Amrutha Prem: ಚಿತ್ರರಂಗಕ್ಕೆ ‘ನೆನಪಿರಲಿ’ ಪ್ರೇಮ್​ ಪುತ್ರಿ ಎಂಟ್ರಿ; ಡಾಲಿ ನಿರ್ಮಾಣದ ಸಿನಿಮಾದಲ್ಲಿ ಅಮೃತಾ ನಟನೆ

Nenapirali Prem | Amrutha Prem: ‘ಲವ್ಲಿ ಸ್ಟಾರ್​’ ಪ್ರೇಮ್​ ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಅವರ ಮಗಳು ಅಮೃತಾ ಪ್ರೇಮ್​ ಕೂಡ ಚಂದನವನದ ಹಾದಿ ಹಿಡಿದಿದ್ದಾರೆ. ನಟ ನಾಗಭೂಷಣ್​ ಅವರು ‘ಟಗರು ಪಲ್ಯ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಡಾಲಿ ಧನಂಜಯ್​ ಬಂಡವಾಳ ಹೂಡುತ್ತಿರುವ ಈ ಚಿತ್ರಕ್ಕೆ ಉಮೇಶ್​ ಕೆ. ಕೃಪ ನಿರ್ದೇಶನ ಮಾಡುತ್ತಿದ್ದಾರೆ.

Amrutha Prem: ಚಿತ್ರರಂಗಕ್ಕೆ ‘ನೆನಪಿರಲಿ’ ಪ್ರೇಮ್​ ಪುತ್ರಿ ಎಂಟ್ರಿ; ಡಾಲಿ ನಿರ್ಮಾಣದ ಸಿನಿಮಾದಲ್ಲಿ ಅಮೃತಾ ನಟನೆ
ಅಮೃತಾ - ಪ್ರೇಮ್
Edited By:

Updated on: Oct 14, 2026 | 4:28 PM

ಸಿನಿಮಾ ಸೆಲೆಬ್ರಿಟಿಗಳ ಮಕ್ಕಳು ಬಣ್ಣದ ಲೋಕಕ್ಕೆ ಕಾಲಿಡುವುದು ಸಹಜ. ಕನ್ನಡ ಚಿತ್ರರಂಗದ ನಟ-ನಟಿಯರು ಮಕ್ಕಳು ಕೂಡ ಒಬ್ಬೊಬ್ಬರಾಗಿಯೇ ಬಣ್ಣದ ಬದುಕು ಆರಂಭಿಸುತ್ತಿದ್ದಾರೆ. ಕೆಲವೇ ತಿಂಗಳ ಹಿಂದೆ ನಟಿ ಮಾಲಾಶ್ರೀ ಅವರ ಮಗಳು ಚೊಚ್ಚಲ ಸಿನಿಮಾ ಒಪ್ಪಿಕೊಂಡಿದ್ದರ ಬಗ್ಗೆ ಸುದ್ದಿ ಆಗಿತ್ತು. ಈಗ ‘ನೆನಪಿರಲಿ’ ಪ್ರೇಮ್​ (Nenapirali Prem) ಅವರ ಮಗಳು ಅಮೃತಾ ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಮೊದಲು ಅನೇಕ ಫೋಟೋಶೂಟ್​ ಮೂಲಕ ಅಮೃತಾ ಪ್ರೇಮ್​ (Amrutha Prem) ಗಮನ ಸೆಳೆದಿದ್ದರು. ಈಗ ಅವರು ದೊಡ್ಡ ಪರದೆಯಲ್ಲಿ ಮಿಂಚಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರಿಗೆ ಸ್ಯಾಂಡಲ್​ವುಡ್​ ತಾರೆಯರು ಮತ್ತು ಸಿನಿಪ್ರಿಯರು ಸ್ವಾಗತ ಕೋರುತ್ತಿದ್ದಾರೆ. ಅಂದಹಾಗೆ, ಅಮೃತಾ ಪ್ರೇಮ್​ ನಟಿಸುತ್ತಿರುವುದು ಡಾಲಿ ಧನಂಜಯ್​ ನಿರ್ಮಾಣದ ‘ಟಗರು ಪಲ್ಯ’ (Tagaru Palya) ಸಿನಿಮಾದಲ್ಲಿ ಎಂಬುದು ವಿಶೇಷ.

