ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್: ಪ್ರಶಾಂತ್ ನೀಲ್ ಬೇಡಿಕೆಗೆ ನೋ ಎಂದ ಸಂಜಯ್ ದತ್

ಶ್ವಾಸಕೋಶದ ಕ್ಯಾನ್ಸರಿನಿಂದ ಬಳಲುತ್ತಿದ್ದ ಸಂಜಯ್​ ದತ್​ ಕೆಜಿಎಫ್​-2 ಶೂಟಿಂಗ್​ಗೆ ಬರೋದೆ ಅನುಮಾನ ಎನ್ನಲಾಗಿತ್ತು. ಆದರೆ, ಈಗ ಅವರು ಕ್ಯಾನ್ಸರ್​​ನಿಂದ ಗುಣಮುಖರಾಗಿದ್ದು, ಮತ್ತೆ ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಮಧ್ಯೆ ಅವರು ಎಲ್ಲರಿಗೂ ಅಚ್ಚರಿ ನೀಡಿದ್ದಾರೆ!

ಕೆಜಿಎಫ್ 2 ಕ್ಲೈಮ್ಯಾಕ್ಸ್ ಶೂಟಿಂಗ್: ಪ್ರಶಾಂತ್ ನೀಲ್ ಬೇಡಿಕೆಗೆ ನೋ ಎಂದ ಸಂಜಯ್ ದತ್
ಕೆಜಿಎಫ್ 2 ಚಿತ್ರದ ಸಂಜಯ್ ದತ್ ಪೋಸ್ಟರ್

Updated on: Dec 13, 2020 | 4:38 PM

ಶ್ವಾಸಕೋಶದ ಕ್ಯಾನ್ಸರಿನಿಂದ ಬಳಲುತ್ತಿದ್ದ ಸಂಜಯ್​ ದತ್​ ಕೆಜಿಎಫ್​-2 ಶೂಟಿಂಗ್​ಗೆ ಬರೋದೆ ಅನುಮಾನ ಎನ್ನಲಾಗಿತ್ತು. ಆದರೆ, ಈಗ ಅವರು ಕ್ಯಾನ್ಸರ್​​ನಿಂದ ಗುಣಮುಖರಾಗಿದ್ದು, ಮತ್ತೆ ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಮಧ್ಯೆ ಅವರು ಎಲ್ಲರಿಗೂ ಅಚ್ಚರಿ ನೀಡಿದ್ದಾರೆ!

ಸಂಜಯ್ ದತ್ ಅನಾರೋಗ್ಯದ ಕಾರಣ ಸಾಹಸ ದೃಶ್ಯಗಳಲ್ಲಿ ಡ್ಯೂಪ್ ಬಳಸಿ ಚಿತ್ರೀಕರಿಸೋಣ ಎಂದು ಚಿತ್ರತಂಡ ವಿನಂತಿಸಿತ್ತು. ಇದನ್ನು ನಿರಾಕರಿಸಿರುವ ದತ್, ತಾವೇ ಸಾಹಸ ದೃಶ್ಯಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ, ಸಂಜಯ್ ದತ್​ಗೆ ಭಲೇ! ಅಂತಿದ್ದಾರೆ ಸಿನಿಮಾ ಮಂದಿ.

ಸಂಜಯ್ ದತ್ ಅನಾರೋಗ್ಯದ ವೇಳೆ ಕೆಜಿಎಫ್​ 2 ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿತ್ತು. ಆದರೆ, ದತ್ ಅಭಿನಯಿಸಬೇಕಾದ ಕ್ಲೈಮಾಕ್ಸ್ ದೃಶ್ಯಗಳಷ್ಟೇ ಬಾಕಿ ಉಳಿದಿದ್ದವು. ಕೆಲವು ಕಷ್ಟದ ದೃಶ್ಯಗಳಿಗೆ ಡ್ಯೂಪ್​ ಹಾಕಲು ನಿರ್ದೇಶಕ ಪ್ರಶಾಂತ್​ ನೀಲ್​ ನಿರ್ಧರಿಸಿದ್ದರು.

ಆದರೆ, ಈಗ ಖುದ್ದು ಸಂಜಯ್​ ದತ್​ ಅವರೇ ಈ ದೃಶ್ಯಗಳನ್ನು ಮಾಡಲಿದ್ದಾರೆ. ಸಾಹಸ ಸನ್ನಿವೇಶ ಸಂಯೋಜನೆಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಅಂಬು ಮತ್ತು ಅರಿವು ಚಿತ್ರದ ಕ್ಲೈಮಾಕ್ಸ್ ದೃಶ್ಯದಲ್ಲಿ ಸಾಹಸ ನಿರ್ದೇಶನ ಮಾಡಲಿದ್ದಾರೆ. ಜೊತೆಗೆ, ಮುಂದಿನ ವರ್ಷದ ಸಂಕ್ರಾಂತಿಗೆ ಚಿತ್ರ ಮಂದಿರಗಳಲ್ಲಿ ರಾಕಿ ಭಾಯ್ ಹವಾ ಶುರುವಾಗುವ ಎಲ್ಲಾ ಸಾಧ್ಯತೆಗಳೂ ಇವೆ.

ಕೆಜಿಎಫ್ 2: ಯಶ್ ಮತ್ತೊಂದು ಲುಕ್ ರಿವೀಲ್

Published On - 3:42 pm, Sun, 13 December 20