‘ನಮ್ಮಲ್ಲಿ ಬೆಳಗಾದ್ರೆ Drugs ಬೇಕು ಅನ್ನೋರು ಯಾರೂ ಇಲ್ಲ’
ಬೆಂಗಳೂರು: NCB ಅಧಿಕಾರಿಗಳು ನಡೆಸಿದೆ ದಾಳಿ ವೇಳೆ ಪತ್ತೆಯಾದ ಮಾದಕ ವಸ್ತುಗಳ ಜಾಲಕ್ಕೂ ಕನ್ನಡ ಚಿತ್ರರಂಗಕ್ಕೂ ನಂಟಿರುವ ಮಾಹಿತಿ ಕೇಳಿಬಂದಿತ್ತು. ಈ ವಿಷಯವಾಗಿ ಸ್ಯಾಂಡಲ್‌ವುಡ್‌ನ ಹಲವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಸ್ಯಾಂಡಲ್‌ವುಡ್ ಮತ್ತು ಬಾಲಿವುಡ್ ಅಂತಾ ಬೇರೆ ಇಲ್ಲ. ಎಲ್ಲಾ ಸಿನಿಮಾರಂಗವೂ ಒಂದೇ ಎಂದು ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ ಮಾಫಿಯಾ ಅನ್ನೋದು ನಾವು ನೋಡಿಲ್ಲ. ಆದರೆ, ಇತ್ತೀಚೆಗೆ ಯುವಕರು ಡ್ರಗ್ಸ್ ಮಾಫಿಯಾಗೆ ಬಲಿಯಾಗ್ತಿದ್ದಾರೆ. ಅದು ನಿಲ್ಲಬೇಕು ಎಂದು ಅಂಬರೀಶ್ […]
ಬೆಂಗಳೂರು: NCB ಅಧಿಕಾರಿಗಳು ನಡೆಸಿದೆ ದಾಳಿ ವೇಳೆ ಪತ್ತೆಯಾದ ಮಾದಕ ವಸ್ತುಗಳ ಜಾಲಕ್ಕೂ ಕನ್ನಡ ಚಿತ್ರರಂಗಕ್ಕೂ ನಂಟಿರುವ ಮಾಹಿತಿ ಕೇಳಿಬಂದಿತ್ತು. ಈ ವಿಷಯವಾಗಿ ಸ್ಯಾಂಡಲ್‌ವುಡ್‌ನ ಹಲವರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಯಾಂಡಲ್‌ವುಡ್ ಮತ್ತು ಬಾಲಿವುಡ್ ಅಂತಾ ಬೇರೆ ಇಲ್ಲ. ಎಲ್ಲಾ ಸಿನಿಮಾರಂಗವೂ ಒಂದೇ ಎಂದು ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ ಮಾಫಿಯಾ ಅನ್ನೋದು ನಾವು ನೋಡಿಲ್ಲ. ಆದರೆ, ಇತ್ತೀಚೆಗೆ ಯುವಕರು ಡ್ರಗ್ಸ್ ಮಾಫಿಯಾಗೆ ಬಲಿಯಾಗ್ತಿದ್ದಾರೆ. ಅದು ನಿಲ್ಲಬೇಕು ಎಂದು ಅಂಬರೀಶ್ ಸಮಾಧಿಗೆ ಭೇಟಿ ಕೊಟ್ಟ ವೇಳೆ ಪ್ರತಿಕ್ರಿಯಿಸಿದ್ದಾರೆ.
ಇತ್ತ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ನಟ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನನಗೆ ಗೊತ್ತಿರುವಂತೆ ಅಂಥವರು ಯಾರೂ ಇಲ್ಲ ಎಂದು ಹೇಳಿದ್ದಾರೆ. ನಮ್ಮಲ್ಲಿ ಬೆಳಗಾದ್ರೆ ಡ್ರಗ್ಸ್ ಬೇಕು ಅನ್ನುವವರು ಯಾರೂ ಇಲ್ಲ. ಬೇರೆ ಚಿತ್ರರಂಗಗಳಲ್ಲಿ ಈ ರೀತಿ ಸುದ್ದಿ ಆಗಿದೆ. ಆದ್ರೆ ನಮ್ಮಲ್ಲಿ ಅಂಥವರು ಇಲ್ಲ ಎಂದು ನಟ ಅಂಬರೀಶ್ ಸಮಾಧಿಗೆ ಭೇಟಿ ಕೊಟ್ಟ ವೇಳೆ ಹೇಳಿದ್ದಾರೆ.
Published On - 5:33 pm, Thu, 27 August 20