ಧೋನಿ ಜನ್ಮದಿನಕ್ಕೆ ಕಾಮನ್​ ಡಿಪಿ ಅನಾವರಣ ಮಾಡಿದ ಸುದೀಪ್​; ಫೋಟೋ ನೋಡಿ ಫ್ಯಾನ್ಸ್​ ಫಿದಾ

S Dhoni 40th birthday CDP:ಜುಲೈ 7ರಂದು ಧೋನಿ ಜನ್ಮದಿನ. ಅವರು 40ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಸುದೀಪ್​ ಕಾಮನ್​ ಡಿಪಿ ಅನಾವರಣ ಮಾಡಿದ್ದಾರೆ.

ಧೋನಿ ಜನ್ಮದಿನಕ್ಕೆ ಕಾಮನ್​ ಡಿಪಿ ಅನಾವರಣ ಮಾಡಿದ ಸುದೀಪ್​; ಫೋಟೋ ನೋಡಿ ಫ್ಯಾನ್ಸ್​ ಫಿದಾ
ಧೋನಿ-ಸುದೀಪ್​

Updated on: Jul 01, 2021 | 8:41 PM

ನಟ ಕಿಚ್ಚ ಸುದೀಪ್​ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ, ಕ್ರಿಕೆಟ್​ ಕ್ಷೇತ್ರದಲ್ಲೂ ಆಸಕ್ತಿ ಹೊಂದಿದ್ದಾರೆ. ಚಿತ್ರರಂಗದ ಕಲಾವಿದರನ್ನು ಒಂದೆಡೆ ಸೇರಿಸಿ ಅವರು ಟೂರ್ನಿಯನ್ನು ಕೂಡ ನಡೆಸಿದ್ದಾರೆ. ಈಗ ಭಾರತ ತಂಡದ ಮಾಜಿ ನಾಯಕ​ ಎಂ.ಎಸ್. ಧೋನಿ ಜನ್ಮದಿನದ ಅಂಗವಾಗಿ ಸುದೀಪ್ ಕಾಮನ್​ ಡಿಪಿ ಅನಾವರಣ ಮಾಡಿದ್ದಾರೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳ ಬರ್ತ್​ಡೇ ಬಂತೆಂದರೆ ಅಭಿಮಾನಿಗಳು ಕಾಮನ್​ ಡಿಪಿ ಅನಾವರಣ ಮಾಡುತ್ತಾರೆ. ಈ ಫೋಟೋವನ್ನು ಸೋಶಿಯಲ್ ಮೀಡಿಯಾ ಅಕೌಂಟ್​ಗಳಲ್ಲಿ ಪ್ರೊಫೈಲ್​ ಪಿಕ್ಚರ್​ ಹಾಕಿಕೊಂಡು ಸಂಭ್ರಮಿಸುತ್ತಾರೆ. ಈಗ ಜುಲೈ 7ರಂದು ಧೋನಿ ಜನ್ಮದಿನ. ಅವರು 40ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಸುದೀಪ್​ ಕಾಮನ್​ ಡಿಪಿ ಅನಾವರಣ ಮಾಡಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ ಜೆರ್ಸಿಯ ಅರ್ಧ ಭಾಗ ಹಾಗೂ ಟೀಂ ಇಂಡಿಯಾ ಜೆರ್ಸಿಯ ಅರ್ಧಭಾಗವನ್ನು ತೊಟ್ಟಂತೆ ಕಾಣುವ ಫೋಟೋದಲ್ಲಿ ಮಹಿ ಮಿಂಚಿದ್ದಾರೆ. ಇದರ ಹಿಂಭಾಗದಲ್ಲಿ ಸಿಂಹ, ವಿಶ್ವಕಪ್​, ಧೋನಿ ನಾನಾ ರೀತಿಯ ಜೆರ್ಸಿ ತೊಟ್ಟಿರುವ ಫೋಟೋಗಳಿವೆ. ಒಟ್ಟಿನಲ್ಲಿ ಇದನ್ನು ನೋಡಿ ಧೋನಿ ಹಾಗೂ ಸುದೀಪ್​ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

‘ಇವರು ಎಲ್ಲರ ಹೀರೋ. ಇವರು ಎಲ್ಲರ ಫೇವರಿಟ್​, ಇವರು ಎಲ್ಲರ ಸ್ಟಾರ್​, ಇವರು ಎಲ್ಲರ ಸ್ಫೂರ್ತಿ, ಎಂಎಸ್​ ಧೋನಿ ಅವರ ಕಾಮನ್​ ಡಿಪಿ ಅನಾವರಣ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ಅದೂ, ನಟನಾಗಿ ಅಲ್ಲ, ಓರ್ವ ಫ್ಯಾನ್​ ಆಗಿ. ನಿಮಗೆ ಜನ್ಮ ದಿನದ ಶುಭಾಶಯ’ ಎಂದು ಸುದೀಪ್​ ಬರೆದುಕೊಂಡಿದ್ದಾರೆ.

ಟ್ವೀಟ್​ ಮಾಡಿದ ಒಂದು ಗಂಟೆಯಲ್ಲಿ ಈ ಪೋಸ್ಟ್​ 10 ಸಾವಿರ ಲೈಕ್ಸ್​ ಗಿಟ್ಟಿಸಿಕೊಂಡಿದೆ.

ಇದನ್ನೂ ಓದಿ: ‘ಅಗ್ನಿಸಾಕ್ಷಿ’ ಶೂಟಿಂಗ್ ವೇಳೆ ವೈಷ್ಣವಿ ಕೈಯಲ್ಲಿ ಯಾವಾಗಲೂ ಇರ್ತಿತ್ತು ರೇಷ್ಮೆ ಸೀರೆ; ಸುದೀಪ್ ಬಿಚ್ಚಿಟ್ಟ ಅಚ್ಚರಿಯ ವಿಚಾರ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us