ಸಾಹಸಸಿಂಹನ ಅವಹೇಳನ: ತೆಲುಗು ನಟನ ವಿರುದ್ಧ ಗುಡುಗಿದ ಕನ್ನಡ ಚಿತ್ರತಾರೆಯರು

ಸಾಹಸಸಿಂಹ ವಿಷ್ಣುವರ್ಧನ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ತೆಲುಗು ಚಿತ್ರ ನಟ ವಿಜಯ್ ರಂಗರಾಜು ವಿರುದ್ಧ ಕನ್ನಡದ ಕಲಾವಿದರು ಹರಿಹಾಯ್ದಿದ್ದಾರೆ. ಕಿಚ್ಚ ಸುದೀಪ್, ಪುನೀತ್ ರಾಜ್​ಕುಮಾರ್, ನವರಸ ನಾಯಕ ಜಗ್ಗೇಶ್ ಸೇರಿದಂತೆ ಹಲವರು ಆಕ್ರೋಶ ಹೊರಹಾಕಿದ್ದಾರೆ.

ಸಾಹಸಸಿಂಹನ ಅವಹೇಳನ: ತೆಲುಗು ನಟನ ವಿರುದ್ಧ ಗುಡುಗಿದ ಕನ್ನಡ ಚಿತ್ರತಾರೆಯರು
ವಿಷ್ಣುವರ್ಧನ್, ರಂಗರಾಜು, ಪುನೀತ್ ರಾಜ್​ಕುಮಾರ್
guruganesh bhat

| Edited By: pruthvi Shankar

Jan 30, 2021 | 4:35 PM

ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ತೆಲುಗು ಚಿತ್ರ ನಟ ವಿಜಯ್ ರಂಗರಾಜು ವಿರುದ್ಧ ಕನ್ನಡದ ಕಲಾವಿದರು ಹರಿಹಾಯ್ದಿದ್ದಾರೆ. ಕಿಚ್ಚ ಸುದೀಪ್, ಪುನೀತ್ ರಾಜ್​ಕುಮಾರ್, ನವರಸ ನಾಯಕ ಜಗ್ಗೇಶ್ ಸೇರಿದಂತೆ ಹಲವರು ಆಕ್ರೋಶ ಹೊರಹಾಕಿದ್ದಾರೆ.

ಪವರ್ ಸ್ಟಾರ್​ ವಾರ್ನಿಂಗ್ ರಂಗರಾಜು ವಿರುದ್ಧ ಕಿಡಿಕಾರಿರುವ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ರಂಗರಾಜು ತಮ್ಮ ಮಾತುಗಳನ್ನು ಹಿಂಪಡೆಯಬೇಕು ಎಂದು ಟ್ವಿಟ್ಟರ್, ಫೇಸ್​ಬುಕ್​ಗಳಲ್ಲಿ ಹೇಳಿದ್ದಾರೆ. ಭಾರತೀಯ ಚಿತ್ರರಂಗದ ಎಲ್ಲಾ ಕಲಾವಿದರು ಒಂದು ಮನೆಯವರಿದ್ದಂತೆ. ಕಲಾವಿದರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಬರೆದುಕೊಂಡಿದ್ದಾರೆ. ಎಲ್ಲರೂ ಮೊದಲು ಮಾನವನಾಗಬೇಕು ಎಂದಿದ್ದಾರೆ. ಫೇಸ್​ಬುಕ್​ನಲ್ಲಿ ಅವರ ಪೋಸ್ಟ್ 21K ಲೈಕ್, 999 ಶೇರ್ ಕಂಡಿವೆ.

ಎಚ್ಚರಿಕೆ ನೀಡಿದ ಕಿಚ್ಚ ಸುದೀಪ್ ಫೇಸ್​ಬುಕ್​​ನಲ್ಲಿ ರಂಗರಾಜು ಅವರ ಹೇಳಿಕೆ ವಿರೋಧಿಸಿ ವಿಡಿಯೋ ಶೇರ್ ಮಾಡಿರುವ ಕಿಚ್ಚ ಸುದೀಪ್, ಕೋಟ್ಯಾಂತರ ಜನರ ಆರಾಧ್ಯ ದೈವದ ಕುರಿತು ಈ ರೀತಿ ಹೇಳಿಕೆ ನೀಡುವುದು ತಪ್ಪು. ತೆಲುಗು ಚಿತ್ರರಂಗದಲ್ಲೇ ರಂಗರಾಜು ಹೇಳಿಕೆಯನ್ನು ಯಾರೂ ಒಪ್ಪಲಾರರು ಎಂದು ಗುಡುಗಿದ್ದಾರೆ.

ಜಗ್ಗೇಶ್ ಕೆಂಡಾಮಂಡಲ ಕಾಲವಾದ ಸಾಧಕರ ಬಗ್ಗೆ ಕುಚೇಷ್ಟೆ ಮಾತಾಡುವ ಗುಣದವ ಎಲ್ಲಿಯೂ ಸಲ್ಲದವ!..ಎಂದು ಟೀಕಿಸಿರುವ ಅವರು ರಂಗರಾಜು ಅವರ ಉದ್ಧಟತನದ ಮಾತನ್ನು ಯಾರೂ ಕ್ಷಮಿಸಲಾರರು ಎಂದು ಬರೆದುಕೊಂಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada