ನಾನು ಮಾಡಿರುವುದು ತುಂಬಾ ದೊಡ್ಡ ತಪ್ಪು: ವಿಷ್ಣು ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ ವಿಜಯ್ ರಂಗರಾಜು
ಸಾಹಸ ಸಿಂಹ ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ತೆಲುಗು ನಟ ವಿಜಯ ರಂಗರಾಜು ಕೊನೆಗೂ ಕ್ಷಮೆ ಯಾಚಿಸಿದ್ದಾರೆ. ‘ವಿಷ್ಣುದಾದಾ ಬಗ್ಗೆ ನಾನು ಮಾತನಾಡಿರುವುದು ತಪ್ಪು’ ಎಂದು ಕೈಮುಗಿದು, ಕಣ್ಣೀರು ಹಾಕಿ ಅವರು ಸಾಹಸ ಸಿಂಹನ ಅಭಿಮಾನಿಗಳಿಗೆ ಕೈಮುಗಿದಿದ್ದಾರೆ.
ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ತೆಲುಗು ನಟ ವಿಜಯ ರಂಗರಾಜು ಕೊನೆಗೂ ಕ್ಷಮೆ ಯಾಚಿಸಿದ್ದಾರೆ. ‘ವಿಷ್ಣುದಾದಾ ಬಗ್ಗೆ ನಾನು ಮಾತನಾಡಿರುವುದು ತಪ್ಪು’ ಎಂದು ಕಣ್ಣೀರು ಹಾಕಿ ವಿಜಯ್ ರಂಗರಾಜು ಸಾಹಸ ಸಿಂಹನ ಅಭಿಮಾನಿಗಳಿಗೆ ಕೈಮುಗಿದಿದ್ದಾರೆ.
ನಾನು ಮಾಡಿರೋದು ತುಂಬಾ ದೊಡ್ಡ ತಪ್ಪು ಎಂದಿರುವ ಅವರು, ವಿಷ್ಣು ಅಭಿಮಾನಿಗಳು, ವಿಷ್ಣು ಕುಟುಂಬ ಮತ್ತು ಎಲ್ಲಾ ಕನ್ನಡಿಗ ಸ್ಟಾರ್ ಗಳಿಗೆ ಅಂಗಲಾಚಿ ಕ್ಷಮೆ ಕೇಳುವೆನೆಂದು ತಿಳಿಸಿದ್ದಾರೆ. ಇತ್ತೀಚಿಗೆ, ವಿಜಯ ರಂಗರಾಜು ವಿಷ್ಣುವರ್ಧನ್ ವಿರುದ್ಧ ನೀಡಿದ್ದ ಅವಹೇಳನಕಾರಿ ಹೇಳಿಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ಸಾಹಸಸಿಂಹನ ಅವಹೇಳನ: ತೆಲುಗು ನಟನ ವಿರುದ್ಧ ಗುಡುಗಿದ ಕನ್ನಡ ಚಿತ್ರತಾರೆಯರು
Published On - 1:29 pm, Sun, 13 December 20