Updated on:Jun 02, 2023 | 8:07 AM
ಶಿವರಾಜ್ಕುಮಾರ್ ಅವರು ಇದೇ ಮೊದಲ ಬಾರಿಗೆ ಪರಭಾಷೆಯ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ರಜನಿಕಾಂತ್ ನಟನೆಯ ‘ಜೈಲರ್’ ಚಿತ್ರದಲ್ಲಿ ಶಿವರಾಜ್ಕುಮಾರ್ ಅವರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದಿದೆ.
ಶಿವರಾಜ್ಕುಮಾರ್ ಹಾಗೂ ರಜನಿಕಾಂತ್ ಬೇರೆ ಬೇರೆ ಚಿತ್ರರಂಗದಲ್ಲಿ ಬ್ಯುಸಿ ಇದ್ದವರು. ಆದರೆ, ಈವರೆಗೆ ಇವರು ಒಟ್ಟಾಗಿ ನಟಿಸಿರಲಿಲ್ಲ. ಈಗ ರಜನಿಕಾಂತ್, ಶಿವಣ್ಣ ಒಟ್ಟಿಗೆ ತೆರೆಹಂಚಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
‘ಜೈಲರ್’ ಚಿತ್ರದ ಶೂಟಿಂಗ್ ಪೂರ್ಣಗೊಂಡ ಬಗ್ಗೆ ಚಿತ್ರತಂಡದಿಂದ ಮಾಹಿತಿ ಸಿಕ್ಕಿದೆ. ಸನ್ ಪಿಕ್ಚರ್ಸ್ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಫೋಟೋ ಹಂಚಿಕೊಳ್ಳಲಾಗಿದೆ.
‘ಜೈಲರ್’ ಚಿತ್ರಕ್ಕೆ ತಮನ್ನಾ ನಾಯಕಿ. ಈ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ಇರಲಿದೆ ಎನ್ನಲಾಗುತ್ತಿದೆ. ಆಗಸ್ಟ್ 10ರಂದು ಸಿನಿಮಾ ರಿಲೀಸ್ ಆಗಲಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಚಿತ್ರಕ್ಕಿದೆ.
ಶಿವರಾಜ್ ಕುಮಾರ್, ರಜನೀಕಾಂತ್ ಮಾತ್ರವಲ್ಲದೆ ಮೋಹನ್ಲಾಲ್, ಜಾಕಿ ಶ್ರಾಫ್ ಕೂಡ ಬಣ್ಣ ಹಚ್ಚಿದ್ದಾರೆ. ಈ ಚಿತ್ರ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.
Published On - 8:06 am, Fri, 2 June 23