ಕುತೂಹಲ‌ ಮೂಡಿಸಿದ ಕೌಶಿಕ್, ಅಶ್ವಿತಾ ನಟನೆಯ ‘ಮಿಸ್‌ಮ್ಯಾಚ್’ ಸಿನಿಮಾ ಟೀಸರ್

ಸಾಯಿ ಶ್ರೀನಿಧಿ ಅವರು ನಿರ್ದೇಶನ ಮಾಡಿರುವ ‘ಮಿಸ್‌ಮ್ಯಾಚ್’ ಸಿನಿಮಾದಲ್ಲಿ ಅಶ್ವಿತಾ ಹೆಗ್ಡೆ, ಕೌಶಿಕ್ ಗೌಡ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಚಿತ್ರದ ಕಥಾಹಂದರ ಏನು ಎಂಬುದನ್ನು ಟೀಸರ್ ಮೂಲಕ ತಿಳಿಸಲಾಗಿದೆ. ತೇಜೇಶ್, ಅಮೃತಾ, ನಾಗೇಂದ್ರ ಶಾ, ಅನಿರುದ್ಧ್ ಆಚಾರ್ಯ, ಲಕ್ಷ್ಮೀ ಸಿದ್ದಯ್ಯ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಕುತೂಹಲ‌ ಮೂಡಿಸಿದ ಕೌಶಿಕ್, ಅಶ್ವಿತಾ ನಟನೆಯ ‘ಮಿಸ್‌ಮ್ಯಾಚ್’ ಸಿನಿಮಾ ಟೀಸರ್
Ashwitha Hegde, Kaushik Gowda

Updated on: Oct 01, 2026 | 4:49 PM

ಶೀರ್ಷಿಕೆ ಮೂಲಕ ‘ಮಿಸ್‌ಮ್ಯಾಚ್’ ಸಿನಿಮಾ ಗಮನ ಸೆಳೆದಿದೆ. ಕಳೆದ ಕೆಲವು ದಿನಗಳ ಹಿಂದೆ ತೆರೆಕಂಡಿದ್ದ ಐದು ಕಥೆಗಳ ‘ಬಿ.ಟಿ.ಎಸ್’ ಚಿತ್ರದ ಐವರು ನಿರ್ದೇಶಕರಲ್ಲಿ ಒಬ್ಬರಾದ ಸಾಯಿ ಶ್ರೀನಿಧಿ ಅವರು ಈಗ ‘ಮಿಸ್‌ಮ್ಯಾಚ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ಮಠ’ ಗುರುಪ್ರಸಾದ್ ಅವರ ಗರಡಿಯಲ್ಲಿ ಪಳಗಿದ ಸಾಯಿ ಶ್ರೀನಿಧಿ ಅವರು ಈ ಮೊದಲು ‘ನೋಡಿದವರು ಏನಂತಾರೆ’ ಚಿತ್ರಕ್ಕೆ ಸಹ-ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಈಗ ‘ಮಿಸ್‌ಮ್ಯಾಚ್’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

‘ಮಿಸ್‌ಮ್ಯಾಚ್’ ಚಿತ್ರದ ಶೂಟಿಂಗ್ ಮುಕ್ತಾಯ ಆಗಿದೆ. ಮಲೆನಾಡಿನ ಸೊಗಡಿನಲ್ಲಿ ಮೂಡಿಬಂದಿರುವ ಒಂದು ಫೀಲ್‌ಗುಡ್ ಫ್ಯಾಮಿಲಿ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಈ ಸಿನಿಮಾದಲ್ಲಿ ಇರಲಿದೆ ಎಂದು ಚಿತ್ರತಂಡ ಹೇಳಿದೆ. ಕಥೆಗೆ ತಕ್ಕಂತೆ ಮಲೆನಾಡ ಭಾಗದಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿವೆ.

ಇತ್ತೀಚೆಗೆ ‘ಮಿಸ್‌ಮ್ಯಾಚ್’ ಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. ಟೀಸರ್ ಮೂಲಕ ಚಿತ್ರತಂಡ ಕುತೂಹಲ ಮೂಡಿಸಿದೆ. ‘ಬಿ.ಟಿ.ಎಸ್’ ಚಿತ್ರದಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದ ಕೌಶಿಕ್ ಗೌಡ ಅವರು ಈಗ ‘ಮಿಸ್‌ಮ್ಯಾಚ್’ ಚಿತ್ರದಲ್ಲಿ ನಾಯಕನಾಗಿದ್ದಾರೆ. ‘ಕಂಬ್ಳಿಹುಳ’ ಖ್ಯಾತಿಯ ಅಶ್ವಿತಾ ಹೆಗ್ಡೆ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ.

MissMatch | Official Kannada Teaser | Koushik Gowda | Ashwitha Hegde | Sai Shrinidhi | Judah Sandhy

‘ವಿಡಿಯೋ’ ಖ್ಯಾತಿಯ ತೇಜೇಶ್, ಅಮೃತಾ, ಅನಿರುದ್ಧ್ ಆಚಾರ್ಯ, ನಾಗೇಂದ್ರ ಶಾ, ಲಕ್ಷ್ಮೀ ಸಿದ್ದಯ್ಯ ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ. ಸಾಯಿ ಶ್ರೀನಿಧಿ ಅವರು ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಜೂಡಾ ಸ್ಯಾಂಡಿ ಅವರು ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ 4 ಹಾಡುಗಳಿದ್ದು, ಆ ಪೈಕಿ ಮೂರಕ್ಕೆ ಜೂಡಾ ಸ್ಯಾಂಡಿ ಅವರೇ ಧ್ವನಿಯಾಗಿದ್ದಾರೆ. ಒಂದು ಗೀತೆಯನ್ನು ಲಕ್ಷ್ಮೀ ಬೆಳ್ಮಣ್ಣು ಹಾಡಿದ್ದಾರೆ.

ಇದನ್ನೂ ಓದಿ: ಎರಡೇ ದಿನದಲ್ಲಿ 5 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡ ‘ರಾಜನಿವಾಸ’ ಚಿತ್ರದ ಹೊಸ ಹಾಡು

ಗಣೇಶ್ ಮಹಾಬಲ ಅವರ ಛಾಯಾಗ್ರಹಣ ಹಾಗೂ ದೀಪಕ್ ಕುಲಾಲ್ ಅವರ ಸಂಕಲನ ಈ ಸಿನಿಮಾಗಿದೆ. ತೇಜಸ್ ವೆಂಕಟೇಶ್ ಅವರು ‘ತೇಜಸ್ ಪಬ್ಲಿಕೇಶನ್’ ಮತ್ತು ‘ಸಟಾಯರ್’ ಸಂಸ್ಥೆ ಮುಖೇನ ‘ಮಿಸ್‌ಮ್ಯಾಚ್’ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ‘ಪ್ರೀತಿ ವಹಿವಾಟಿನಂತೆ ಆಗಿರುವ ಇಂದಿನ ಸಮಯದಲ್ಲಿ, ಈ ಇಬ್ಬರ ವಿಭಿನ್ನ ಜಗತ್ತುಗಳು ಒಂದಾದಾಗ, ಅಲ್ಲಿ ಪ್ರೀತಿ-ಪ್ರೇಮ-ಸ್ನೇಹ ಮತ್ತು ಬಾಂಧವ್ಯಗಳ ನಡುವೆ ನಡೆಯುವ ಹಾಸ್ಯ ಮತ್ತು ಭಾವನಾತ್ಮಕ ನಂಟೇ ಮಿಸ್‌ಮ್ಯಾಚ್’ ಎಂದು ಚಿತ್ರತಂಡ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us