‘ಸಲಗ’ನಿಗಾಗಿ ಸಿದ್ಧವಾಯ್ತು ಶಾಸನ: ದುನಿಯಾ ವಿಜಿಗೆ ಅಭಿಮಾನಿಯ ಸ್ಪೆಷಲ್ ಸರ್ಪ್ರೈಸ್!
ರಾಜರ ಕಾಲದಲ್ಲಿ ಪ್ರಮುಖ ಘಟನೆಗಳನ್ನು ದಾಖಲಿಸಲು ಕಲ್ಲಿನಿಂದ ಶಾಸನ ಬರೆಸುತ್ತಿದ್ದರು. ಈ ಮೂಲಕ ಮುಂದಿನ ಪೀಳಿಗೆಗೆ ಈ ವಿಚಾರವನ್ನು ತಲುಪಿಸುವ ಕೆಲಸ ಮಾಡುತ್ತಿದ್ದರು. ಈಗ ದುನಿಯಾ ವಿಜಯ್ರ ಅಭಿಮಾನಿಯೊಬ್ಬ ಸಲಗ ಚಿತ್ರದ ಬಗ್ಗೆ ಶಾಸನವನ್ನೇ ಬರೆದು ತಂದಿದ್ದಾನೆ.
ಬೆಂಗಳೂರು: ನಟನೆಯ ಮೂಲಕ ಹೆಸರು ಮಾಡಿರುವ ದುನಿಯಾ ವಿಜಯ್ ಸಲಗ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ದೊಡ್ಡ ಮಟ್ಟದಲ್ಲಿ ಕುತೂಹಲ ಸೃಷ್ಟಿಸಿದೆ. ಈಗ, ಸಲಗ ಚಿತ್ರಕ್ಕಾಗಿ ಅಭಿಮಾನಿಯೋರ್ವ ಶಾಸನ ಒಂದನ್ನು ರಚನೆ ಮಾಡಿ, ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾನೆ.
ರಾಜರ ಕಾಲದಲ್ಲಿ ಪ್ರಮುಖ ಘಟನೆಗಳನ್ನು ದಾಖಲಿಸಲು ಕಲ್ಲಿನಿಂದ ಶಾಸನ ಬರೆಸುತ್ತಿದ್ದರು. ಈ ಮೂಲಕ ಮುಂದಿನ ಪೀಳಿಗೆಗೆ ಈ ವಿಚಾರವನ್ನು ತಲುಪಿಸುವ ಕೆಲಸ ಮಾಡುತ್ತಿದ್ದರು. ಈಗ ದುನಿಯಾ ವಿಜಯ್ರ ಅಭಿಮಾನಿಯೊಬ್ಬ ಸಲಗ ಚಿತ್ರದ ಬಗ್ಗೆ ಶಾಸನವನ್ನೇ ಬರೆದು ತಂದಿದ್ದಾನೆ.
ಅಂದ ಹಾಗೆ, ಈ ಅಭಿಮಾನಿ ಹೆಸರು ಗಿರೀಶ್ ಆಚಾರ್. ಈತ ಪುರಾತನ ಶಿಲಾಶಾಸನದ ಮಾದರಿಯಲ್ಲೇ ಸಲಗ ಸಿನಿಮಾದ ಶಾಸನವನ್ನು ರಚನೆ ಮಾಡಿದ್ದಾನೆ. ಸ್ತಬ್ಧಚಿತ್ರದ ಮಾದರಿಯಲ್ಲಿ ಈ ಶಾಸನ ಸಿದ್ಧವಾಗಿದೆ. ಸಲಗ ಶತದಿನ ಆಚರಿಸಲಿದೆ ಎನ್ನುವುದನ್ನು ಇದರಲ್ಲಿ ಹೇಳಲಾಗಿದೆ. ಇದನ್ನು, ಖುದ್ದು ದುನಿಯಾ ವಿಜಯ್ ಅನಾವರಣ ಮಾಡಿದ್ದಾರೆ.
ಹೊಸ ವರ್ಷಕ್ಕೆ ಬರಲಿದ್ದಾನೆ ಸಲಗ! ಕೊರೊನಾ ಹಿನ್ನೆಲೆಯಲ್ಲಿ ಜನರು ಚಿತ್ರಮಂದಿರಕ್ಕೆ ಅಷ್ಟಾಗಿ ಬರುತ್ತಿರಲಿಲ್ಲ. ಆದಾರೆ, ಈಗ ನಿಧಾನವಾಗಿ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದ್ದು ನಿಧಾನವಾಗಿ ಜನರು ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದೇ ವಿಶ್ವಾಸದ ಮೇಲೆ ಹೊಸ ವರ್ಷಕ್ಕೆ ಸಲಗ ಸಿನಿಮಾ ರಿಲೀಸ್ ಆಗುತ್ತಿದೆ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರೋ ಈ ಸಿನಿಮಾದಲ್ಲಿ ಡಾಲಿ ಧನಂಜಯ, ಸಂಜನಾ ಆನಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಮತ್ತು ಹಾಡುಗಳಿಂದ ಗಮನ ಸೆಳೆದಿರುವ ಸಲಗ ಪ್ರೇಕ್ಷಕರಲ್ಲಿ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿದೆ.
ಸಲಗನಿಗೆ ಸಿಕ್ತು ಸೂಪರ್ ‘ಪವರ್’.. ಮಳೆಯೇ ಸಾಂಗ್ ರಿಲೀಸ್ಗೆ ಪುನೀತ್ ಅಸ್ತು!