‘ಎಂಆರ್’ ಟೈಟಲ್ನಲ್ಲಿ ತೆರೆ ಮೇಲೆ ಬರಲಿದೆ ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪರೈ ಜೀವನಾಧಾರಿತ ಸಿನಿಮಾ..
ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪರೈ ಜೀವನಾಧಾರಿತ ಸಿನಿಮಾವೊಂದು ತೆರೆಗೆ ಅಪ್ಪಳಿಸಲು ಸಿದ್ಧವಾಗುತ್ತಿದೆ. ಮುತ್ತಪ್ಪ ರೈ ಕುರಿತು ಚಿತ್ರವೊಂದನ್ನ ಮಾಡಲು ನಿರ್ದೇಶಕ ರವಿ ಶ್ರೀವತ್ಸ ಮುಂದಾಗಿದ್ದಾರೆ.
ರಾಮನಗರ: ಮಾಜಿ ಡಾನ್, ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಜೀವನಾಧಾರಿತ ಚಿತ್ರವೊಂದು ತೆರೆಮೆಲೆ ಬರೋಕೆ ಸಿದ್ಧವಾಗ್ತಿದೆ. ಒಂದಾನೊಂದು ಕಾಲದ ಭೂಗತ ಲೋಕದ ಡಾನ್ ಮುತ್ತಪ್ಪರೈ ಬೆಂಗಳೂರು, ಮಂಗಳೂರು, ಮುಂಬೈನಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಇದೀಗ ಮುತ್ತಪ್ಪ ಜೀವನಾಧಾರಿತ ಸಿನಿಮಾ ಮಾಡಲು ನಿರ್ದೇಶಕ ರವಿ ಶ್ರೀವತ್ಸ ಮುಂದಾಗಿದ್ದಾರೆ. ‘ಎಂಆರ್’ ಟೈಟಲ್ನಲ್ಲಿ 3 ಭಾಗವಾಗಿ ಚಿತ್ರ ನಿರ್ಮಿಸಲು ರವಿ ಹೊರಟಿದ್ದಾರೆ.
ಚಿತ್ರಕ್ಕೆ ಶೋಭಾ ರಾಜಣ್ಣ ನಿರ್ಮಾಪಕರಾಗಿದ್ದು, ಪುತ್ರ ದೀಕ್ಷಿತ್ ನಾಯಕನಾಗಿ ಅಭಿನಯಿಸಲಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಹೊಸಮುಖಗಳು ಇರಲಿವೆಯಂತೆ. ಗುರುಕಿರಣ್ ಅವರ ಮ್ಯೂಸಿಕ್, ಜೊತೆಗೆ ವಿಕ್ರಮ್ರ ಸಾಹಸ ಚಿತ್ರಕ್ಕೆ ಇರಲಿದೆ. ಈಗಾಗಲೇ ರಾಮನಗರ ತಾಲೂಕಿನ ಶಿಲ್ದಾಂದರ್ನಲ್ಲಿ ಚಿತ್ರದ ಫೋಟೊ ಶೂಟ್ ನಡೆಸಲಾಗಿದೆ.
ಇನ್ನು ಚಿತ್ರಕ್ಕಾಗಿ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ಸಾಮಾನ್ಯರಿಗೆ ತಿಳಿದಿರದ ಹಲವಾರು ಸಂಗತಿಗಳನ್ನ ತೆರೆಮೇಲೆ ತರಲು ನಿರ್ದೇಶಕ ರವಿ ಶ್ರೀವತ್ಸ ಕತೆ ಸಿದ್ಧಪಡಿಸಿದ್ದಾರೆ. ಹೀಗಾಗಿ ಚಿತ್ರ ಚಿತ್ರೀಕರಣಕ್ಕೂ ಮೊದಲೇ ಸಾಕಷ್ಟು ಕುತೂಹಲ ಮೂಡಿಸಿದೆ.
ಒಟ್ನಲ್ಲಿ ಮತ್ತೊಂದು ಭೂಗತ ಲೋಕದ ಸಿನಿಮಾಗೆ ಸ್ಯಾಂಡಲ್ವುಡ್ ಸಜ್ಜಾಗಿದೆ. ಈಬಾರಿ ಭೂಗತ ಲೋಕದ ದೊರೆ ಮುತ್ತಪ್ಪ ರೈ ಸಿನಿಮಾ ತೆರೆಗೆ ಅಪ್ಪಳಿಸಲು ಸಜ್ಜಾಗಿದ್ದು, ಸಿನಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.