ಸಂಜನಾರನ್ನು ಬಲವಂತವಾಗಿ ಮತಾಂತರ ಮಾಡಿದ್ದಾರೆ -ಮೌಲ್ವಿ ವಿರುದ್ಧ ಠಾಣೆಗೆ ದೂರು
ಸಂಜನಾರನ್ನ ಮುಸ್ಲಿಂ ಧರ್ಮಕ್ಕೆ ಸೇರಿಸಿಕೊಂಡಿದ್ದ ಮೌಲ್ವಿ ವಿರುದ್ಧ ಕಾಟನ್‌ಪೇಟೆ ಠಾಣೆಗೆ ದೂರು ನೀಡಲಾಗಿದೆ. ಟ್ಯಾನರಿ ರೋಡ್‌ನ ದಾರುಲ್ ಉಲುಮ್ ಶಾ ವಲಿಯುಲ್ಲಾದ ಮೌಲ್ವಿಯೊಬ್ಬರ ವಿರುದ್ಧ ವಕೀಲ ಅಮೃತೇಶ್ ಕಾಟನ್‌ಪೇಟೆ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು: ಸಂಜನಾರನ್ನ ಮುಸ್ಲಿಂ ಧರ್ಮಕ್ಕೆ ಸೇರಿಸಿಕೊಂಡಿದ್ದ ಮೌಲ್ವಿ ವಿರುದ್ಧ ಕಾಟನ್‌ಪೇಟೆ ಠಾಣೆಗೆ ದೂರು ನೀಡಲಾಗಿದೆ. ಟ್ಯಾನರಿ ರೋಡ್‌ನ ದಾರುಲ್ ಉಲುಮ್ ಶಾ ವಲಿಯುಲ್ಲಾದ ಮೌಲ್ವಿಯೊಬ್ಬರ ವಿರುದ್ಧ ವಕೀಲ ಅಮೃತೇಶ್ ಕಾಟನ್‌ಪೇಟೆ ಠಾಣೆಗೆ ದೂರು ನೀಡಿದ್ದಾರೆ.
ನಟಿ ಸಂಜನಾರನ್ನು ಬಲವಂತವಾಗಿ ಮತಾಂತರ ಮಾಡಿದ್ದಾರೆ ಎಂದು ಕಾಟನ್‌ಪೇಟೆ ಠಾಣೆಗೆ ನೀಡಿರುವ ದೂರಿನಲ್ಲಿ ವಕೀಲ ಆರೋಪಿಸಿದ್ದಾರೆ. ಸದ್ಯ, ದೂರು ಸ್ವೀಕರಿಸಿರುವ ಪೊಲೀಸರು ಕಾನೂನು ಸಲಹೆ ಪಡೆಯಲು ಮುಂದಾಗಿದ್ದಾರೆ. ಸಂಜನಾರನ್ನು ಮುಸ್ಲಿಂ ಧರ್ಮಕ್ಕೆ ಸೇರಿಸಿಕೊಂಡ ಬಳಿಕ ಮಹಿರಾ ಎಂದು ಮರುನಾಮಕರಣ ಮಾಡಲಾಗಿತ್ತು.
ಜೈಲಿನಿಂದ ಬಿಡುಗಡೆ ಬಳಿಕ ಸಂಜನಾ ಅಜ್ಞಾತ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ. ಸೋಮವಾರ ನಟಿ ಸಂಜನಾ ಮನೆಗೆ ಬರುವ ಮಾಹಿತಿ ಲಭ್ಯವಾಗಿದೆ. ಇಂದಿರಾನಗರದಲ್ಲಿರುವ ತಮ್ಮ ನಿವಾಸಕ್ಕೆ ನಟಿ ಸಂಜನಾ ಬರಲಿದ್ದಾರೆ ಎಂದು ಹೇಳಲಾಗಿದೆ.
ಸಂಜನಾ ಮಹೀರಾ ಎಂದು ಹೇಳಿಕೊಳ್ಳದೆ ಇರುವುದು ಸಮಸ್ಯೆಯಲ್ಲ -ಮೌಲಾನಾ ಅಬ್ಬಿದ್ದೀನಿ ಸ್ಪಷ್ಟನೆ
Published On - 4:54 pm, Sun, 13 December 20