ಆಫ್ರಿಕಾ ಕ್ರಿಕೆಟ್​ ಟೀಂ ಜೊತೆ ಸುದೀಪ್ ಹೋಗಿದ್ದೆಲ್ಲಿಗೆ?

ಪೈಲ್ವಾನ್ ಸಿನಿಮಾ ಫೈರಸಿ, ‘ಕಿಚ್ಚ-ದಚ್ಚು’ ಫ್ಯಾನ್ಸ್​ ವಾರ್ ಬಳಿಕ ಸಾಕಷ್ಟು ಸಮಸ್ಯೆಗಳ ನಡುವೆ ಕಿಚ್ಚ ಸುದೀಪ್ ಇದೀಗ ದುಬೈ ಕಡೆ ಹೊರಟಿದ್ದಾರೆ. ಅದೂ, ದಕ್ಷಿಣ ಆಫ್ರಿಕಾ ಕ್ರಿಕೆಟ್​ ತಂಡದ ಜೊತೆ ಕಿಚ್ಚ ಸುದೀಪ್ ವಿಮಾನವೇರಿದ್ದಾರೆ. ಕಿಚ್ಚನ ಮುಂದಿನ ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾದ ಚಿತ್ರೀಕರಣಕ್ಕೆ ಕಿಚ್ಚ ಸುದೀಪ್ ದುಬೈ ವಿಮಾನ ಹತ್ತಿದ್ದಾರೆ. ಇದೇ ವೇಳೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೀಂ ಸಹ ಅದೇ ವಿಮಾನದಲ್ಲಿ ದುಬೈಗೆ ಹೊರಟಿದ್ರು. ಈ ವೇಳೆ ಕಿಚ್ಚ ಸುದೀಪ್, ಕ್ರಿಕೆಟ್​ ತಂಡದ ಜೊತೆ ಫೋಟೋ […]

ಆಫ್ರಿಕಾ ಕ್ರಿಕೆಟ್​ ಟೀಂ ಜೊತೆ ಸುದೀಪ್ ಹೋಗಿದ್ದೆಲ್ಲಿಗೆ?
ಸಾಧು ಶ್ರೀನಾಥ್​ Edited By:

Updated on: Jan 30, 2021 | 4:36 PM

ಪೈಲ್ವಾನ್ ಸಿನಿಮಾ ಫೈರಸಿ, ‘ಕಿಚ್ಚ-ದಚ್ಚು’ ಫ್ಯಾನ್ಸ್​ ವಾರ್ ಬಳಿಕ ಸಾಕಷ್ಟು ಸಮಸ್ಯೆಗಳ ನಡುವೆ ಕಿಚ್ಚ ಸುದೀಪ್ ಇದೀಗ ದುಬೈ ಕಡೆ ಹೊರಟಿದ್ದಾರೆ. ಅದೂ, ದಕ್ಷಿಣ ಆಫ್ರಿಕಾ ಕ್ರಿಕೆಟ್​ ತಂಡದ ಜೊತೆ ಕಿಚ್ಚ ಸುದೀಪ್ ವಿಮಾನವೇರಿದ್ದಾರೆ.

ಕಿಚ್ಚನ ಮುಂದಿನ ಬಹುನಿರೀಕ್ಷಿತ ಕೋಟಿಗೊಬ್ಬ-3 ಸಿನಿಮಾದ ಚಿತ್ರೀಕರಣಕ್ಕೆ ಕಿಚ್ಚ ಸುದೀಪ್ ದುಬೈ ವಿಮಾನ ಹತ್ತಿದ್ದಾರೆ. ಇದೇ ವೇಳೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೀಂ ಸಹ ಅದೇ ವಿಮಾನದಲ್ಲಿ ದುಬೈಗೆ ಹೊರಟಿದ್ರು. ಈ ವೇಳೆ ಕಿಚ್ಚ ಸುದೀಪ್, ಕ್ರಿಕೆಟ್​ ತಂಡದ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

‘ದುಬೈಗೆ ಹೋಗುತ್ತಿದ್ದ ವಿಮಾನದಲ್ಲಿಯೇ ದ.ಆಫ್ರಿಕಾ ಕ್ರಿಕೆಟ್ ತಂಡವನ್ನು ನೋಡಿ ಖುಷಿಯಾಯ್ತು. ಅವರು ಬೇರೆ ಕಡೆ ಹೊರಟಿದ್ದಾರೆ. ನಾನು ಕೋಟಿಗೊಬ್ಬ-3 ಸಿನಿಮಾದ ಚಿತ್ರೀಕರಣಕ್ಕಾಗಿ ವಾರ್ಸಾಗೆ ಹೊರಟಿರುವೆ. ಈಗಾಗಲೇ ಸಿನಿಮಾದ ಮೊದಲ ಭಾಗ ಬೆಲ್​ಗ್ರೇಡ್​ನಲ್ಲಿ ಚಿತ್ರೀಕರಣವಾಗಿದೆ’ ಅಂತ ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.

Published On - 7:01 pm, Mon, 23 September 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us