‘ಆಪರೇಶನ್​ ಡಿ’ ಸಿನಿಮಾಕ್ಕೆ ವಿಎಫ್​ಎಕ್ಸ್​ ಕಾರ್ಯ ಆರಂಭ; ಶೀಘ್ರದಲ್ಲೇ ಬರಲಿದೆ ಟ್ರೇಲರ್​

‘ಆಪರೇಶನ್​ ಡಿ’ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ವೇದಿಕಾ ಹಾಗೂ ದ್ವೈಪಾಯನ‌ ಸಿಂಗ್ ಅವರು ಸಂಗೀತ ನೀಡಿದ್ದಾರೆ. ಈ ಚಿತ್ರಕ್ಕೆ ಪೋಸ್ಟ್​ ಪ್ರೊಡಕ್ಷನ್​ ಕಾರ್ಯ ಪ್ರಗತಿಯಲ್ಲಿದೆ.

‘ಆಪರೇಶನ್​ ಡಿ’ ಸಿನಿಮಾಕ್ಕೆ ವಿಎಫ್​ಎಕ್ಸ್​ ಕಾರ್ಯ ಆರಂಭ; ಶೀಘ್ರದಲ್ಲೇ ಬರಲಿದೆ ಟ್ರೇಲರ್​
ಆಪರೇಷನ್ ಡಿ ಸ್ಟಿಲ್​

Updated on: May 19, 2023 | 7:54 PM

ಅದ್ವಿತ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಭಾರ್ಗವಿ ತಿರುಮಲೇಶ್ ಹಾಗೂ ರಂಗನಾಥ್ ಬಿ. ಅವರು ನಿರ್ಮಿಸಿರುವ ‘ಆಪರೇಶನ್ ಡಿ’ (Operation D) ಚಿತ್ರಕ್ಕೆ ಡಬ್ಬಿಂಗ್ ಕೆಲಸ ಮುಗಿದಿದೆ. ಸಂಗೀತ ಸಂಯೋಜನೆ ಕಾರ್ಯವೂ ಪೂರ್ಣಗೊಂಡಿದೆ. ಈಗ VFX ಕೆಲಸ ಆರಂಭವಾಗಿದೆ. ಶೀಘ್ರದಲ್ಲೇ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ಕನ್ನಡದ ಹಲವಾರು ಸಿನಿಮಾಗಳಲ್ಲಿ (Kannada Movies) ನಟಿಸಿದ್ದ ತಿರುಮಲೇಶ್ ವಿ. ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಅವರೇ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಕಾರ್ಯಕಾರಿ ನಿರ್ಮಾಪಕ ಹಾಗೂ ಕ್ರಿಯೇಟಿವ್ ಹೆಡ್ ಆಗಿ ಸುರೇಶ್ .ಬಿ. ಕಾರ್ಯ ನಿರ್ವಹಿಸಿದ್ದಾರೆ. ತಿರಮಲೇಶ್ ಅವರು ರಾಜ ರವಿಶಂಕರ್, ಸಿದ್ದರಾಜು, ಪ್ರಶಾಂತ್ ಜೊತೆಗೂಡಿ ಸಂಭಾಷಣೆ ಬರೆದಿದ್ದಾರೆ.

ವೇದಿಕಾ ಹಾಗೂ ದ್ವೈಪಾಯನ‌ ಸಿಂಗ್ ಅವರು ‘ಆಪರೇಶನ್​ ಡಿ’ ಸಿನಿಮಾದ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕೆಂಪಗಿರಿ ಒಂದು ಹಾಡು ಹಾಗೂ ವೇದಿಕಾ ಅವರು ಉಳಿದ ಎಲ್ಲಾ ಹಾಡುಗಳನ್ನು ರಚಿಸಿದ್ದಾರೆ. ಅನಿರುದ್ಧ್ ಶಾಸ್ತ್ರಿ ಮೊದಲ ಬಾರಿಗೆ ಚಿತ್ರದ ನಾಲ್ಕು ಹಾಡುಗಳನ್ನು ಹಾಡಿದ್ದಾರೆ. ಜೊತೆಗೆ ವೇದಿಕಾ ಹಾಗೂ ಪೃಥ್ವಿ ಭಟ್ ಸಾಥ್ ನೀಡಿದ್ದಾರೆ.

ಇದನ್ನೂ ಓದಿ: Richiee Movie Song: ‘ರಿಚ್ಚಿ’ ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಲು ಬಂದ ಕುನಾಲ್​ ಗಾಂಜಾವಾಲ

ಕಾರ್ತಿಕ್ ಪ್ರಸಾದ್ ಛಾಯಾಗ್ರಹಣ, ವಿಕ್ರಮ್ ಶ್ರೀಧರ್ ಸಂಕಲನ ಹಾಗೂ ತರ್ಮಾಕೋಲ್ ಶ್ರೀನಿವಾಸ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕೆ ಇದೆ. ಈ ಚಿತ್ರದ ನೃತ್ಯ ನಿರ್ದೇಶಕರು. ಸುಹಾಸ್ ಆತ್ರೇಯ, ರುದ್ರೇಶ್ ಬೂದನೂರು ಈ ಚಿತ್ರದ ನಾಯಕರಾಗಿ ನಟಿಸಿದ್ದು, ನಾಯಕಿಯರಾಗಿ ಸ್ನೇಹ ಭಟ್, ಇಂಚರಾ ಬಿ. ಚನ್ನಪ್ಪ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಮಲ್ಟಿಪ್ಲೆಕ್ಸ್​ನಲ್ಲಿ ಮತ್ತೆ 99 ರೂ.ಆಫರ್; ಯಾವಾಗಿನಿಂದ, ಯಾವ ಸಿನಿಮಾಗಳಿಗೆ? ಇಲ್ಲಿದೆ ವಿವರ

ಶಿವಮಂಜು, ವೆಂಕಟಾಚಲ, ಜೂ ನರಸಿಂಹರಾಜು, ಮಹೇಶ್ ಎಸ್. ಕಲಿ, ರಂಗನಾಥ ಬಿ., ಶ್ರೀಧರ್ ಟಿ.ಎಸ್., ಸುರೇಶ್ ಬಿ., ಸಂಚಯ ನಾಗರಾಜ್, ಕಿರಣ್ ಈಡಿಗ, ರವಿಶಂಕರ್, ಶಿವಾನಂದ, ಸೂರ್ಯವಂಶಿ, ನಂಜಪ್ಪ ಎಸ್. ದೊಡ್ಡಮದುರೆ ಆರ್.ಜೆ. ಧೀರಜ್, ಪೃಥ್ವಿ ಬನವಾಸಿ, ಆಶಾ, ರೂಪಾ ಆರ್, ಧನಲಕ್ಷ್ಮೀ, ಕಿರಣ್, ನಾಗರಾಜ್ ದಾವಣಗೆರೆ, ಸಂತೋಷ್, ನಾಗರಾಜ್ ಕೀಲಗೆರೆ, ಖಾದರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us