ಅಮೆರಿಕದಲ್ಲಿ ಸೆಟಲ್ ಆದರೂ ಕೊವಿಡ್ ಸಮಯದಲ್ಲಿ ಕನ್ನಡಿಗರ ಕಷ್ಟಕ್ಕೆ ಮಿಡಿದ ದರ್ಶನ್‌ ‘ಶಾಸ್ತ್ರಿ’ ಸಿನಿಮಾ ನಟಿ

ಲಾಕ್​ಡೌನ್​ನಿಂದಾಗಿ ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಶೂಟಿಂಗ್​ ಸಂಪೂರ್ಣ ನಿಂತುಹೋಗಿವೆ. ಹಾಗಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಬಡ ಕಲಾವಿದರು ಬದುಕು ನಡೆಸುವುದು ಕಷ್ಟ ಆಗಿದೆ.

ಅಮೆರಿಕದಲ್ಲಿ ಸೆಟಲ್ ಆದರೂ ಕೊವಿಡ್ ಸಮಯದಲ್ಲಿ ಕನ್ನಡಿಗರ ಕಷ್ಟಕ್ಕೆ ಮಿಡಿದ ದರ್ಶನ್‌ 'ಶಾಸ್ತ್ರಿ' ಸಿನಿಮಾ ನಟಿ
ಮಾನ್ಯ ನಾಯ್ಡು- ದರ್ಶನ್

ಕೊರೊನಾ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಜನರ ಸಹಾಯಕ್ಕೆ ನಿಂತಿದ್ದಾರೆ. ತಮ್ಮ ಕೈಲಾದಷ್ಟು ಹಣ ನೀಡಿ, ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ. ಈಗ ದರ್ಶನ್​​ ನಟನೆಯ ‘ಶಾಸ್ತ್ರಿ’ ಸಿನಿಮಾದ ನಟಿ ಮಾನ್ಯ ನಾಯ್ಡು ಅವರು ಅಮೆರಿಕದಲ್ಲಿ ನೆಲಸಿದ್ದರೂ ಸಂಕಷ್ಟದಲ್ಲಿದ್ದರುವ ಕನ್ನಡಿಗರರಿಗಾಗಿ ಅವರ ಮನ ಮಿಡಿದಿದ್ದು, 1 ಲಕ್ಷ ರೂಪಾಯಿ ಧನ ಸಹಾಯ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಲಾಕ್​ಡೌನ್​ನಿಂದಾಗಿ ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಶೂಟಿಂಗ್​ ಸಂಪೂರ್ಣ ನಿಂತುಹೋಗಿವೆ. ಹಾಗಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಬಡ ಕಲಾವಿದರು ಬದುಕು ನಡೆಸುವುದು ಕಷ್ಟ ಆಗಿದೆ. ಅಂಥವರ ಸಹಾಯಕ್ಕೆ ನಟ ಉಪೇಂದ್ರ ಧಾವಿಸಿದ್ದಾರೆ. ಸಿನಿಮಾ ಚಟುವಟಿಕೆಗಳು ಸ್ಥಗಿತ ಆಗಿರುವುದರಿಂದ ಕೆಲಸ ಇಲ್ಲದೆ ಸಂಸಾರ ಸಾಗಿಸಲು ಕಷ್ಟಪಡುತ್ತಿರುವ ನೂರಾರು ಸಿನಿಮಾ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರ ಸಾವಿರಾರು ಕುಟುಂಬಗಳಿಗೆ ಉಪೇಂದ್ರ ಉಚಿತ ರೇಷನ್​ ಕಿಟ್​ಗಳನ್ನು ಹಂಚುವುದಾಗಿ ತಿಳಿಸಿದ್ದಾರೆ. ಇವರ ಕಾರ್ಯಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಸಾಧು ಕೋಕಿಲ ಸೇರಿ ಸಾಕಷ್ಟು ಜನರು ಉಪೇಂದ್ರ ಬೆಂಬಲಕ್ಕೆ ನಿಂತಿದ್ದಾರೆ. ಇದಕ್ಕೆ ಶಾಸ್ತ್ರಿ ಸಿನಿಮಾದ ನಟಿ ಮಾನ್ಯಾ ಕೂಡ ಕೈಜೋಡಿಸಿದ್ದಾರೆ.

‘ಶಾಸ್ತ್ರಿ’ ಸಿನಿಮಾದ ನಟಿ ಮಾನ್ಯಾ ನಾಯ್ಡು ಚಿತ್ರರಂಗ ತೊರೆದು ಅಮೆರಿಕದ ನ್ಯೂಯಾರ್ಕ್​ನಲ್ಲಿ ಸೆಟ್ಲ್​ ಆಗಿದ್ದಾರೆ. ಅವರು 1 ಲಕ್ಷ ರೂಪಾಯಿ ಸಹಾಯ ಮಾಡಿದ್ದಾರೆ. ಈ ಬಗ್ಗೆ ಉಪೇಂದ್ರ ಟ್ವೀಟ್​ ಮಾಡಿದ್ದಾರೆ. ಶಾಸ್ತ್ರಿ ಸಿನಿಮಾದ ನಟಿ ಮಾನ್ಯಾ ನಾಯ್ಡು ಸದ್ಯ ನ್ಯೂಯಾರ್ಕ್​​ನಲ್ಲಿ ವಾಸವಾಗಿದ್ದಾರೆ. ಅವರು 1 ಲಕ್ಷ ರೂಪಾಯಿ ನೀಡಿದ್ದು, ಸಹಾಯ ಅಗತ್ಯವಿರುವ ಕುಟುಂಬ ಹಾಗೂ ಮಕ್ಕಳಿಗೆ ಈ ಹಣ ಬಳಕೆ ಮಾಡಲು ಕೋರಿದ್ದಾರೆ. ಶೀಘ್ರದಲ್ಲೇ ಈ ಹಣದಿಂದ ದಿನಸಿ ಕಿಟ್​ಗಳನ್ನು ವಿತರಣೆ ಮಾಡುತ್ತಿದ್ದೇವೆ ಎಂದು ಉಪೇಂದ್ರ ಹೇಳಿದ್ದಾರೆ.

ಚೈಲ್ಡ್​ ಆರ್ಟಿಸ್ಟ್​ ಆಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಮಾನ್ಯಾ ನಂತರ ತೆಲುಗಿನ ‘ಸೀತಾರಾಮ ರಾಜು’ ಚಿತ್ರದ ಮೂಲಕ ನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕನ್ನಡದಲ್ಲಿ ‘ಶಾಸ್ತ್ರಿ’, ‘ಅಂಬಿ’ ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. 2010ರ ನಂತರ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ.

ಇದನ್ನೂ ಓದಿ: Upendra: ಸಿನಿಮಾ ಕಾರ್ಮಿಕರ ಸಾವಿರಾರು ಕುಟುಂಬಗಳಿಗೆ ಉಚಿತ ದಿನಸಿ ಕಿಟ್​ ವಿತರಿಸಲಿರುವ ಉಪೇಂದ್ರ

ಉಪೇಂದ್ರ ಮಾಡುತ್ತಿರುವ ಪುಣ್ಯದ ಕೆಲಸಕ್ಕೆ ಕೈ ಜೋಡಿಸಿದ ಸಾಧುಕೋಕಿಲ, ಸರೋಜಾದೇವಿ ಮುಂತಾದ ಸೆಲೆಬ್ರಿಟಿಗಳು