AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ರಂಗರಾಜು ಕ್ಷಮೆಗೆ ಅರ್ಹರಲ್ಲ: ತೆಲುಗು ನಟನ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ

ವಿಷ್ಣುವರ್ಧನ್ ಭೌತಿಕವಾಗಿ ನಮ್ಮನ್ನಗಲಿದರೂ ಕನ್ನಡಿಗರು ಸಾಹಸಸಿಂಹನನ್ನು ಮರೆತಿಲ್ಲ. ವಿಜಯ್ ರಂಗರಾಜು ಕ್ಷಮೆಗೆ ಅರ್ಹರಲ್ಲ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.

ವಿಜಯ್ ರಂಗರಾಜು ಕ್ಷಮೆಗೆ ಅರ್ಹರಲ್ಲ: ತೆಲುಗು ನಟನ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ
ಅಂಬರೀಷ್, ಸುಮಲತಾ ಮತ್ತು ವಿಷ್ಣುವರ್ಧನ್
Follow us
guruganesh bhat
| Updated By: ಆಯೇಷಾ ಬಾನು

Updated on:Dec 14, 2020 | 11:01 AM

ಬೆಂಗಳೂರು: ತೆಲುಗು ನಟ ವಿಜಯ್ ರಂಗರಾಜು ವಿರುದ್ಧ ಕನ್ನಡಿಗರ ಕೋಪ ತಣ್ಣಗಾಗುವಂತಿಲ್ಲ. ರಂಗರಾಜು ಕ್ಷಮೆಯಾಚಿಸಬೇಕೆಂದು ಕನ್ನಡ ಚಿತ್ರೋದ್ಯಮದ ಹಲವು ಸ್ಟಾರ್ ಕಲಾವಿದರು ಆಗ್ರಹಿಸಿದ್ದರು. ವಿಜಯ್ ರಂಗರಾಜು ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದಾರೆ. ಆದರೆ ಇದರಿಂದ ಸುಮಲತಾ ಅಂಬರೀಷ್ ಅವರ ಕೋಪ ತಣಿದಿಲ್ಲ.

ಟ್ವಿಟರ್​​ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ‘ಇತ್ತೀಚಿನ ದಿನಗಳಲ್ಲಿ ಜನಪ್ರಿಯ ವ್ಯಕ್ತಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಪ್ರಚಾರ ಪಡೆಯುವುದು ಕೆಲವರಿಗೆ ಹವ್ಯಾಸವಾಗಿ ಹೋಗಿದೆ. ಇಡೀ ದೇಶಕ್ಕೇ, ಅದರಲ್ಲೂ ದಕ್ಷಿಣ ಭಾರತೀಯ ಚಿತ್ರ ರಸಿಕರಿಗೆ ನಮ್ಮ ಕರ್ನಾಟಕದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಘನತೆ ಏನೆಂಬುವುದು ಚೆನ್ನಾಗಿಯೇ ಗೊತ್ತು’ ಎಂದು ಗುಡುಗಿದ್ದಾರೆ.

ಒಟ್ಟು ಐದು ಟ್ವೀಟ್ ಮಾಡಿರುವ ಅವರು, ವಿಷ್ಣುವರ್ಧನ್ ಭೌತಿಕವಾಗಿ ನಮ್ಮನ್ನಗಲಿದರೂ ಕನ್ನಡಿಗರು ಸಾಹಸಸಿಂಹನನ್ನು ಮರೆತಿಲ್ಲ. ವಿಜಯ್ ರಂಗರಾಜು ಕ್ಷಮೆಗೆ ಅರ್ಹರಲ್ಲ. ವಿಷ್ಣು ಅವಹೇಳನ ಕ್ಷಮಿಸಲಾಗದ ಅಪರಾಧ ಎಂದು ಅವರು ಹರಿಹಾಯ್ದಿದ್ದಾರೆ. ಯಾವ ವ್ಯಕ್ತಿಯ ಕುರಿತಾದರೂ ಬದುಕಿದ್ದಾಗಲೇ ಮಾತನಾಡಬೇಕು. ನಿಧನದ ನಂತರ ಚಾರಿತ್ರ್ಯಹರಣ ಮಾಡಬಾರದು ಎಂದಿದ್ದಾರೆ. ಒಟ್ಟಿನಲ್ಲಿ, ಸಾಹಸ ಸಿಂಹನನ್ನು ಅವಹೇಳನ ಮಾಡಿ ವಿಜಯ್ ರಂಗರಾಜು ಪಡಬಾರದ ಪಡಿಪಾಟಲು ಪಡುತ್ತಿರುವುದಂತೂ ಸತ್ಯ.

ನಾನು ಮಾಡಿರುವುದು ತುಂಬಾ ದೊಡ್ಡ ತಪ್ಪು: ವಿಷ್ಣು ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ ವಿಜಯ್ ರಂಗರಾಜು

ಸಾಹಸಸಿಂಹನ ಅವಹೇಳನ: ತೆಲುಗು ನಟನ ವಿರುದ್ಧ ಗುಡುಗಿದ ಕನ್ನಡ ಚಿತ್ರತಾರೆಯರು

Published On - 3:06 pm, Sun, 13 December 20

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು