ಭಾನುವಾರ ಭರ್ಜರಿ ಗಳಿಕೆ ಮಾಡಿದ ‘ಕರಾವಳಿ’ ಸಿನಿಮಾ; ಒಟ್ಟೂ ಕಲೆಕ್ಷನ್ ಎಷ್ಟು?

Karavali Movie Box Office Collection: ವಿವಾದಗಳ ನಡುವೆಯೂ ತೆರೆಕಂಡ ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಅಭಿನಯದ 'ಕರಾವಳಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಪಾಸಿಟಿವ್ ವಿಮರ್ಶೆಗಳೊಂದಿಗೆ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿರುವ ಚಿತ್ರದ ಒಟ್ಟು ಗಳಿಕೆ ಈಗ 4 ಕೋಟಿ ರೂಪಾಯಿ ಸಮೀಪಿಸಿದೆ.

ಭಾನುವಾರ ಭರ್ಜರಿ ಗಳಿಕೆ ಮಾಡಿದ ‘ಕರಾವಳಿ’ ಸಿನಿಮಾ; ಒಟ್ಟೂ ಕಲೆಕ್ಷನ್ ಎಷ್ಟು?
ರಾಜ್

Updated on: Jul 27, 2026 | 7:31 AM

ಮುಖ್ಯಾಂಶಗಳು

  • ಮೂರೇ ದಿನಕ್ಕೆ 4 ಕೋಟಿಯ ಸಮೀಪ ಮುಟ್ಟಿದ 'ಕರಾವಳಿ'
  • ವಿವಾದಗಳನ್ನೆಲ್ಲ ಬದಿಗೊತ್ತಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ
  • ಕರಾವಳಿ ಮಣ್ಣಿನ ಸೊಗಡಿನ ಕಥೆಗೆ ಪ್ರೇಕ್ಷಕರು ಫಿದಾ

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ ‘ಕರಾವಳಿ’ (Karavali Movie) ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಸಾಧಾರಣ ಕಲೆಕ್ಷನ್ ಮಾಡಿತ್ತು. ಆದರೆ, ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಭಾರಿ ಏರಿಕೆ ಕಾಣುತ್ತಿದೆ. ಬಿಡುಗಡೆಯಾದ ಮೊದಲ ದಿನ ಕೇವಲ 68 ಲಕ್ಷ ರೂಪಾಯಿ ಗಳಿಸಿದ್ದ ಈ ಚಿತ್ರ, ಆ ಬಳಿಕ ಪ್ರೇಕ್ಷಕರಿಂದ ಸಿಕ್ಕ ಪಾಸಿಟಿವ್ ವಿಮರ್ಶೆಗಳ ಬೆಂಬಲದೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರಿಸುತ್ತಿದೆ. ಸದ್ಯ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾದ ಒಟ್ಟಾರೆ ಗಳಿಕೆ ಹೆಚ್ಚುತ್ತಿದೆ. ಸಿನಿಮಾದ ಒಟ್ಟೂ ಗಳಿಕೆ ನಾಲ್ಕು ಕೋಟಿ ರೂಪಾಯಿ ಸಮೀಪಕ್ಕೆ ಬಂದು ತಲುಪಿದೆ.

ಚಿತ್ರದ ದಿನಾವಾರು ಕಲೆಕ್ಷನ್ ನೋಡುವುದಾದರೆ, ಮೊದಲ ದಿನ 0.68 ಕೋಟಿ ರೂಪಾಯಿ ಗಳಿಸಿದ್ದ ಸಿನಿಮಾ, ಎರಡನೇ ದಿನ ಅಂದರೆ ಶನಿವಾರದಂದು 1.14 ಕೋಟಿ ರೂಪಾಯಿ ಬಾಚಿಕೊಂಡಿತು. ಇನ್ನು ಮೂರನೇ ದಿನ ಭಾನುವಾರದ ವೀಕೆಂಡ್ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಂಡ ಚಿತ್ರ 1.64 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಚಿತ್ರದ ಭಾರತದ ನೆಟ್ ಕಲೆಕ್ಷನ್ 3.46 ಕೋಟಿ ರೂಪಾಯಿಗೆ ತಲುಪಿದೆ. ಇಂಡಿಯಾ ಗ್ರಾಸ್ ಕಲೆಕ್ಷನ್ ಬರೋಬ್ಬರಿ 3.88 ಕೋಟಿ ರೂಪಾಯಿ ದಾಟಿದೆ ಎಂದು ಸ್ಯಾಸ್ನಿಲ್ಕ್​ ವರದಿ ಮಾಡಿದೆ.

ಇನ್ನು ಈ ಸಿನಿಮಾ ಬಿಡುಗಡೆಗೂ ಮುನ್ನ ನಟ ಪ್ರಜ್ವಲ್ ದೇವರಾಜ್ ವಿಷಯದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿಕೊಂಡಿತ್ತು. ಟ್ರೈಲರ್ ಲಾಂಚ್ ವೇಳೆ ಪ್ರಜ್ವಲ್ ದೇವರಾಜ್ ಗೈರುಹಾಜರಿ, ಸಂಭಾವನೆ ಬಾಕಿ ಹಾಗೂ ಅವರ ಧ್ವನಿಗೆ ಬೇರೆ ಕಲಾವಿದರಿಂದ ಡಬ್ಬಿಂಗ್ ಮಾಡಿಸಿದ ವಿಚಾರವಾಗಿ ಅಭಿಮಾನಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ: ರಾಜ್ ಬಿ. ಶೆಟ್ಟಿ ಹೋದಲ್ಲೆಲ್ಲ ‘ಕರಾವಳಿ’ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ; ವಿಡಿಯೋ ನೋಡಿ

ಸದ್ಯ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ, ಮಿತ್ರ ಹಾಗೂ ರಮೇಶ್ ಇಂದಿರ ಸೇರಿದಂತೆ ಪ್ರಮುಖ ತಾರಾಗಣದ ಅದ್ಭುತ ನಟನೆ ಮತ್ತು ಗುರುದತ್ ಗಾಣಿಗ ಅವರ ನಿರ್ದೇಶನವು ವಿವಾದಗಳನ್ನೆಲ್ಲ ಬದಿಗೊತ್ತಿ ಚಿತ್ರವನ್ನು ಯಶಸ್ಸಿನತ್ತ ಮುನ್ನಡೆಸುವಂತೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:30 am, Mon, 27 July 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us