
‘ಕಬ್ಜ’ ಚಿತ್ರ (Kabzaa Movie) ರಿಲೀಸ್ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ದೊಡ್ಡ ಮಟ್ಟದಲ್ಲಿ ಈ ಚಿತ್ರವನ್ನು ರಿಲೀಸ್ ಮಾಡಲು ಭರದ ಸಿದ್ಧತೆ ನಡೆದಿದೆ. ಆರ್. ಚಂದ್ರು ನಿರ್ದೇಶಿಸಿ, ನಿರ್ಮಾಣ ಮಾಡಿರುವ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಸೃಷ್ಟಿ ಆಗಿದೆ. ಈಗ ಚಿತ್ರತಂಡದಿಂದ ಹೊಸ ಅಪ್ಡೇಟ್ ಒಂದು ಸಿಕ್ಕಿದೆ. ತಮಿಳಿನಾಡಿನಲ್ಲಿ ‘ಕಬ್ಜ’ ಹಂಚಿಕೆ ಹಕ್ಕು ಖ್ಯಾತ ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್ಸ್’ (Lyca Production) ಪಾಲಾಗಿದೆ. ಇದರಿಂದ ಚಿತ್ರತಂಡಕ್ಕೆ ದೊಡ್ಡ ಬಲ ಸಿಕ್ಕಂತೆ ಆಗಿದೆ. ಈ ಬಗ್ಗೆ ಲೈಕಾ ಪ್ರೊಡಕ್ಷನ್ಸ್ ಹಾಗೂ ಆರ್. ಚಂದ್ರು ಕಡೆಯಿಂದ ಅಧಿಕೃತ ಘೋಷಣೆ ಆಗಿದೆ.
ಯಾವುದೇ ಸಿನಿಮಾ ಹೆಚ್ಚು ಜನರಿಗೆ ತಲುಪಬೇಕು ಎಂದರೆ ಅದಕ್ಕೆ ಹಂಚಿಕೆದಾರರು ತುಂಬಾನೇ ಮುಖ್ಯವಾಗುತ್ತಾರೆ. ಸಿನಿಮಾ ಜನಪ್ರಿಯ ಹಂಚಿಕೆದಾರರ ಕೈಗೆ ಸೇರಿದರೆ ಹೆಚ್ಚು ಪ್ರೇಕ್ಷಕರನ್ನು ತಲುಪಲು ಸಹಕಾರಿ ಆಗಲಿದೆ. ಈಗ ಲೈಕಾ ಪ್ರೊಡಕ್ಷನ್ಸ್ ಅವರು ‘ಕಬ್ಜ’ ಚಿತ್ರವನ್ನು ತಮಿಳುನಾಡಿನಾದ್ಯಂತ ಹಂಚಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಸಿನಿಮಾಗೆ ಬಲ ಸಿಕ್ಕಂತೆ ಆಗಿದೆ. ಕಾಲಿವುಡ್ನಲ್ಲಿ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುವ ಸೂಚನೆ ಸಿಕ್ಕಿದೆ.
ಉಪೇಂದ್ರ, ಸುದೀಪ್ ಹಾಗೂ ಶಿವರಾಜ್ಕುಮಾರ್ ಪರಿಚಯ ತಮಿಳುನಾಡಿನ ಮಂದಿಗೆ ಇದೆ. ಈ ಮೂವರು ಒಂದೇ ಸಿನಿಮಾದಲ್ಲಿ ನಟಿಸಿರುವ ಕಾರಣದಿಂದ ‘ಕಬ್ಜ’ ಚಿತ್ರದ ಬಗ್ಗೆ ಪರ ರಾಜ್ಯದವರೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಈ ಟ್ರೇಲರ್ನಿಂದ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ಆರ್. ಚಂದ್ರು ಅವರು ಸಿನಿಮಾನ ಹೇಗೆ ಕಟ್ಟಿಕೊಟ್ಟಿದ್ದಾರೆ ಎಂಬುದನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾದು ಕೂತಿದ್ದಾರೆ.
