KGF Chapter 2 ಜುಲೈ 16ರಂದೇ ತೆರೆ ಕಾಣ್ತಿರೋದೇಕೆ? ಆ ದಿನಕ್ಕೇನಾದರೂ ಇದೆಯಾ ವಿಶೇಷತೆ?

KGF Chapter 2 Release Date: ಪ್ರಿಲ್​ 13 ಯುಗಾದಿ ಹಬ್ಬ ಇದೆ. ಅಂದೇ ಸಿನಿಮಾ ರಿಲೀಸ್​ ಆಗಬಹುದು ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ, ಕೆಜಿಎಫ್​-2 ಜುಲೈನಲ್ಲಿ ತೆರೆಗೆ ಬರುತ್ತಿರುದೆ. ಇದಕ್ಕೆ ಸಾಕಷ್ಟು ಕಾರಣಗಳಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

KGF Chapter 2 ಜುಲೈ 16ರಂದೇ ತೆರೆ ಕಾಣ್ತಿರೋದೇಕೆ? ಆ ದಿನಕ್ಕೇನಾದರೂ ಇದೆಯಾ ವಿಶೇಷತೆ?
ಕೆಜಿಎಫ್​-2 ಪೋಸ್ಟರ್
Edited By:

Updated on: Jan 30, 2021 | 2:46 PM

ಕನ್ನಡದ ಬಹುನಿರೀಕ್ಷಿತ ಚಿತ್ರ ಕೆಜಿಎಫ್​-2 ಜುಲೈ 16ರಂದು ತೆರೆಕಾಣುತ್ತಿದೆ. ಯುಗಾದಿ ಅಥವಾ ಮೇ ತಿಂಗಳಲ್ಲಿ ಸಿನಿಮಾ ತೆರೆಕಾಣಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ, ನಿರ್ದೇಶಕ ಪ್ರಶಾಂತ್​ ನೀಲ್​ ಅಚ್ಚರಿ ಎಂಬಂತೆ ಸಿನಿಮಾ ರಿಲೀಸ್​ಗೆ ಜುಲೈ ತಿಂಗಳು ಆಯ್ಕೆ ಮಾಡಿಕೊಂಡಿದ್ದಾರೆ. ಕೆಜಿಎಫ್​-2ಗಾಗಿ ನಾವು ಇನ್ನೂ ಆರು ತಿಂಗಳು ಕಾಯಬೇಕಿದೆ. ಹಾಗಾದರೆ, ಸಿನಿಮಾ ರಿಲೀಸ್​ಗೆ ಪ್ರಶಾಂತ್​ ನೀಲ್​ ಜುಲೈ ತಿಂಗಳನ್ನೇ ಆಯ್ಕೆ ಮಾಡಿಕೊಂಡಿರುವುದೇಕೆ ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕೆಜಿಎಫ್​-2 ಸಿನಿಮಾ ಅಕ್ಟೋಬರ್​ ತಿಂಗಳಲ್ಲೇ ತೆರೆಕಾಣಬೇಕಿತ್ತು. ಆದರೆ, ಕೊರೊನಾ ಬಂದಿದ್ದರಿಂದ ಸಿನಿಮಾದ ಶೂಟಿಂಗ್​ ಬಾಕಿ ಉಳಿದಿತ್ತು. ಹೀಗಾಗಿ, ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿತ್ತು. ಏಪ್ರಿಲ್​ 13 ಯುಗಾದಿ ಹಬ್ಬ ಇದೆ. ಇದು ಹಿಂದೂಗಳ ಪಾಲಿಗೆ ಹೊಸ ವರ್ಷ. ಈಗಾಗಲೇ ಕೆಜಿಎಫ್​-2 ಕೆಲಸ ಪೂರ್ಣಗೊಂಡಿದ್ದರಿಂದ, ಚಿತ್ರ ಏಪ್ರಿಲ್​ 13ಕ್ಕೆ ರಿಲೀಸ್​ ಆಗಬಹುದು ಎಂದು ಎಲ್ಲರೂ ಅಂದಾಜಿಸಿದ್ದರು. ಆದರೆ, ಲೆಕ್ಕಾಚಾರ ತಲೆಕೆಳಗಾಗಿದೆ. ಕೆಜಿಎಫ್​-2 ಜುಲೈನಲ್ಲಿ ತೆರೆಗೆ ಬರುತ್ತಿರುವುದಕ್ಕೆ ಸಾಕಷ್ಟು ಕಾರಣಗಳಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಸ್ಯಾಂಡಲ್​ವುಡ್​ನಲ್ಲಿ ಸಿನಿಮಾ ಸುಗ್ಗಿ
ಕೊರೊನಾ ಸೋಂಕಿನ ಹಾವಳಿ​ ನಿಧಾನವಾಗಿ ಕಡಿಮೆ ಆಗುತ್ತಿದೆ. ಹೀಗಾಗಿ, ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿವೆ. ಫೆಬ್ರವರಿ 19ರಂದು ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ತೆರೆಗೆ ಬರುತ್ತಿದೆ. ಮಾರ್ಚ್​ 11ರಂದು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಬರ್ಟ್​ ಚಿತ್ರ ತೆರೆಕಾಣುತ್ತಿದೆ. ಏಪ್ರಿಲ್​ 1ಕ್ಕೆ ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ ರಿಲೀಸ್​ ಆಗುತ್ತಿದೆ.

