Shivarajkumar: ‘ಜೈಲರ್​’, ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾಗಳ ಬಗ್ಗೆ ಅಪ್​ಡೇಟ್​ ನೀಡಿದ ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​

Shivarajkumar: ‘ಜೈಲರ್​’, ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾಗಳ ಬಗ್ಗೆ ಅಪ್​ಡೇಟ್​ ನೀಡಿದ ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​

ಮದನ್​ ಕುಮಾರ್​
|

Updated on: Jul 12, 2023 | 1:37 PM

Jailer Movie: ಪರಭಾಷೆಯ ಸಿನಿಮಾಗಳಲ್ಲೂ ಶಿವರಾಜ್​ಕುಮಾರ್​ ನಟಿಸುತ್ತಿದ್ದಾರೆ. ಆ ಕಾರಣದಿಂದ ‘ಜೈಲರ್​’ ಮತ್ತು ‘ಕ್ಯಾಪ್ಟನ್​ ಮಿಲ್ಲರ್​’ ಚಿತ್ರಗಳ ಮೇಲೆ ನಿರೀಕ್ಷೆ ಇದೆ.

‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ (Shivarajkumar) ಅವರಿಗೆ ಪರಭಾಷೆಯಲ್ಲೂ ಡಿಮ್ಯಾಂಡ್​ ಇದೆ. ರಜನಿಕಾಂತ್​ ಜೊತೆ ‘ಜೈಲರ್​’ (Jailer Movie) ಸಿನಿಮಾದಲ್ಲಿ ಅವರು ನಟಿಸಿದ್ದಾರೆ. ಆ ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ಇನ್ನು, ಕಾಲಿವುಡ್​ ನಟ ಧನುಷ್​ ಜೊತೆ ‘ಕ್ಯಾಪ್ಟನ್​ ಮಿಲ್ಲರ್​’ (Captain Miller) ಚಿತ್ರದಲ್ಲೂ ಶಿವಣ್ಣ ಒಂದು ಪಾತ್ರ ಮಾಡಿದ್ದಾರೆ. ಈ ಸಿನಿಮಾಗಳ ಬಗ್ಗೆ ಅವರು ಅಪ್​ಡೇಟ್​ ನೀಡಿದ್ದಾರೆ. ‘ಜೈಲರ್​’ನಲ್ಲಿ ತಮ್ಮದು 10 ನಿಮಿಷಗಳ ಅತಿಥಿ ಪಾತ್ರ ಎಂದು ಶಿವಣ್ಣ ಹೇಳಿದ್ದಾರೆ. ರಜನಿಕಾಂತ್​ ಜೊತೆ ನಟಿಸಿದ್ದೇ ಒಂದು ಖುಷಿ ಎಂದಿದ್ದಾರೆ ‘ಸೆಂಚುರಿ ಸ್ಟಾರ್​’. ಈ ಎರಡೂ ಸಿನಿಮಾಗಳಿಗೆ ಅವರು ಶೂಟಿಂಗ್​ ಮುಗಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.