ವರುಣ್​ ತೇಜ ಜತೆ ಟಾಲಿವುಡ್​ನಲ್ಲಿ ನಟಿಸಲಿದ್ದಾರೆ ಉಪೇಂದ್ರ!

ಗನಿ ಚಿತ್ರದಲ್ಲಿ ಉಪೇಂದ್ರ ಅವರದ್ದು ಅತಿಥಿ ಪಾತ್ರವಂತೆ. ಇಡೀ ಸಿನಿಮಾ ಬಾಕ್ಸಿಂಗ್​ ಕತೆಯಮೇಲೆ ಸಾಗಲಿದೆ ಎನ್ನುವುದು ಚಿತ್ರತಂಡದ ಮಾತು.

ವರುಣ್​ ತೇಜ ಜತೆ ಟಾಲಿವುಡ್​ನಲ್ಲಿ ನಟಿಸಲಿದ್ದಾರೆ ಉಪೇಂದ್ರ!
ವರುಣ್​ ತೇಜ್​- ಸುದೀಪ್​
shruti hegde

| Edited By: sadhu srinath

Jan 30, 2021 | 3:38 PM

ವರುಣ್ ತೇಜ ಅಭಿನಯದ ಗನಿ ಸಿನಿಮಾದ ಮೋಷನ್​ ಪೋಸ್ಟರ್​ ಇತ್ತೀಚೆಗೆ ರಿಲೀಸ್ ಆಗಿತ್ತು. ವರುಣ್ ತೇಜ ಬಾಕ್ಸರ್​ ಆಗಿ ಪೋಸ್ಟರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಕನ್ನಡದ ನಟ ಉಪೇಂದ್ರ ಕೂಡ ವಿಶೇಷ ಪಾತ್ರವೊಂದರಲ್ಲಿ ಬಣ್ಣ ಹಚ್ಚಲಿದ್ದಾರೆ.

ಗನಿ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರವನ್ನು ಉಪೇಂದ್ರ ಖಚಿತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ನಾನು ಈ ಸಿನಿಮಾದಲ್ಲಿ ಬಾಕ್ಸರ್​ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಬಹು ಸಮಯದ ನಂತರ ತೆಲುಗು ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿರುವುದಕ್ಕೆ ಖುಷಿಯಾಗಿದ್ದೇನೆ. ಪಾತ್ರದ ಬಗ್ಗೆ ಕೇಳಿದಾಗ ನೋ ಎನ್ನಲು ಸಾಧ್ಯವಾಗಲೇ ಇಲ್ಲ. ಫೆಬ್ರವರಿ 12ರಿಂದ ಸಿನಿಮಾ ಸೆಟ್​ ಸೇರಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ಉಪೇಂದ್ರ.

ಅಂದಹಾಗೆ, ಗನಿ ಚಿತ್ರದಲ್ಲಿ ಉಪೇಂದ್ರ ಅವರದ್ದು ಅತಿಥಿ ಪಾತ್ರವಂತೆ. ಇಡೀ ಸಿನಿಮಾ ಬಾಕ್ಸಿಂಗ್​ ಕತೆಯ ಮೇಲೆ ಸಾಗಲಿದೆ ಎನ್ನುವುದು ಚಿತ್ರತಂಡದ ಮಾತು. ಸದ್ಯ, ಉಪೇಂದ್ರ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರನ್ನು ಕಾಡುತ್ತಿದೆ.

ಗನಿ ಚಿತ್ರ ಟಾಲಿವುಡ್​ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಈ ಸಿನಿಮಾವನ್ನು ಕಿರಣ್​ ಕೊರಾಪತಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ವರುಣ್​ ತೂಕ ಕೂಡ ಇಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಉಪೇಂದ್ರ ಸದ್ಯ, ಕಬ್ಜಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರ ತೆಲುಗಿನಲ್ಲೂ ತೆರೆಕಾಣಲಿದೆ.

KGF Chapter 2 ಜುಲೈ 16ರಂದೇ ತೆರೆ ಕಾಣ್ತಿರೋದೇಕೆ? ಆ ದಿನಕ್ಕೇನಾದರೂ ಇದೆಯಾ ವಿಶೇಷತೆ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada