‘ಜೂಜು-ಮದ್ಯ-ಗುಟ್ಕಾ ಜಾಹೀರಾತು ನೀಡುವ Starಗಳದ್ದೂ ದುಷ್ಕೃತ್ಯ ಅಲ್ಲವೇ?’

  • Updated On - 2:41 pm, Tue, 1 September 20
‘ಜೂಜು-ಮದ್ಯ-ಗುಟ್ಕಾ ಜಾಹೀರಾತು ನೀಡುವ Starಗಳದ್ದೂ ದುಷ್ಕೃತ್ಯ ಅಲ್ಲವೇ?’

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಇರುವ ಬಗ್ಗೆ ಆರೋಪ ಪ್ರತ್ಯಾರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಮೈನಾ ಸಿನಿಮಾ ಖ್ಯಾತಿಯ ಚೇತನ್ ಅವರು ನಟ ನಟಿಯರಿಗೆ ಮತ್ತೊಂದು ಪ್ರಮುಖ ಪ್ರಶ್ನೆ ಎತ್ತಿದ್ದಾರೆ.

ಇದನ್ನೂ ಓದಿ: ನಟ ಚೇತನ್​ ಬಹುಶಃ ಪ್ರಧಾನಿ ಮೋದಿ ಬಗ್ಗೆ ಮಾತ್ನಾಡಿರಬೇಕು: ಸುದೀಪ್

ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಈ ಕುರಿತು ಪೋಸ್ಟ್​ ಹಾಕಿರೋ ಚೇತನ್​ ಕೇವಲ ಹಣಕ್ಕಾಗಿ ಮದ್ಯ, ಗುಟ್ಕಾ, ಜೂಜು ಬಗ್ಗೆ ಜಾಹೀರಾತು ನೀಡುವ ‘ಸ್ಟಾರ್​’ಗಳದ್ದೂ ದುಷ್ಕೃತ್ಯವಲ್ಲವೇ? ಅವರ ಮೇಲೆ ಬೆರಳು ತೋರಿಸದಿರುವುದು ಸೋಜಿಗ, ಅದೂ ಮೋಸ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಜೊತೆಗೆ, ಇವರು ಸಾಮಾಜಿಕ ದುಷ್ಕೃತ್ಯಗಳ ‘ರಾಯಭಾರಿಗಳಲ್ಲವೇ’? ಎಂದು ಸಾಮಾಜಿಕ ಜಾಲತಾಣದಲ್ಲಿ ನಟ ಚೇತನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

https://www.facebook.com/OfficialChetanAhimsaActor/posts/3576889209002364

Published On - 11:52 am, Tue, 1 September 20

Click on your DTH Provider to Add TV9 Kannada