ಇದನ್ನೂ ಓದಿ: Kabzaa: ‘ಕಬ್ಜ’ ಚಿತ್ರದಲ್ಲಿ ಅನೂಪ್ ರೇವಣ್ಣ ನಟನೆ; ಪಾತ್ರದ ಬಗ್ಗೆ ಬಾಯ್ಬಿಟ್ಟ ‘ಹೈಡ್ ಆ್ಯಂಡ್ ಸೀಕ್’ ಹೀರೋ
ಸುಭಾಸ್ಕರನ್ ಅವರು ಲೈಕಾ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದವರು. 2014ರಲ್ಲಿ ರಿಲೀಸ್ ಆದ ‘ಕತ್ತಿ’ ಅವರ ನಿರ್ಮಾಣದಲ್ಲಿ ಮೂಡಿ ಬಂದ ಮೊದಲ ಸಿನಿಮಾ. ರಜನಿಕಾಂತ್ ಹಾಗೂ ಸುಭಾಸ್ಕರನ್ ಮಧ್ಯೆ ಒಳ್ಳೆಯ ಒಡನಾಟ ಇದೆ. ರಜನಿ ನಟನೆಯ ‘ದರ್ಬಾರ್’ ಚಿತ್ರವನ್ನು ಲೈಕಾ ಸಂಸ್ಥೆ ನಿರ್ಮಾಣ ಮಾಡಿತ್ತು. ಇತ್ತೀಚೆಗೆ ಸುಭಾಸ್ಕರನ್ ಹುಟ್ಟುಹಬ್ಬದ ದಿನ ರಜನಿಕಾಂತ್ ಅವರ 170ನೇ ಚಿತ್ರ ಘೋಷಣೆ ಆಯಿತು. ಈ ಚಿತ್ರಕ್ಕೆ ಲೈಕಾ ಬಂಡವಾಳ ಹೂಡುತ್ತಿದೆ. ಕಳೆದ ವರ್ಷ ರಿಲೀಸ್ ಆಗಿ ಹಿಟ್ ಆದ ‘ಪೊನ್ನಿಯಿನ್ ಸೆಲ್ವನ್’, ಈ ವರ್ಷ ತೆರೆಗೆ ಬರಲಿರುವ ‘ಪೊನ್ನಿಯಿನ್ ಸೆಲ್ವನ್ 2’, ‘ಇಂಡಿಯನ್ 2’ ‘ಅಜಿತ್ ಕುಮಾರ್ 62’ ಚಿತ್ರಗಳಿಗೆ ಲೈಕಾ ಬಂಡವಾಳ ಹೂಡುತ್ತಿದೆ. ಇದರ ಜೊತೆ ಹಲವು ಚಿತ್ರಗಳನ್ನು ಹಂಚಿಕೆ ಮಾಡುತ್ತಿದೆ.
‘ಕಬ್ಜ’ ಚಿತ್ರ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಪುನೀತ್ ರಾಜ್ಕುಮಾರ್ ಬರ್ತ್ಡೇ ಪ್ರಯುಕ್ತ ಈ ಸಿನಿಮಾ ಮಾ.17ರಂದು ರಿಲೀಸ್ ಆಗುತ್ತಿದೆ. ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಉಪೇಂದ್ರ, ಶಿವರಾಜ್ಕುಮಾರ್, ಸುದೀಪ್, ಶ್ರೀಯಾ ಶರಣ್ ಮೊದಲಾದವರು ನಟಿಸಿದ್ದಾರೆ.
ಇದನ್ನೂ ಓದಿ: Kabzaa Movie: ‘ಕಬ್ಜ’ ಚಿತ್ರದಲ್ಲಿ ವಿಂಟೇಜ್ ಕಾರುಗಳ ಕಾರುಬಾರು; ರೆಟ್ರೋ ಕಥೆಗೆ ಮೆರುಗು ತಂದ ವಾಹನಗಳು
Published On - 7:58 am, Wed, 8 March 23