ಪ್ರೀತಿಯಲ್ಲಿ ನಂಬಿಕೆ ದ್ರೋಹದ ಕಥೆ? ‘ಲವ್ ಸೀಸನ್ಸ್’ ಕನ್ನಡ ಸಿನಿಮಾ ಟೀಸರ್ ನೋಡಿ

ಹೊಸ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಲವ್ ಸೀಸನ್ಸ್’ ಸಿನಿಮಾದ ಟೀಸರ್ ಈಗ ಬಿಡುಗಡೆ ಆಗಿದೆ. ಸಿನಿಮಾದ ಕಥೆ ಏನಿರಬಹುದು ಎಂಬ ಸುಳಿವನ್ನು ಟೀಸರ್ ಮೂಲಕ ನೀಡಲಾಗಿದೆ. ಕೃತ್ವಿಕ್ ಅವರು ನಿರ್ದೇಶನ ಮಾಡಿರುವ ಈ ಸಿನಿಮಾವನ್ನು ಎನ್.ಆರ್. ಮಂಜುನಾಥ ಅವರು ನಿರ್ಮಿಸಿದ್ದಾರೆ.

ಪ್ರೀತಿಯಲ್ಲಿ ನಂಬಿಕೆ ದ್ರೋಹದ ಕಥೆ? ‘ಲವ್ ಸೀಸನ್ಸ್’ ಕನ್ನಡ ಸಿನಿಮಾ ಟೀಸರ್ ನೋಡಿ
Love Seasons Movie Poster

Updated on: Apr 15, 2026 | 9:06 PM

ಶೀರ್ಷಿಕೆ ಮೂಲಕವೇ ‘ಲವ್ ಸೀಸನ್ಸ್’ (Love Seasons) ಸಿನಿಮಾ ಗಮನ ಸೆಳೆದಿದೆ. ಇದು ಹೊಸಬರ ತಂಡದ ಸಿನಿಮಾ. ತಿಂಗಳ ಹಿಂದಷ್ಟೇ ಈ ಸಿನಿಮಾದ ಚಿತ್ರೀಕರಣ ಮುಗಿದಿದೆ. ಈಗ ಟೀಸರ್ (Love Seasons Teaser) ಬಿಡುಗಡೆ ಮಾಡಲಾಗಿದೆ. ಅದರ ಜೊತೆಗೆ ಸುದ್ದಿಗೋಷ್ಠಿ ನಡೆಯಸಲಾಗಿದೆ. ಈ ವೇಳೆ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು. ಈ ಸಿನಿಮಾದಲ್ಲಿ ಮುಕುಂದ ರಾಮಸ್ವಾಮಿ ಅವರು ನಾಯಕನಾಗಿ ನಟಿಸಿದ್ದಾರೆ. ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ.

ರಂಗಭೂಮಿ ಹಿನ್ನೆಲೆ ಹೊಂದಿರುವ ಕೃತ್ವಿಕ್ ಅವರು ‘ಲವ್ ಸೀಸನ್ಸ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಕ್ಷತ್ರಿಯ’, ‘ಬುದ್ಧಿವಂತ 2’, ‘ಗುರುದೇವ ಹೊಯ್ಸಳ’ ಮುಂತಾದ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಈಗ ಅವರು ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಎನ್.ಆರ್. ಮಂಜುನಾಥ (ನೀಲೇರಿ) ಅವರು ‘ಲವ್ ಸೀಸನ್ಸ್’ ಸಿನಿಮಾದ ಮೂಲಕ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.

‘ಲವ್ ಸೀಸನ್ಸ್’ ಸಿನಿಮಾದ ಟೀಸರ್:

Love Seasons Official Teaser | NR Manjunatha | Kruthvik | Mukunda Ramaswami | NR Studios

ಹಿರಿಯ ಕಲಾವಿದ ರಾಜೇಶ್ ನಟರಂಗ ಅವರು ‘ಲವ್ ಸೀಸನ್ಸ್’ ಚಿತ್ರದ ಬಹುಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿರ್ದೇಶಕರ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಜವಾಬ್ದಾರಿಯುತ ತಂದೆಯ ಪಾತ್ರವನ್ನು ಅವರು ಈ ಚಿತ್ರದಲ್ಲಿ ನಿಭಾಯಿಸಿದ್ದಾರೆ. ಪ್ರೀತಿ ಯಾವ ಕಾಲಕ್ಕೂ ಹಳತಾಗದ ವಿಷಯ. ಆ ಕಾನ್ಸೆಪ್ಟ್​ನಲ್ಲಿ ಸಿನಿಮಾ ಸಿದ್ಧವಾಗಿದೆ ಎಂಬ ಸುಳಿವನ್ನು ಅವರು ನೀಡಿದರು.

Love Seasons Movie Team

Love Seasons Movie Team

ಈ ಸಿನಿಮಾಗೆ ವೀರ್ ಸಮರ್ಥ್ ಅವರು ಸಂಗೀತ ನೀಡಿದ್ದಾರೆ. ಕೆ. ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಅವರ ಛಾಯಾಗ್ರಹಣ, ಮಧು ತುಂಬಕೆರೆ ಅವರ ಸಂಕಲನ, ಭಜರಂಗಿ ಮೋಹನ್‌ ಅವರ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಮಂಡ್ಯ ರಮೇಶ್, ಸಂಗೀತಾ ಅನಿಲ್, ಜಯತೀರ್ಥ, ಕಾಮಿಡಿ ಕಿಲಾಡಿ ಸದಾನಂದ, ಚೇತನ್ ದುರ್ಗ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಯಶಸ್ವಿಯಾಗಿ 25 ದಿನ ಪೂರೈಸಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಹ್ಯಾಟ್ರಿಕ್ ಗೆಲುವು

‘ಲವ್ ಸೀಸನ್ಸ್’ ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಸದ್ಯದಲ್ಲೇ ಹಾಡು ಮತ್ತು ಟ್ರೇಲರ್ ಬಿಡುಗಡೆ ಆಗಲಿದೆ. ಸಿನಿಮಾದ ಕಥೆ ಏನು ಎಂಬುದರ ಸುಳಿವು ಟೀಸರ್​ನಲ್ಲಿ ಸಿಕ್ಕಿದೆ. ‘ಹುಡುಗಿಯರನ್ನು ಅಷ್ಟು ಸುಲಭವಾಗಿ ನಂಬಬೇಡ’, ‘ನಮ್ ಹುಡುಗಿ ಸರಿಯಾಗಿದ್ದಾಳೆ ಎಂಬ ನಂಬಿಕೆ ನನಗೆ ಇದೆ’ ಎಂಬಿತ್ಯಾದಿ ಡೈಲಾಗ್​ಗಳು ಟೀಸರ್​ನಲ್ಲಿವೆ. ಆ ಮೂಲಕ ಇದು ಪ್ರೀತಿ, ನಂಬಿಕೆ ಮತ್ತು ದ್ರೋಹಕ್ಕೆ ಸಂಬಂಧಿಸಿದ ಕಥೆ ಇರುಬಹುದು ಎಂಬ ಸುಳಿವು ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us