‘ಮುಹಮ್ಮದ್: The Messenger Of God’ ಚಿತ್ರದ ಪ್ರಸಾರಕ್ಕೆ ಮಹಾರಾಷ್ಟ್ರ ತಡೆ ಕೋರಿದ್ದೇಕೆ ಗೊತ್ತಾ?
ಮುಂಬೈ: ಮಹಾರಾಷ್ಟ್ರ ಸರ್ಕಾರ ವಿವಾದಿತ ಚಲನಚಿತ್ರ “ಮುಹಮ್ಮದ್: ದಿ ಮೆಸೆಂಜರ್ ಆಫ್ ಗಾಡ್ “ ಪ್ರಸಾರವಾಗದಂತೆ ತಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಈ ಸಂಬಂಧ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 2015ರಲ್ಲಿ ನಿರ್ಮಾಣವಾದ ಈ ಚಿತ್ರ ಈಗ ಜುಲೈ 21ರಂದು ಭಾರತದಲ್ಲಿ ಡಿಜಿಟಲ್‌ನಲ್ಲಿ ಅಂದ್ರೆ ಆನ್‌ಲೈನ್‌ನಲ್ಲಿ ಬಿಡುಗಡೆಯಾಗುತ್ತಿದೆ. ಆದ್ರೆ ಇದಕ್ಕೆ ಮುಂಬೈ ಮೂಲದ ಸುನ್ನಿ ಮುಸ್ಲಿಂ ಸಂಘಟನೆ ರಜಾ ಅಕಾಡೆಮಿ ವಿರೋಧ ವ್ಯಕ್ತಪಡಿಸಿದೆ. ಈ ಸಬಂಧ ಚಿತ್ರವನ್ನು […]
ಮುಂಬೈ: ಮಹಾರಾಷ್ಟ್ರ ಸರ್ಕಾರ ವಿವಾದಿತ ಚಲನಚಿತ್ರ “ಮುಹಮ್ಮದ್: ದಿ ಮೆಸೆಂಜರ್ ಆಫ್ ಗಾಡ್ “ ಪ್ರಸಾರವಾಗದಂತೆ ತಡೆಯಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಈ ಸಂಬಂಧ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
2015ರಲ್ಲಿ ನಿರ್ಮಾಣವಾದ ಈ ಚಿತ್ರ ಈಗ ಜುಲೈ 21ರಂದು ಭಾರತದಲ್ಲಿ ಡಿಜಿಟಲ್‌ನಲ್ಲಿ ಅಂದ್ರೆ ಆನ್‌ಲೈನ್‌ನಲ್ಲಿ ಬಿಡುಗಡೆಯಾಗುತ್ತಿದೆ. ಆದ್ರೆ ಇದಕ್ಕೆ ಮುಂಬೈ ಮೂಲದ ಸುನ್ನಿ ಮುಸ್ಲಿಂ ಸಂಘಟನೆ ರಜಾ ಅಕಾಡೆಮಿ ವಿರೋಧ ವ್ಯಕ್ತಪಡಿಸಿದೆ. ಈ ಸಬಂಧ ಚಿತ್ರವನ್ನು ಪ್ರಸಾರ ಮಾಡದಂತೆ ತಡೆಯಬೇಕೆಂದು ಮಹಾರಾಷ್ಟ್ರ ಸರ್ಕಾರಕ್ಕೆ ಆಗ್ರಹಿಸಿತ್ತು. ಅಷ್ಟೆ ಅಲ್ಲ ಚಿತ್ರದ ವಿತರರಕರಿಗೂ ಚಿತ್ರವನ್ನು ಬಿಡುಗಡೆ ಗೊಳಿಸದಂತೆ ಮನವಿ ಮಾಡಿತ್ತು.
ಇರಾನ್‌ನಲ್ಲಿ 2015ರಲ್ಲಿ ನಿರ್ಮಾಣವಾಗಿರುವ “ಮುಹಮ್ಮದ್: ದಿ ಮೆಸೆಂಜರ್ ಆಫ್ ಗಾಡ್” ಚಿತ್ರ ಪ್ರೊಫೆಟ್ ಮೊಹಮ್ಮದ್ ಅವರ ಕುರಿತಾಗಿದೆ. ಈ ಚಿತ್ರವನ್ನು ಇರಾನ್‌ನ ಖ್ಯಾತ ನಿರ್ದೇಶಕ ಮಜೀದ್ ಮಜಿದಿ ನಿರ್ದೇಶಿಸಿದ್ದು, ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ.
Maharashtra Home Dept writes to Central govt with a request to stop screening of the film "Muhammad: The Messenger of God" which is scheduled to be released on digital platform on July 21. The request has been made after receiving a complaint from Raza Academy,a Mumbai based org. pic.twitter.com/O6nRKjYwYo
— ANI (@ANI) July 15, 2020