ಈ ವಾರ ಗುರುವಾರ (ಸೆಪ್ಟೆಂಬರ್ 12) ಹಾಗೂ ಶುಕ್ರವಾರ (ಸೆಪ್ಟೆಂಬರ 13) ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲೂ ಕನ್ನಡದಲ್ಲಿ ಕೆಲವು ಚಿತ್ರಗಳು ಬಿಡುಗಡೆ ಕಾಣುತ್ತಿವೆ. ‘ಕೃಷ್ಣಂ ಪ್ರಣಯ ಸಖಿ’ ಹಾಗೂ ‘ಭೀಮ’ ಚಿತ್ರದ ಅಬ್ಬರ ಕೊಂಚ ಕಡಿಮೆ ಆದ ಹಿನ್ನೆಲೆಯಲ್ಲಿ ಈ ವಾರ ರಿಲೀಸ್ ಆಗುವ ಸಿನಿಮಾಗಳು ಹೈಪ್ ಪಡೆದುಕೊಳ್ಳೋ ಸಾಧ್ಯತೆ ಇದೆ ಇದೆ. ಆ ಬಗ್ಗೆ ಇಲ್ಲಿದೆ ವಿವರ.
‘ರಾನಿ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಕಿರಣ್ ರಾಜ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ರಾಧ್ಯಾ ಆರ್, ರವಿ ಶಂಕರ್, ಯಶ್ ಶೆಟ್ಟಿ, ಧರ್ಮಣ್ಣ ಕಡೂರ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರವನ್ನು ಗುರುತೇಜ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಉಮೇಶ್ ಹೆಗ್ಡೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಣಿಕಾಂತ್ ಅವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿದೆ.
ವಿಕ್ಕಿ ವರುಣ್, ಧನ್ಯಾ ರಾಮ್ಕುಮಾರ್ ಮೊದಲಾದವರು ‘ಕಾಲಾಪತ್ಥರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ವಿಕ್ಕಿ ವರುಣ್ ಅವರೇ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 13ರಂದು ರಿಲೀಸ್ ಆಗುತ್ತಿದೆ.
ಇದನ್ನೂ ಓದಿ: ರಸ್ತೆ ಅಪಘಾತಕ್ಕೆ ಒಳಗಾದ ‘ಕನ್ನಡತಿ’ ಕಿರಣ್ ರಾಜ್; ಸಿನಿಮಾ ರಿಲೀಸ್ಗೂ ಮೊದಲೇ ಕಹಿ ಸುದ್ದಿ
ವಿಕಾಸಪರ್ವ ಹೆಸರಿನ ಚಿತ್ರದಲ್ಲಿ ರೋಹಿತ್ ನಾಗೇಶ್, ಸ್ವಾತಿ ಎಚ್ವಿ, ಅಶ್ವಿನ್ ಹಾಸನ್ ಮೊದಲಾದವರು ನಟಿಸುತ್ತಿದ್ದಾರೆ. ಅನ್ಬು ಅರಸ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ.
ಇದಲ್ಲದೆ ಮಲಯಾಳಂನಲ್ಲಿ ‘ಎ.ಆರ್.ಎಂ’ ಹೆಸರಿನ ಸಿನಿಮಾ ಮೂಡಿಬರುತ್ತಿದೆ. ಟುವಿನೋ ಥಾಮಸ್, ಕೃತಿ ಶೆಟ್ಟಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:54 am, Wed, 11 September 24