ಬೆಂಗಳೂರು: ನಾನು ಮಾಂಸಾಹಾರವನ್ನು ತಿನ್ನುವುದನ್ನು ಬಿಡುತ್ತೇನೆ. ಹೊಸ ವರ್ಷಕ್ಕೆ ಹೊಸ ಸಂಕಲ್ಪ ಮಾಡುತ್ತಿದ್ದೇನೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಮೋಹಕ ತಾರೆ ರಮ್ಯಾ ಹೇಳಿಕೊಂಡಿದ್ದಾರೆ.
ಬಿಗ್ ಸ್ಕ್ರೀನ್ನಿಂದ ಮಾಯವಾದ ಬಳಿಕ ರಮ್ಯಾ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಆ್ಯಕ್ಟಿವ್ ಆಗಿದ್ದರು. ಇದೀಗ, ಮಾಂಸಾಹಾರವು ನಮ್ಮ ಮಾಂಸ ಖಂಡಕ್ಕೆ ಶಕ್ತಿ ನೀಡುತ್ತದೆ. ಆದರೆ ಅದರಲ್ಲಿ ನನಗೆ ನಂಬಿಕೆ ಇಲ್ಲ. ಹಾಗಾಗಿ ಇನ್ನು ಮುಂದೆ ನಾನು ಮಾಂಸಾಹಾರವನ್ನು ತ್ಯಜಿಸುತ್ತೇನೆ. ಇನ್ನು ಮುಂದೆ ನಾನು ಸಸ್ಯಹಾರಿ. 2021ರ ಹೊಸ ವರ್ಷಕ್ಕೆ ನನ್ನ ಸಂಕಲ್ಪವಿದು ಎಂದು ಬರೆದು ಕೊಂಡಿದ್ದಾರೆ.
ಅಭಿಮಾನಿಗಳು ರೀಲ್ ರಮ್ಯಾನ್ನ ನೋಡಿದ್ದೀರಿ.. ಆದ್ರೆ ರಿಯಲ್ ರಮ್ಯಾ ಹೇಗಿದ್ದಾರೆ ಗೊತ್ತಾ!?
Published On - 1:26 pm, Wed, 30 December 20