‘ತತ್ಸಮ ತದ್ಭವ’ ಸಿನಿಮಾ ಇಂದು (ಸೆಪ್ಟೆಂಬರ್ 15) ರಿಲೀಸ್ ಆಗಿದೆ. ಈ ಚಿತ್ರದ ಮೂಲಕ ಮೇಘನಾ ರಾಜ್ (Meghana Raj) ಅವರು ದೊಡ್ಡ ಪರದೆಗೆ ಕಂಬ್ಯಾಕ್ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಪ್ರೀಮಿಯರ್ ಶೋ ಸೆಪ್ಟೆಂಬರ್ 15ರಂದು ಆಯೋಜನೆ ಮಾಡಲಾಗಿತ್ತು. ಇದನ್ನು ವೀಕ್ಷಿಸಲು ಮೇಘನಾ ರಾಜ್, ನಿರ್ಮಾಪಕ ಪನ್ನಗ ಭರಣ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋ ವೈರಲ್ ಆಗಿದೆ.
ಮೇಘನಾ ರಾಜ್ ಅವರು ಹಲವು ಕಾರಣಗಳಿಂದ ನಟನೆಯಿಂದ ದೂರವಿದ್ದರು. ಈಗ ಅವರು ಕಂಬ್ಯಾಕ್ ಮಾಡಿದ್ದಾರೆ. ಇದಕ್ಕಾಗಿ ಅವರು ವಿಶೇಷ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದುಕೊಂಡ ಪತಿಯನ್ನು ಹುಡುಕುವ ಕಥೆ ಸಿನಿಮಾದಲ್ಲಿದೆ.
ಈ ಬಗ್ಗೆ ಪನ್ನಗ ಭರಣ ಅವರು ವಿಡಿಯೋ ಪೋಸ್ಟ್ ಮಾಡಿದ್ದಾರೆ. ‘ಪ್ರೀಮಿಯರ್ ಶೋನಲ್ಲಿ ನಮ್ಮ ಅಭಿಮಾನಿಗಳನ್ನು ಭೇಟಿ ಮಾಡಲು ಮೆಟ್ರೋದಲ್ಲಿ ಸಾಗಿದೆವು’ ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ. ಇದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ವಿವಿಧ ಬಗೆಯಲ್ಲಿ ಇದಕ್ಕೆ ಕಮೆಂಟ್ಗಳು ಬಂದಿವೆ. ಮೇಘನಾ ಅವರ ಸರಳತೆಯನ್ನು ಅನೇಕರು ಕೊಂಡಾಡಿದ್ದಾರೆ.
ಕಂಬ್ಯಾಕ್ ಸಿನಿಮಾ ಎಂದಾಗ ಅದಕ್ಕೆ ದೊಡ್ಡ ಮಟ್ಟದ ಪ್ರಚಾರ ನೀಡಲೇಬೇಕು. ಹೀಗಾಗಿ, ಮೇಘನಾ ರಾಜ್ ಅವರು ‘ತತ್ಸಮ ತದ್ಭವ’ ಚಿತ್ರಕ್ಕೆ ಭರ್ಜರಿ ಪ್ರಮೋಷನ್ ನೀಡುತ್ತಿದ್ದಾರೆ. ನಿರ್ಮಾಪಕ ಪನ್ನಗ ಭರಣ ಕೂಡ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ. ವಿವಿಧ ಕಾಲೇಜುಗಳಿಗೆ ತೆರಳಿ ತಂಡ ಪ್ರಚಾರ ಮಾಡಿದೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರು ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ.
ಇದನ್ನೂ ಓದಿ: ಈ ಚಾಲೆಂಜ್ ಗೆದ್ದರೆ ನಿಮಗೆ ಸಿಗಲಿದೆ ಮೇಘನಾ ರಾಜ್ ಭೇಟಿ ಮಾಡುವ ಅವಕಾಶ; ನೀವು ಮಾಡಬೇಕಾಗಿದ್ದಿಷ್ಟೇ..
ಯುವ ನಿರ್ದೇಶಕ ವಿಶಾಲ್ ಆತ್ರೇಯ ಅವರು ‘ತತ್ಸಮ ತದ್ಭವ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಈ ಚಿತ್ರದ ಲಾಲಿ ಹಾಡು ಗಮನ ಸೆಳೆದಿದೆ. ಸಿನಿಮಾ ನೋಡಿದವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