Meghana Raj: ಶಿವರಾಜ್​ಕುಮಾರ್​ಗೆ ವಿಶೇಷ ರೀತಿಯಲ್ಲಿ ವಿಶ್ ಮಾಡಿದ ನಟಿ ಮೇಘನಾ ರಾಜ್

Shivarajkumar: ಮೇಘನಾ ರಾಜ್ ನಟನೆಯ ‘ತತ್ಸಮ ತದ್ಭವ’ ಚಿತ್ರದ ಸೆಟ್​ಗೆ ಶಿವಣ್ಣ ಆಗಮಿಸಿದ್ದರು. ಈ ವೇಳೆ ಅವರು ಬಿಳಿ ಬಣ್ಣದ ಬಟ್ಟೆ ಧರಿಸಿದ್ದರು. ಈ ವಿಡಿಯೋನ ಈಗ ಮೇಘನಾ ರಾಜ್ ಹಂಚಿಕೊಂಡಿದ್ದಾರೆ.

Meghana Raj: ಶಿವರಾಜ್​ಕುಮಾರ್​ಗೆ ವಿಶೇಷ ರೀತಿಯಲ್ಲಿ ವಿಶ್ ಮಾಡಿದ ನಟಿ ಮೇಘನಾ ರಾಜ್
ಶಿವಣ್ಣ-ಮೇಘನಾ

Updated on: Jul 12, 2023 | 2:39 PM

ಶಿವರಾಜ್​ಕುಮಾರ್ (Shivarajkumar) ಅವರು ಇಂದು (ಜುಲೈ 12) ಅದ್ದೂರಿಯಾಗಿ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಶಿವಣ್ಣನಿಗೆ ವಿಶ್ ಮಾಡುತ್ತಿದ್ದಾರೆ. ಶಿವರಾಜ್​ಕುಮಾರ್ ಅವರ ಜೊತೆಗಿನ ಫೋಟೋ ಹಂಚಿಕೊಂಡು ಶುಭಾಶಯ ಕೋರುತ್ತಿದ್ದಾರೆ. ಈಗ ನಟಿ ಮೇಘನಾ ರಾಜ್ (Meghana Raj)​ ಕೂಡ ಶಿವಣ್ಣನಿಗೆ ವಿಶೇಷ ರೀತಿಯಲ್ಲಿ ವಿಶ್ ಮಾಡಿದ್ದಾರೆ. ಮೇಘನಾ ರಾಜ್ ಹಂಚಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅನೇಕರು ಈ ವಿಡಿಯೋಗೆ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.

ಶಿವರಾಜ್​ಕುಮಾರ್ ಅವರದ್ದು ವಿಶಾಲ ಹೃದಯ. ಅವರಿಗೆ ಸಮಯ ಇದ್ದು, ಆಹ್ವಾನ ಇದ್ದರೆ ಇತರೆ ಕಲಾವಿದರ ಸಿನಿಮಾ ಸೆಟ್​ಗೆ ಭೇಟಿ ನೀಡುತ್ತಾರೆ. ಅದೇ ರೀತಿ ಮೇಘನಾ ರಾಜ್ ನಟನೆಯ ‘ತತ್ಸಮ ತದ್ಭವ’ ಚಿತ್ರದ ಸೆಟ್​ಗೆ ಶಿವಣ್ಣ ಆಗಮಿಸಿದ್ದರು. ಈ ವೇಳೆ ಅವರು ಬಿಳಿ ಬಣ್ಣದ ಬಟ್ಟೆ ಧರಿಸಿದ್ದರು. ಈ ವಿಡಿಯೋನ ಈಗ ಮೇಘನಾ ರಾಜ್ ಹಂಚಿಕೊಂಡಿದ್ದಾರೆ. ಅವರು ಕೆಲ ಹೊತ್ತು ಚಿತ್ರತಂಡದ ಜೊತೆ ಕುಳಿತು ಮಾತನಾಡಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಮೇಘನಾ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. ಅವರು ಮರಳಿ ಚಿತ್ರರಂಗಕ್ಕೆ ಬರಬೇಕು ಎಂಬುದು ಫ್ಯಾನ್ಸ್ ಕೋರಿಕೆ ಆಗಿತ್ತು. ಈ ಕೋರಿಕೆಯನ್ನು ಮೇಘನಾ ರಾಜ್ ಈಡೇರಿಸಿದ್ದಾರೆ. ‘ತತ್ಸಮ ತದ್ಭವ’ ಚಿತ್ರ ಅವರ ಕಂಬ್ಯಾಕ್ ಸಿನಿಮಾ. ಕೆಲ ತಿಂಗಳ ಹಿಂದೆ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದೆ. ಶೀಘ್ರದಲ್ಲೇ ಸಿನಿಮಾ ರಿಲೀಸ್ ಆಗಲಿದೆ.

ಇದನ್ನೂ ಓದಿ: ‘ಜೈಲರ್​’, ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾಗಳ ಬಗ್ಗೆ ಅಪ್​ಡೇಟ್​ ನೀಡಿದ ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​

ಕ್ರೈಮ್ ಥ್ರಿಲ್ಲರ್ ಕಥೆಯನ್ನು ಈ ಚಿತ್ರ ಹೊಂದಿದೆ. ಪ್ರಜ್ವಲ್ ದೇವರಾಜ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮೇಘನಾ ರಾಜ್ ಗೆಳೆಯ ಪನ್ನಗ ಭರಣ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅನೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

ಶಿವರಾಜ್​ಕುಮಾರ್ ಅವರ ಕೈಯಲ್ಲಿ ಈಗಾಗಲೇ 10 ಸಿನಿಮಾಗಳಿವೆ. ಇದರ ಜೊತೆಗೆ ಅವರ ಮತ್ತೊಂದಷ್ಟು ಸಿನಿಮಾಗಳು ಇಂದು (ಜುಲೈ 12) ಘೋಷಣೆ ಆಗಿದೆ. ‘ಘೋಸ್ಟ್​’ ಸಿನಿಮಾದ ಕಡೆಯಿಂದ ರಿಲೀಸ್ ಆದ ‘ಬಿಗ್ ಡ್ಯಾಡಿ’ ಟೀಸರ್ ಸಾಕಷ್ಟು ಗಮನ ಸೆಳೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us