ಸಂಜನಾ ಮಹೀರಾ ಎಂದು ಹೇಳಿಕೊಳ್ಳದೆ ಇರುವುದು ಸಮಸ್ಯೆಯಲ್ಲ -ಮೌಲಾನಾ ಅಬ್ಬಿದ್ದೀನಿ ಸ್ಪಷ್ಟನೆ

ಸಂಜನಾ ಮಹೀರಾ ಎಂದು ಹೇಳಿಕೊಳ್ಳದೆ ಇರುವುದು ಸಮಸ್ಯೆಯಲ್ಲ -ಮೌಲಾನಾ ಅಬ್ಬಿದ್ದೀನಿ ಸ್ಪಷ್ಟನೆ

ಬೆಂಗಳೂರು: ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನೂರಕ್ಕೆ ನೂರು ಸತ್ಯ. ನಟಿ ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ನಮ್ಮ ಮದರಸಾದಲ್ಲೇ ಎಂದು ನಗರದ ಟ್ಯಾನರಿ ರೋಡ್​ನಲ್ಲಿರುವ ದಾರುಲ್ ಉಲೂಮ್ ಶಾಹ್ ವಲಿಯುಲ್ಲಾ ಮದರಸಾದ ಮೌಲಾನಾ ಜೈನುಲ್ ಅಬ್ಬಿದ್ದೀನಿ ಸ್ಪಷ್ಟನೆ ನೀಡಿದ್ದಾರೆ. ಸಂಜನಾ ಗಲ್ರಾನಿ ನಾನು ಇಸ್ಲಾಂ ಧರ್ಮವನ್ನು ಇಷ್ಟಪಟ್ಟು ಸ್ವೀಕರಿಸುತ್ತಿದ್ದೇನೆ ಅಂತಾ ಹೇಳಿದ್ದರು. ನಾನು ದೇವರ ಬಳಿ ಪ್ರಾರ್ಥನೆ ಮಾಡುತ್ತೇನೆ. ಸಂಜನಾ ತಮ್ಮ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ ಮತ್ತೊಮ್ಮೆ ಹೊಸ ಜೀವನ ಪ್ರಾರಂಭ ಮಾಡಲಿ. […]

KUSHAL V

|

Sep 19, 2020 | 6:07 PM

ಬೆಂಗಳೂರು: ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ನೂರಕ್ಕೆ ನೂರು ಸತ್ಯ. ನಟಿ ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ನಮ್ಮ ಮದರಸಾದಲ್ಲೇ ಎಂದು ನಗರದ ಟ್ಯಾನರಿ ರೋಡ್​ನಲ್ಲಿರುವ ದಾರುಲ್ ಉಲೂಮ್ ಶಾಹ್ ವಲಿಯುಲ್ಲಾ ಮದರಸಾದ ಮೌಲಾನಾ ಜೈನುಲ್ ಅಬ್ಬಿದ್ದೀನಿ ಸ್ಪಷ್ಟನೆ ನೀಡಿದ್ದಾರೆ. ಸಂಜನಾ ಗಲ್ರಾನಿ ನಾನು ಇಸ್ಲಾಂ ಧರ್ಮವನ್ನು ಇಷ್ಟಪಟ್ಟು ಸ್ವೀಕರಿಸುತ್ತಿದ್ದೇನೆ ಅಂತಾ ಹೇಳಿದ್ದರು. ನಾನು ದೇವರ ಬಳಿ ಪ್ರಾರ್ಥನೆ ಮಾಡುತ್ತೇನೆ. ಸಂಜನಾ ತಮ್ಮ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ ಮತ್ತೊಮ್ಮೆ ಹೊಸ ಜೀವನ ಪ್ರಾರಂಭ ಮಾಡಲಿ. ಅದನ್ನು ಅಲ್ಲಾಹು ಕ್ಷಮಿಸುತ್ತಾರೆ ಎಂದು ಮೌಲಾನಾ ಜೈನುಲ್ ಅಬ್ಬಿದ್ದೀನಿ ಹೇಳಿದ್ದಾರೆ.

ಹಿಂದಿ ನಟ ದಿಲೀಪ್ ಕುಮಾರ್​ರ ಮೂಲ ಹೆಸರು ಮಹಮ್ಮದ್ ಯೂಸುಫ್. ಆದರೆ ಅವರು ದಿಲೀಪ್ ಕುಮಾರ್ ಎಂಬ ಹೆಸರಿನಿಂದ ಫೇಮಸ್ ಆಗಿದ್ರು. ಹಾಗಾಗಿ ಸಂಜನಾ ಮಹೀರಾ ಎಂದು ಹೇಳಿಕೊಳ್ಳದೆ ಇರುವುದು ಸಮಸ್ಯೆ ಅಲ್ಲ ಎಂದು ಮೌಲಾನಾ ಸ್ಪಷ್ಟನೆ ನೀಡಿದ್ದಾರೆ.

ಸಂಜನಾ ಮದುವೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಇಸ್ಲಾಂನಲ್ಲಿ ದಂಧೆ ಮಾಡುವುದು ತಪ್ಪು. ಅದನ್ನು ಬಿಟ್ಟು ಬಂದ್ರೆ ನಾವು ಅವರನ್ನು ಮುಸ್ಲಿಂ ಎಂದೇ ಸ್ವೀಕರಿಸುತ್ತೆವೆ. ನಾನು ಜೈಲ್​ಗೆ ಅವರನ್ನು ಭೇಟಿ ಆಗಲು ಹೋಗಲ್ಲ. ಹಾಗೆ ಹೋಗುವ ಹಾಗಿಲ್ಲ. ನಾನು ತಪ್ಪು ಮಾಡಿದ್ದೀನಿ ಅಂತಾ ಸಂಜನಾ ಅಲ್ಲಾಹುವಿನ ಬಳಿ ಬೇಡಿಕೊಂಡ್ರೆ ಮತ್ತೆ ಅವರಿಗೆ ಅಲ್ಲಾಹು ಅವಕಾಶ ಕೊಡ್ತಾರೆ ಎಂದು ದಾರುಲ್ ಉಲೂಮ್ ಶಾಹ್ ವಲಿಯುಲ್ಲಾ ಮದರಾಸದ ಮೌಲಾನಾ ಜೈನುಲ್ ಅಬ್ಬಿದ್ದೀನಿ ಹೇಳಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada