ಭಾರೀ ಡ್ರಗ್ಸ್​ ಜಾಲ ಪತ್ತೆ: ಸ್ಯಾಂಡಲ್​ವುಡ್​ನ ಕೆಲ ನಟ-ನಟಿಯರ ಮೇಲೆ NCB ಕಣ್ಣು

ಭಾರೀ ಡ್ರಗ್ಸ್​ ಜಾಲ ಪತ್ತೆ: ಸ್ಯಾಂಡಲ್​ವುಡ್​ನ ಕೆಲ ನಟ-ನಟಿಯರ ಮೇಲೆ NCB ಕಣ್ಣು

ಬೆಂಗಳೂರು: ಸಿಲಿಕಾನ್​ ಸಿಟಿ ಖ್ಯಾತಿಯ ರಾಜಧಾನಿ ಬೆಂಗಳೂರು, ಡ್ರಗ್ಸ್​ ರಾಜಧಾನಿ ಎಂಬ ಅಪಖ್ಯಾತಿಗೆ ಒಳಗಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ NCB ಹಾಗೂ CCB ಅಧಿಕಾರಿಗಳಿಂದ ನಗರದಲ್ಲಿ ಮಹತ್ತರ ದಾಳಿಗಳು ನಡೆದಿದ್ದು ಬೃಹತ್​ ಮಾದಕ ವಸ್ತುಗಳ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಕಲ್ಯಾಣ ನಗರದಲ್ಲಿರುವ ರಾಯಲ್ ಸೂಟ್ಸ್ ಹೋಟೆಲ್​ ಅಪಾರ್ಟ್‌ಮೆಂಟ್ ಮೇಲೆ NCB ತಂಡವು ದಾಳಿ ನಡೆಸಿದ್ದು ಅಪಾರ ಪ್ರಮಾಣದಲ್ಲಿ LSD ಮತ್ತು MDMA ಮಾದಕ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಕಾ D, ಅನೂಪ್​ ಹಾಗೂ […]

KUSHAL V

| Edited By: sadhu srinath

Aug 27, 2020 | 1:33 PM

ಬೆಂಗಳೂರು: ಸಿಲಿಕಾನ್​ ಸಿಟಿ ಖ್ಯಾತಿಯ ರಾಜಧಾನಿ ಬೆಂಗಳೂರು, ಡ್ರಗ್ಸ್​ ರಾಜಧಾನಿ ಎಂಬ ಅಪಖ್ಯಾತಿಗೆ ಒಳಗಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ NCB ಹಾಗೂ CCB ಅಧಿಕಾರಿಗಳಿಂದ ನಗರದಲ್ಲಿ ಮಹತ್ತರ ದಾಳಿಗಳು ನಡೆದಿದ್ದು ಬೃಹತ್​ ಮಾದಕ ವಸ್ತುಗಳ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಕಲ್ಯಾಣ ನಗರದಲ್ಲಿರುವ ರಾಯಲ್ ಸೂಟ್ಸ್ ಹೋಟೆಲ್​ ಅಪಾರ್ಟ್‌ಮೆಂಟ್ ಮೇಲೆ NCB ತಂಡವು ದಾಳಿ ನಡೆಸಿದ್ದು ಅಪಾರ ಪ್ರಮಾಣದಲ್ಲಿ LSD ಮತ್ತು MDMA ಮಾದಕ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ.

ಜೊತೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಕಾ D, ಅನೂಪ್​ ಹಾಗೂ ರಾಜೇಶ್ ಎಂಬು ಮೂವರು ಆರೋಪಿಗಳನ್ನು ಸಹ NCB ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ 180 LSD, 145 MDMA ಮಾದಕ ಮಾತ್ರೆಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಇಡೀ ದಂಧೆಗೆ ಅನಿಕಾ D ರೂವಾರಿಯಾಗಿದ್ದಾಳೆ ಎಂಬ ಮಾಹಿತಿ ನೀಡಿದ್ದಾರೆ. ವಶಕ್ಕೆ ಪಡೆದ ಮಾದಕ ವಸ್ತುಗಳ ಮೌಲ್ಯವನ್ನು ಬರೋಬ್ಬರಿ ಎರಡು ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಡ್ರಗ್ಸ್ ದಂಧೆಗೆ ಸ್ಯಾಂಡಲ್‌ವುಡ್ ನಟ, ನಟಿಯರೇ ಗ್ರಾಹಕರು! ಡ್ರಗ್ಸ್​ ಜಾಲ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಸ್ಫೋಟಕ ಮಾಹಿತಿ ಬಯಲಾಗಿದೆ. ಹೌದು, ಇದೀಗ ಡ್ರಗ್ಸ್ ದಂಧೆಗೆ ಸ್ಯಾಂಡಲ್‌ವುಡ್​ನ ಕೆಲ ನಟ ಮತ್ತು ನಟಿಯರೇ ಗ್ರಾಹಕರು ಎಂದು ತಿಳಿದುಬಂದಿದೆ.

ಅದರಲ್ಲೂ, ಸ್ಯಾಂಡಲ್‌ವುಡ್ ನಟರು ಹಾಗೂ ಸಂಗೀತ ನಿರ್ದೇಶಕರೇ ಈ ಮಾದಕ ವಸ್ತುಗಳಿಗೆ ನಿತ್ಯ ಗ್ರಾಹಕರು ಎಂದು NCB ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿ ಅನಿಕಾಳ ವಿಚಾರಣೆ ವೇಳೆ ಈ ರಹಸ್ಯ ಬಯಲಾಗಿದ್ದು ಈ ಜಾಲದಲ್ಲಿ ಯಾಱರು ಭಾಗಿಯಾಗಿದ್ದಾರೆಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ.

CCB ಅಧಿಕಾರಿಗಳಿಂದ 204 ಕೆ.ಜಿ. ಗಾಂಜಾ ವಶ ಇತ್ತ ನಗರದಲ್ಲಿ CCBಅಧಿಕಾರಿಗಳಿಂದ 204 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ದೇವನಹಳ್ಳಿ ಬಳಿ ಗಾಂಜಾ ಸಾಗಿಸುತ್ತಿದ್ದ ಕೈಸರ್, ಸಮೀರ್ ಇಸ್ಮಾಯಿಲ್ ಎಂಬ ಆರೋಪಿಗಳನ್ನು ಸಹ ಸೆರೆಹಿಡಿದಿದ್ದಾರೆ.

ಆರೋಪಿಗಳು ನೆರೆಯ ಆಂಧ್ರದ ಗ್ರಾಮವೊಂದರಿಂದ ಗಾಂಜಾ ತರುತ್ತಿದ್ದರು. ಇದನ್ನು ಕಾಲೇಜು ವಿದ್ಯಾರ್ಥಿಗಳಿಗೆ ನೆಟ್​ವರ್ಕ್ ಮೂಲಕ ಸರಬರಾಜು ಮಾಡುತ್ತಿದ್ದು ಇದಕ್ಕಾಗಿ ದೊಡ್ಡ ನೆಟ್​ವರ್ಕ್ ಸಹ ಮಾಡಿಕೊಂಡಿದ್ದರು. 2 ಲಕ್ಷ ಜನರಿಗೆ ಡೋಸ್ ಕೊಡಬಹುದಾದ ಗಾಂಜಾ ಇದಾಗಿದ್ದು 20 ದಿನಗಳಿಂದ ಹೊಂಚು ಹಾಕಿ ಆರೋಪಿಗಳನ್ನ ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada