ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟಿನ ಆರೋಗಳು ಬಂದಿರುವ ಬಗ್ಗೆ ಹಿರಿಯ ನಟಿ ಹಾಗೂ ಬಿಜೆಪಿ ನಾಯಕಿ ತಾರಾ ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಯಾವುದೇ ದುರ್ನಾತ ಬಡಿಯದಿರಲಿ ಅಂತಾ ಆ ದೇವರಿಗೆ ನಮಸ್ಕಾರ ಮಾಡಿದೆ ಎಂದು ಟಿವಿ9ಗೆ ಸ್ಯಾಂಡಲ್ವುಡ್ ಹಿರಿಯ ನಟಿ ತಾರಾ ಹೇಳಿದ್ದಾರೆ. ಡ್ರಗ್ಸ್ ಜಾಲದ ನಂಟು ವಿಚಾರ ಚಿತ್ರರಂಗಕ್ಕೆ ಅಂಟಿಕೊಂಡಿದೆ. ನನ್ನ ಗಮನಕ್ಕೆ ಈ ರೀತಿಯ ಡ್ರಗ್ಸ್ ವಿಚಾರ ಗೊತ್ತಿಲ್ಲ. ಕುಟುಂಬದ ಒಬ್ಬ ಸದಸ್ಯ ತಪ್ಪು ಮಾಡಿದರೆ ಎಲ್ಲರೂ ತಪ್ಪು ಮಾಡಿದ ಹಾಗೆ.
ಈ ರೀತಿ ತಪ್ಪು ಮಾಡಿದರೆ ಕೆಟ್ಟ ಹೆಸರು ಬರಲಿದೆ. ಇದು ಆತಂಕಕಾರಿ ವಿಚಾರ ಮತ್ತು ಇದು ಒಳ್ಳೆಯ ವಿಚಾರ ಅಲ್ಲ. ನಮ್ಮನ್ನೇ ಅಭಿಮಾನಿಗಳು ಅನುಸರಿಸಿದರೆ ಗತಿ ಏನು? ಎಂದು ತಾರಾ ಪ್ರಶ್ನಿಸಿದ್ದಾರೆ. ಹೀರೋ, ಹೀರೋಯಿನ್ ಮಾಡಿದರೆಂದು ಯುವಕರು ಅನುಕರಣೆ ಮಾಡಬಹುದು.
ನಮ್ಮ ಜನಾಂಗಕ್ಕೆ ನಾವು ಯಾರೂ ಮೋಸ ಮಾಡಬಾರದು. ಹೀಗಾಗಿ, ಸಸಿಎಂ ಹಾಗೂ ಗೃಹ ಮಂತ್ರಿಗೆ ಈ ಬಗ್ಗೆ ಪತ್ರ ಬರೆದಿರುವೆ ಎಂದು ಟಿವಿ9ಗೆ ಸ್ಯಾಂಡಲ್ವುಡ್ ಹಿರಿಯ ನಟಿ ತಾರಾ ಹೇಳಿದ್ದಾರೆ.
Published On - 12:51 pm, Tue, 1 September 20