ಭಾನುವಾರ ಭರ್ಜರಿ ಗಳಿಕೆ ಮಾಡಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಒಟ್ಟಾರೆ ಕಲೆಕ್ಷನ್ ಎಷ್ಟು?

ಲವ್ ಮಾಕ್ಟೇಲ್ 3 ಸಿನಿಮಾ ಧುರಂಧರ್ 2 ಚಿತ್ರದ ಪೈಪೋಟಿ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ, ನಟಿಸಿರುವ ಈ ಚಿತ್ರ, ಕೌಟುಂಬಿಕ ಪ್ರೇಕ್ಷಕರನ್ನು ಆಕರ್ಷಿಸಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿದ್ದರೂ, ದೊಡ್ಡ ಮಟ್ಟದ ಯಶಸ್ಸು ಕಂಡು, ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿದೆ.

ಭಾನುವಾರ ಭರ್ಜರಿ ಗಳಿಕೆ ಮಾಡಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಒಟ್ಟಾರೆ ಕಲೆಕ್ಷನ್ ಎಷ್ಟು?
ಲವ್ ಮಾಕ್ಟೇಲ್ 3

Updated on: Mar 23, 2026 | 9:01 AM

‘ಲವ್ ಮಾಕ್ಟೇಲ್ 3’ ಸಿನಿಮಾ (Love Mocktail 3) ‘ಧುರಂಧರ್ 2’ ಅಬ್ಬರದ ನಡುವೆಯೂ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಮೊದಲು ಏಪ್ರಿಲ್​​ನಲ್ಲಿ ‘ಲವ್ ಮಾಕ್ಟೇಲ್ 3’ ಸಿನಿಮಾ ರಿಲೀಸ್ ಮಾಡೋದಾಗಿ ಘೋಷಿಸಲಾಗಿತ್ತು. ಆದರೆ, ‘ಟಾಕ್ಸಿಕ್’ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿಕೊಂಡ ಬಳಿಕ ಆ ದಿನಾಂಕಕ್ಕೆ ‘ಲವ್ ಮಾಕ್ಟೇಲ್ 3’ ಚಿತ್ರವನ್ನು ತರೋದಾಗಿ ಘೋಷಣೆ ಮಾಡಿದರು. ಮಾರ್ಚ್ 19ರಂದು ‘ಲವ್ ಮಾಕ್ಟೇಲ್ 3’ ಸಿನಿಮಾ ತೆರೆಗೆ ಬಂದಿದೆ. ಡಾರ್ಲಿಂಗ್ ಕೃಷ್ಣ ನಟನೆಯ ಈ ಸಿನಿಮಾ ಗಮನ ಸೆಳೆದಿದೆ.

ಡಾರ್ಲಿಂಗ್ ಕೃಷ್ಣ ಅವರು ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ನಟಿಸಿ, ನಿರ್ದೇಶಿಸಿದ್ದಾರೆ. ಈ ಸಿನಿಮಾದ ಕಥೆ ಭಾವನಾತ್ಮಕವಾಗಿ ಸಾಗುತ್ತದೆ. ಮೊದಲು ಹಾಗೂ ಎರಡನೇ ಭಾಗಕ್ಕಿಂತ ಚಿತ್ರ ಭಿನ್ನವಾಗಿಯೇ ಮೂಡಿ ಬಂದಿದೆ. ಈ ಸಿನಿಮಾನ ಫ್ಯಾಮಿಲಿ ಆಡಿಯನ್ಸ್ ಇಷ್ಟಪಡುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ಧುರಂಧರ್ 2 ಅಬ್ಬರಿಸುತ್ತಿರುವ ಮಧ್ಯೆಯೂ ‘ಲವ್ ಮಾಕ್ಟೇಲ್ 3’ ಸಿನಿಮಾ ಗಮನ ಸೆಳೆದಿದೆ.

sacnilk ವರದಿ ಪ್ರಕಾರ ಮೊದಲ ದಿನ 1.2 ಕೋಟಿ ರೂಪಾಯಿ, ಎರಡನೇ ದಿನ 1 ಕೋಟಿ ರೂಪಾಯಿ, ಶನಿವಾರ ಹಾಗೂ ಭಾನುವಾರ ಅನುಕ್ರಮವಾಗಿ 1.4 ಕೋಟಿ ರೂಪಾಯಿ ಹಾಗೂ 1.76 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಭಾರತದ ಗಳಿಕೆ 5.36 ಕೋಟಿ ರೂಪಾಯಿ ಆಗಿದೆ. ಇನ್ನು, ವಿಶ್ವ ಮಟ್ಟದಲ್ಲಿ 6.23 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು sacnilk ವರದಿ ತಿಳಿಸಿದೆ. ಇಂದು ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಿದರೆ ಚಿತ್ರ ಗೆದ್ದಂತೆ.

ಇದನ್ನೂ ಓದಿ: ‘ಧುರಂದರ್ 2’ ಚಿತ್ರದ ಎದುರು ರಿಲೀಸ್ ಆದ ‘ಲವ್ ಮಾಕ್ಟೇಲ್ 3’ ಗಳಿಸಿದ್ದೆಷ್ಟು?

‘ಲವ್ ಮಾಕ್ಟೇಲ್ 3’ ಸಿನಿಮಾ ಸಣ್ಣ ಬಜೆಟ್​​ನಲ್ಲಿ ನಿರ್ಮಾಣವಾಗಿದೆ. ಈ ಕಾರಣಕ್ಕೆ ಈಗ ಆಗುತ್ತಿರುವ ಗಳಿಕೆ ನಿರ್ಮಾಪಕರಿಗೆ ಲಾಭವನ್ನೇ ತಂದುಕೊಡುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ‘ಧುರಂಧರ್ 2’ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಅಬ್ಬರಿಸುತ್ತಿರುವಾಗ ಈ ಚಿತ್ರದ ಕಲೆಕ್ಷನ್ ಇಷ್ಟು ಉತ್ತಮವಾಗಿ ಆಗಿರೋದು ಖುಷಿ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us