ನಟ ನಾಗಭೂಷಣ್​ ಅವರು ‘ಟಗರು ಪಲ್ಯ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಡಾಲಿ ಧನಂಜಯ್​ ಬಂಡವಾಳ ಹೂಡುತ್ತಿರುವ ಈ ಚಿತ್ರಕ್ಕೆ ಉಮೇಶ್​ ಕೆ. ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಅಮೃತಾ ಪ್ರೇಮ್​ ಅವರ ಹೊಸ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಅವರನ್ನು ಚಿತ್ರತಂಡಕ್ಕೆ ಸ್ವಾಗತಿಸಲಾಗಿದೆ. ಈ ಪೋಸ್ಟರ್​ನಲ್ಲಿ ಹಳ್ಳಿ ಹುಡುಗಿಯ ಗೆಟಪ್​ನಲ್ಲಿ ಅಮೃತಾ ಪ್ರೇಮ್​ ಕಾಣಿಸಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ‘ನೆನಪಿರಲಿ’ ಪ್ರೇಮ್​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಅವರ ಮಕ್ಕಳು ಚಂದನವನದ ಹಾದಿ ಹಿಡಿದಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಗುರು ಶಿಷ್ಯರು’ ಸಿನಿಮಾದಲ್ಲಿ ಪ್ರೇಮ್​ ಪುತ್ರ ಏಕಾಂತ್​ ನಟಿಸಿದ್ದರು. ಈಗ ಅಮೃತಾ ಪ್ರೇಮ್​ ಸರದಿ. ‘ಟಗರು ಪಲ್ಯ’ ಚಿತ್ರದಲ್ಲಿ ಅವರ ಪಾತ್ರ ಹೇಗೆ ಮೂಡಿಬರಲಿದೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.

ಇದನ್ನೂ ಓದಿ
ಜನ್ಮದಿನದಂದು ‘ಡಾಲಿ’ ಧನಂಜಯ್ ಹೊಸ ಘೋಷಣೆ; ಹೊಸ ಪ್ರತಿಭೆಗಳಿಗೆ ಸಿಗಲಿದೆ ಅವಕಾಶ
Rachita Ram: ಡಾಲಿ ಧನಂಜಯ್​ ಅಣ್ಣನ ಮಗಳಿಗೆ ರಚಿತಾ ಹೆಸರು; ಆ ಘಟನೆ ನೆನೆದ ‘ಡಿಂಪಲ್​ ಕ್ವೀನ್​’
ಡಾಲಿ ಧನಂಜಯ್​-ಅಮೃತಾ ಅಯ್ಯಂಗಾರ್​ ನಡುವೆ ಏನು ನಡೆಯುತ್ತಿದೆ? ನೇರ ಉತ್ತರ ನೀಡಿದ ನಟಿ
ಅಪರಿಚಿತರ ಪೋಸ್ಟ್​ ನಂಬಿ ಮೋಸ ಹೋಗ್ಬೇಡಿ ಎಂದ ನಟ

ನಟನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಡಾಲಿ ಧನಂಜಯ್​ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರ ‘ಡಾಲಿ ಪಿಕ್ಚರ್ಸ್​’ ಬ್ಯಾನರ್​ ಮೂಲಕ ಡಿಫರೆಂಟ್​ ಸಿನಿಮಾಗಳು ಮೂಡಿಬರುತ್ತಿವೆ. ಒಳ್ಳೆಯ ತಂಡದ ಜೊತೆಗೆ ತಮ್ಮ ಮಗಳು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿರುವುದಕ್ಕೆ ಪ್ರೇಮ್​ ಅವರಿಗೆ ಖುಷಿ ಇದೆ. ನಟನೆ ಜೊತೆಗೆ ವಿದ್ಯಾಭ್ಯಾಸವನ್ನೂ ಅಮೃತಾ ಮುಂದುವರಿಸಲಿದ್ದಾರೆ. ಈ ಚಿತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಪಾತ್ರದ ಸಲುವಾಗಿ ವರ್ಕ್​ಶಾಪ್​ನಲ್ಲಿ ಭಾಗಿ ಆಗಿದ್ದಾರೆ.

ಶೀಘ್ರದಲ್ಲೇ ‘ಟಗರು ಪಲ್ಯ’ ಸಿನಿಮಾದ ಶೂಟಿಂಗ್​ ಆರಂಭ ಆಗಲಿದೆ. ಹಳ್ಳಿ ಪರಿಸರದಲ್ಲಿ ಚಿತ್ರದ ಕಥೆ ಸಾಗಲಿದೆ. ತಾರಾ ಅನುರಾಧಾ, ರಂಗಾಯಣ ರಘು ಮುಂತಾದ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:01 pm, Mon, 28 November 22

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us