಕೂಡ ಸುದೀಪ್ಗೆ ಸಾಥ್ ನೀಡಿದ್ದಾರೆ.
ಜೆ.ಪಿ.ನಗರದ ಕ್ಲಬ್ನಲ್ಲಿ ಬ್ಯಾಡ್ಮಿಂಟನ್ ಆಡಲು ತೆರಳಿದ ಕಿಚ್ಚ ಸುದೀಪ್, ಸ್ಟೈಲಿಶ್ ಸ್ಲೀವ್ಲೆಸ್ ಟೀ ಶರ್ಟ್ ಧರಿಸಿ ಬ್ಯಾಡ್ಮಿಂಟನ್ ಆಡಿದ್ದಾರೆ. ಹೀಗೆ ಬ್ಯಾಡ್ಮಿಂಟನ್ ಮೂಲಕ ಫಿಟ್ನೆಸ್ ಕಾಪಾಡಿಕೊಳ್ಳುತ್ತಿರುವ ಸುದೀಪ್ ಅತಿ ಶೀಘ್ರದಲ್ಲಿಯೇ ರಿಯಾಲಿಟಿ ಶೋ ಒಂದರ ಮೂಲಕ ಮತ್ತೆ ಮನೆಮನೆಗೆ ಬರುವ ಸುದ್ದಿಯೂ ಜೋರಾಗಿ ಓಡಾಡುತ್ತಿದೆ.
ಅಂಬರೀಶ್ ಜೊತೆ 20ಕ್ಕೂ ಹೆಚ್ಚು ಸಿನಿಮಾ ಮಾಡಿದ್ದ ನಿರ್ದೇಶಕರ ಆರೋಗ್ಯ ವಿಚಾರಿಸಿದ ಕಿಚ್ಚ ಸುದೀಪ್