MI vs RCB: ನಮ್ಮ ಆರ್​ಸಿಬಿ ಗೆದ್ದರೆ ಕಿಚ್ಚ ಸುದೀಪ್​ ಹೀಗೆ ಮಾಡ್ತಾರಂತೆ!

Kichcha Sudeep: ಐಪಿಎಲ್​ 14ನೇ ಸೀಸನ್​ನ ಮೊದಲ ಪಂದ್ಯ ಇಂದು ಚೆನ್ನೈನಲ್ಲಿ ನಡೆಯುತ್ತಿದೆ. ಹಾಲಿ ಚಾಂಪಿಯನ್​ ಮುಂಬೈ ತಂಡವನ್ನು ಆರ್​ಸಿಬಿ ಎದುರಿಸಲಿದೆ.

MI vs RCB: ನಮ್ಮ ಆರ್​ಸಿಬಿ ಗೆದ್ದರೆ ಕಿಚ್ಚ ಸುದೀಪ್​ ಹೀಗೆ ಮಾಡ್ತಾರಂತೆ!
ವಿರಾಟ್​ ಕೊಹ್ಲಿ-ಸುದೀಪ್​

Updated on: Apr 09, 2021 | 3:51 PM

ಐಪಿಎಲ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕಿಚ್ಚ ಸುದೀಪ್​ ಅವರ ಫೇವರಿಟ್​ ತಂಡ. ಈ ಮೊದಲು ಅನೇಕ ಬಾರಿ ಅವರು ಮೈದಾನಕ್ಕೆ ತೆರಳಿ ಟೀಂ ಅನ್ನು ಬೆಂಬಲಿಸಿದ್ದಾರೆ. ಆರ್​ಸಿಬಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲ ಪ್ರತಿ ಸೀಸನ್​ಅಲ್ಲೂ ಸುದೀಪ್​ ಆರ್​ಸಿಬಿಗೆ ಆಲ್​ ದಿ ಬೆಸ್ಟ್​​ ಹೇಳೋಕೆ ಮರೆಯುವುದಿಲ್ಲ. ಈ ಬಾರಿ ಸುದೀಪ್​ ಗುಡ್​ ಲಕ್​ ಹೇಳೋದು ಮಾತ್ರವಲ್ಲ ವಿಶೇಷವಾಗಿ ಆರ್​ಸಿಬಿ ಬಗ್ಗೆ ಮಾತನಾಡಿದ್ದಾರೆ.

ಇಂದು (ಏ.9) ಸಂಜೆ ಆರು ಗಂಟೆಗೆ ಸುದೀಪ್​ ಸ್ಟಾರ್​ ಸ್ಪೋರ್ಟ್ಸ್​ ಕನ್ನಡದಲ್ಲಿ ಪ್ರಸಾರವಾಗುವ ByjusCricketLive ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುದೀಪ್​ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.

ಸ್ಟಾರ್​​ ಸ್ಪೋರ್ಟ್ಸ್​​ ಕನ್ನಡ ಇಂದು ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೊದಲ್ಲಿ ಸುದೀಪ್​ ಮಾತನಾಡಿದ್ದಾರೆ. ಆರ್​ಸಿಬಿ ಗೆಲ್ಲಲಿ, ಸೋಲಲಿ ನಾವು ಆ ತಂಡದ ಜತೆಗಿದ್ದೇವೆ. ಯಾವುಗಲೂ ಇರುತ್ತೇವೆ. ಆರ್​ಸಿಬಿಗೆ ಇದಕ್ಕಿಂತ ಪಾಸಿಟಿವ್​ ವಿಚಾರ ಮತ್ತೊಂದು ಬೇಕಿಲ್ಲ. ಆರ್​ಸಿಬಿ ಸೋತರೂ ನಮ್​ ಟೀಮ್​, ಗೆದ್ದರೂ ನಮ್ಮ ಟೀಮ್​. ಈಗ ಶರ್ಟ್​ಗೆ ಕಾಲರ್​ ಇಲ್ಲ. ನಮ್ಮ ಟೀಂ ಗೆದ್ದರೆ, ಕಾಲರ್​ ಹಾಕಿಕೊಂಡು ಓಡಾಡುತ್ತೇವೆ ಎಂದಿದ್ದಾರೆ ಸುದೀಪ್​.

ಇತ್ತೀಚೆಗೆ ಬಿಗ್​ ಬಾಸ್​ ವೇದಿಕೆ ಮೇಲೆ ಸುದೀಪ್​ ಆರ್​ಸಿಬಿಗೆ ಶುಭಕೋರಿದ್ದರು. ಬಿಗ್​ ಬಾಸ್​ ಮನೆಯ ಕಡೆಯಿಂದ, ಬಿಗ್​ ಬಾಸ್​ ಸ್ಪರ್ಧಿಗಳ ಪರವಾಗಿ, ಬಿಗ್​ ಬಾಸ್​ ತಂತ್ರಜ್ಞರ ಪರವಾಗಿ ಸುದೀಪ್​ ಆರ್​ಸಿಬಿಗೆ ಆಲ್​ ದಿ ಬೆಸ್ಟ್ ಹೇಳುತ್ತೇನೆ ಎಂದಿದ್ದರು.  ಕಿಚ್ಚ ಸುದೀಪ್​ ಕ್ರಿಕೆಟ್ ಪ್ರಿಯರು. ಸ್ಯಾಂಡಲ್​ವುಡ್​ನಲ್ಲಿ ಕ್ರಿಕೆಟ್​ ಮ್ಯಾಚ್​ ನಡೆಸೋಕೆ ಇವರದೇ ನೇತೃತ್ವ. ಹೀಗಾಗಿ, ಇವರಿಗೆ ಕ್ರಿಕೆಟ್​ ಮೇಲೆ ಹೆಚ್ಚು ಆಸಕ್ತಿ ಇದೆ.

ಐಪಿಎಲ್​ 14ನೇ ಸೀಸನ್​ನ ಮೊದಲ ಪಂದ್ಯ ಇಂದು ಚೆನ್ನೈನಲ್ಲಿ ನಡೆಯುತ್ತಿದೆ. ಹಾಲಿ ಚಾಂಪಿಯನ್​ ಮುಂಬೈ ತಂಡವನ್ನು ಆರ್​ಸಿಬಿ ಎದುರಿಸಲಿದೆ. ಈಗಾಗಲೇ ಅಭಿಮಾನಿಗಳು ಮ್ಯಾಚ್​ ನೋಡೋಕೆ ಕುತೂಹಲದಿಂದ ಕಾದಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ವೇದಿಕೆ ಮೇಲೆ ಆರ್​ಸಿಬಿಗೆ ಆಲ್​ ದಿ ಬೆಸ್ಟ್​ ಅಂದ್ರು ಸುದೀಪ್​!

Published On - 3:50 pm, Fri, 9 April 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us