ನಂತರ ಸುದೀಪ್​ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಬರಲಿದೆ. ಆ ನಂತರದ ಎರಡು ತಿಂಗಳಲ್ಲಿ 2020ರಲ್ಲಿ ತೆರೆಗೆ ಬರಬೇಕಿದ್ದ ಸಿನಿಮಾಗಳು ತೆರೆಗೆ ಬರುತ್ತಿವೆ. ​ಇವುಗಳ ಮಧ್ಯೆ ಕೆಜಿಎಫ್​-2 ಸಿನಿಮಾ ರಿಲೀಸ್​ ಮಾಡಿದರೆ ಕ್ಲ್ಯಾಶ್​ ಆಗುತ್ತದೆ. ಹೀಗಾಗಿ, ನಿರ್ದೇಶಕರು ಜುಲೈ ತಿಂಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಪ್ರಚಾರಕ್ಕೆ ಸಿಗಲಿದೆ ಸಮಯ
ಕೆಜಿಎಫ್​-2 ಚಿತ್ರ ಐದು ಭಾಷೆಗಳಲ್ಲಿ ರಿಲೀಸ್​ ಆಗುತ್ತಿರುವ ಸಿನಿಮಾ. ಹೀಗಾಗಿ, ಇದಕ್ಕೆ ದೊಡ್ಡ ಮಟ್ಟದ ಪ್ರಚಾರ ಅಗತ್ಯ. ಇದೇ ಕಾರಣಕ್ಕೆ, ಪ್ರಶಾಂತ್​ ನೀಲ್​ ಆ್ಯಂಡ್​ ಟೀಂ ಆರು ತಿಂಗಳ ಕಾಲಾವಕಾಶ ಪಡೆದುಕೊಂಡಿದೆ. ಹಂತ ಹಂತವಾಗಿ ಹೊಸ ಹೊಸ ಪೋಸ್ಟರ್​, ಟ್ರೈಲರ್​ ರಿಲೀಸ್​ ಮಾಡುತ್ತಾ, ಪರ ರಾಜ್ಯಗಳಿಗೂ ತೆರಳಿ ಸಿನಿಮಾಗೆ ಪ್ರಚಾರ ಕೊಡುವ ಕಾರ್ಯವನ್ನು ತಂಡ ಮಾಡಲಿದೆ.

ತಗ್ಗಲಿದೆ ಕೊರೊನಾ ಹಾವಳಿ
ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಇನ್ನೂ ಆರು ತಿಂಗಳು ಎನ್ನುವವರೆಗೆ ಜನರಲ್ಲಿರುವ ಭಯ ಸಂಪೂರ್ಣವಾಗಿ ಕಡಿಮೆ ಆಗಬಹುದು. ಜನರು ಯಾವುದೇ ಅಂಜಿಕೆ ಇಲ್ಲದೆ ಚಿತ್ರಮಂದಿರಕ್ಕೆ ಕಾಲಿಟ್ಟು ಸಿನಿಮಾ ವೀಕ್ಷಣೆ ಮಾಡಬಹುದು. ಹೀಗಾಗಿ, ಜುಲೈ ತಿಂಗಳನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡಿದೆ.

ಪರೀಕ್ಷೆಯೂ ಮುಗಿದಿರುತ್ತೆ!
ಕೊರೊನಾ ಸೋಂಕಿನ ಕಾರಣದಿಂದ ಈ ಬಾರಿಯ ಶೈಕ್ಷಣಿಕ ವರ್ಷ ಮುಂದೂಡಲ್ಪಟ್ಟಿದೆ. ಮೇ-ಜೂನ್​ ತಿಂಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ, ಜುಲೈ ವೇಳೆಗೆ ಸಿನಿಮಾ ರಿಲೀಸ್​ ಮಾಡಿದರೆ ಚಿತ್ರ ಮಂದಿರಕ್ಕೆ ಬರುವವರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

KGF Chapter 2: ಘೋಷಣೆ​ ಆಯ್ತು ಕೆಜಿಎಫ್​ ಚಾಪ್ಟರ್​ 2 ರಿಲೀಸ್​ ದಿನಾಂಕ