ಮೈಸೂರಿನ ಹೋಟೆಲ್​ನಲ್ಲಿ ಸಿಕ್ಕಿಬಿದ್ದ ಘಟನೆ ಬಗ್ಗೆ ಪ್ರಶ್ನೆ; ಅಪ್​ಸೆಟ್ ಆದ ಪವಿತ್ರಾ ಲೋಕೇಶ್

ನರೇಶ್ ಹಾಗೂ ಪವಿತ್ರಾ ಮೈಸೂರಿನ ಹೋಟೆಲ್​ನಲ್ಲಿ ಒಂದೇ ರೂಮಿನಲ್ಲಿ ಇದ್ದರು ಎಂಬದನ್ನು ತಿಳಿದ ರಮ್ಯಾ, ನೇರವಾಗಿ ಆ ಹೋಟೆಲ್​ಗೆ ಎಂಟ್ರಿ ನೀಡಿದ್ದರು. ಈ ಘಟನೆ ನಡೆಯುತ್ತಿರುವಾಗ ನರೇಶ್​ ವಿಚಿತ್ರವಾಗಿ ಕೇಕೆ ಹಾಕುತ್ತ ಸಂಭ್ರಮಿಸಿದ್ದರು.

ಪವಿತ್ರಾ ಲೋಕೇಶ್ ಹಾಗೂ ಟಾಲಿವುಡ್ ನಟ ನರೇಶ್ (Naresh) ಅಭಿನಯದ ‘ಮತ್ತೆ ಮದುವೆ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಮೇ 26ರಂದು ಈ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಟ್ರೇಲರ್ ನೋಡಿದ ಅನೇಕರಿಗೆ ಇದು ನರೇಶ್ ಹಾಗೂ ಪವಿತ್ರಾ ಲೋಕೇಶ್ ಬದುಕಿನ ಘಟನೆಗಳ ರೀತಿಯಲ್ಲಿ ಕಾಣಿಸಿದೆ. ‘ಮತ್ತೆ ಮದುವೆ’ ಸಿನಿಮಾದ (Matte Maduve Movie) ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಮೈಸೂರಿನಲ್ಲಿ ಸಿಕ್ಕಿಬಿದ್ದ ಘಟನೆ ಕುರಿತು ಪ್ರಶ್ನೆಗೆ ವೇದಿಕೆ ಮೇಲಿದ್ದ ಪವಿತ್ರಾ ಲೋಕೇಶ್ ಅವರು ಅಪ್​ಸೆಟ್ ಆದಂತೆ ಕಂಡರು.

ಕಳೆದ ವರ್ಷ ನರೇಶ್​ ಮತ್ತು ಅವರ ಪತ್ನಿ ರಮ್ಯಾ ರಘುಪತಿ ಜಗಳ ಅಕ್ಷರಶಃ ಬೀದಿಗೆ ಬಂದಿತ್ತು. ನರೇಶ್​ ಅವರು ನಟಿ ಪವಿತ್ರಾ ಲೋಕೇಶ್​ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ರಮ್ಯಾ ಆರೋಪಿಸಿದ್ದರು. ನರೇಶ್ ಹಾಗೂ ಪವಿತ್ರಾ ಮೈಸೂರಿನ ಹೋಟೆಲ್​ನಲ್ಲಿ ಒಂದೇ ರೂಮಿನಲ್ಲಿ ಇದ್ದರು ಎಂಬದನ್ನು ತಿಳಿದ ರಮ್ಯಾ, ನೇರವಾಗಿ ಆ ಹೋಟೆಲ್​ಗೆ ಎಂಟ್ರಿ ನೀಡಿದ್ದರು. ಈ ವೇಳೆ ಪವಿತ್ರಾ ಲೋಕೇಶ್​ ಮತ್ತು ರಮ್ಯಾ ಮುಖಾಮುಖಿ ಬೈಯ್ದಾಡಿಕೊಂಡರು. ಇಷ್ಟೆಲ್ಲ ಘಟನೆ ನಡೆಯುತ್ತಿರುವಾಗ ನರೇಶ್​ ವಿಚಿತ್ರವಾಗಿ ಕೇಕೆ ಹಾಕುತ್ತ ಸಂಭ್ರಮಿಸಿದ್ದರು.

ಈ ಘಟನೆಯ ವಿಡಿಯೋ ವೈರಲ್​ ಆಗಿತ್ತು. ಈ ಘಟನೆ ಸಿನಿಮಾದಲ್ಲೂ ಇದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿತ್ತು. ಈ ಬಗ್ಗೆ ಪ್ರಶ್ನೆ ಮಾಡಲಾಗಿದೆ. ‘ನಿಮ್ಮ ಜೀವನದಲ್ಲಿ ನಡೆದ ಘಟನೆ ಇಟ್ಟುಕೊಂಡೇ ಸಿನಿಮಾ ಮಾಡಿದ್ದೀರಿ ಅನ್ನೋ ಮಾತಿದೆ. ಹೌದೇ’ ಎಂದು ಕೇಳಲಾಯಿತು. ಇದಕ್ಕೆ ನರೇಶ್ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ನರೇಶ್​-ಪವಿತ್ರಾ ಲೋಕೇಶ್​ ಜೋಡಿಯ ‘ಮತ್ತೆ ಮದುವೆ’ ಬಗ್ಗೆ ಇನ್ನಷ್ಟು ಮಾಹಿತಿ ಬಹಿರಂಗ

‘ನೀವು ಮೈಸೂರಿನ ಘಟನೆ ಬಗ್ಗೆ ಮಾತನಾಡುತ್ತಿದ್ದೀರಿ ಅಲ್ಲವೇ? ಆ ರೀತಿಯ ಹಲವು ಘಟನೆಗಳು ನಡೆದಿವೆ. ಯೂಟ್ಯೂಬ್​ನಲ್ಲಿ ಈ ರೀತಿಯ ನೂರಾರು ವಿಡಿಯೋಗಳು ಲಭ್ಯವಿದೆ. ಸೆಲೆಬ್ರಿಟಿಗಳ ಬಾಳಲ್ಲಿ ಈ ಘಟನೆ ನಡೆದಾಗ ಅದು ಸುದ್ದಿ ಆಗುತ್ತದೆ. ನನ್ನ ಹಾಗೂ ಪವಿತ್ರಾ ಲೋಕೇಶ್ ಜೀವನದಲ್ಲಿ ನಡೆದ ಘಟನೆ ಬಗ್ಗೆ ಹೇಳಬೇಕು ಎಂದು ನಮಗೆ ಇದ್ದಿದ್ದರೆ ಯೂಟ್ಯೂಬ್​ಗೆ ಬಂದು ಹೇಳುತ್ತಿದ್ದೆವು. ಅದಕ್ಕಾಗಿ 15 ಕೋಟಿ ರೂಪಾಯಿ ವ್ಯಯಿಸುತ್ತಿರಲಿಲ್ಲ’ ಎಂದಿದ್ದಾರೆ ನರೇಶ್.

ಮೈಸೂರಿನಲ್ಲಿ ಸಿಕ್ಕಿಬಿದ್ದ ಘಟನೆ ಬಗ್ಗೆ ಪ್ರಶ್ನೆ ಎದುರಾದಾಗ ಪವಿತ್ರಾ ಲೋಕೇಶ್ ಅವರು ಅಪ್​ಸೆಟ್ ಆದಂತೆ ಕಂಡುಬಂದರು. ‘ಮತ್ತೆ ಮದುವೆ’ ಚಿತ್ರವನ್ನು ನರೇಶ್​ ಅವರು ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:05 am, Thu, 18 May 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us